ಸಾರಾಂಶ
ವಿಶ್ವ ಶ್ರವಣದೋಷ ದಿನ ಕಾರ್ಯಕ್ರಮದಲ್ಲಿ ಕಿವಿ ಆರೈಕೆಯಪೋಸ್ಟರ್ ಬಿಡುಗಡೆ ಮಾಡಲಾಯಿತು.
ವಿಶ್ವ ಶ್ರವಣದೋಷ ಕಾರ್ಯಕ್ರಮದಲ್ಲಿ ಡಿಎಚ್‍ಒ ಡಾ.ರೇಣುಪ್ರಸಾದ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶ್ರ ವಣ ದೋಷ ಪರೀಕ್ಷಿಸುವ ಸುಲಭ ಸಾಧನ ಲಭ್ಯವಿದೆ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.ನಗರದ ಜಿಲ್ಲಾ ಅರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಆಶಾ ಕಾರ್ಯಕರ್ತೆಯರು ಮತ್ತು ಸಮುದಾಯದವರಿಗೆ ಆಯೋಜಿಸಿದ್ದ ವಿಶ್ವ ಶ್ರವಣದೋಷ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರ ಮಟ್ಟದಲ್ಲಿ ತಾಯಂದಿರ ಸಭೆಗಳಲ್ಲಿ ಮತ್ತು ಸಾರ್ವಜನಿಕರಿಗೆ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣೆ ಬಗ್ಗೆ ಮಾಹಿತಿ ನೀಡುವ ಮೂಲಕ ಶ್ರವಣದೋಷಕ್ಕೆ ಕಡಿವಾಣ ಹಾಕಬೇಕು. ಕಿವಿ ಕೇಳಿಸದವರಿಗೆ ಕಿವಿಯೊಳಗೆ ಕಾಕ್ಲಿಯರ್ ಇಂಪ್ಲಾಂಟ್ (ಕಿವಿ ಕೇಳಿಸುವ ಮಿಷನ್) ಅಳವಡಿಸಲಾಗುತ್ತಿದ್ದು, ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞ ವೈದ್ಯ ಡಾ.ಸಿ.ಪಿ.ಮಲ್ಲಿಕಾರ್ಜುನ್ ಮಾತನಾಡಿ, ದೇಶದಲ್ಲಿ 63 ಮಿಲಿಯನ್ ಜನ ಕಿವಿಯ ತೊಂದರೆಗೆ ಒಳಗಾಗಿದ್ದಾರೆ. ನೂರಕ್ಕೂ ಹೆಚ್ಚು ಜನ ರೋಗಿಗಳಲ್ಲಿ 10 ರಿಂದ 20 ಜನ ಮಕ್ಕಳು ವೃದ್ಧರು ಶ್ರವಣದೋಷದವರಿದ್ದಾರೆ. ಕಿವಿಯ ತೊಂದರೆಗೆ ಕಿವಿಯೊಳಗೆ ಎಣ್ಣೆ ಕಾಯಿಸಿ ಬಿಡುವುದು, ಬೆಳ್ಳುಳ್ಳಿ ರಸ ಹಾಕುವುದು ಒಳಿತಲ್ಲ.ಕಿವಿಗಳನ್ನು ಸೋಪು ನೀರಿನಿಂದ ತೊಳೆಯಬೇಡಿ. ಹುಟ್ಟಿದ ಎಲ್ಲಾ ಮಕ್ಕಳಿಗೂ ಕಿವಿ ಪರೀಕ್ಷೆ ಮಾಡಿಸಿ ಎಂದರು.ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ರೇಖಾ ಮಾತನಾಡಿ, ಕಿವುಡುತನ ಒಂದು ತಡೆಗಟ್ಟಬಹುದಾದ ಅಂಗವಿಕಲತೆಯಾಗಿದ್ದು, ಗರ್ಭಿಣಿ ತಾಯಂದಿರಿಗೂ ಸಹ ಸೂಕ್ತ ಪರೀಕ್ಷೆಗಳು ಅವಶ್ಯವಿದ್ದು, ಮಕ್ಕಳಿಗೆ ಶ್ರವಣದೋಷ ಬಾರದಂತೆ ತಡೆಯಬಹುದು. ಜಾಂಡಿಸ್ ಆದ ಮಕ್ಕಳಿಗೂ ಕೂಡ ಕಿವಿಯ ಪರೀಕ್ಷೆ ಅಗತ್ಯ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿ ಮಠ ಮಾತನಾಡಿ, ಕಿವಿಗೆ ಸ್ವತಃ ಚಿಕಿತ್ಸೆ ಬೇಡ. ವೈದ್ಯರಲ್ಲಿ ಮಾತ್ರ ಪರೀಕ್ಷೆ ಮತ್ತು ಚಿಕಿತ್ಸೆ ಪಡೆದು ಕಿವುಡುತನವನ್ನು ತಡೆಗಟ್ಟರಿ ಎಂದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್, ಎನ್‍ವಿಬಿಡಿಸಿಪಿ ಅಧಿಕಾರಿ ಡಾ.ಎನ್.ಕಾಶಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಆಡಿಯೋ ಲಾಜಿಸ್ಟ್ ದಿವ್ಯ, ಆಡಿಯೋ ಮೆಟ್ರಿಕ್ ಅಸಿಸ್ಟೆಂಟ್ ಜನಾರ್ಧನ್, ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಬಾಬು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಮಲ್ಲಿಕಾರ್ಜುನ್, ಪಾಂಡು, ನಾಗರಾಜ್, ಭವ್ಯ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.