ಜಗತ್ತಿನ ಸರ್ವ ಸಮಸ್ಯೆಗಳಿಗೂ ಪರಿಹಾರ ಶಿಕ್ಷಣ

| Published : Apr 02 2024, 01:03 AM IST

ಜಗತ್ತಿನ ಸರ್ವ ಸಮಸ್ಯೆಗಳಿಗೂ ಪರಿಹಾರ ಶಿಕ್ಷಣ
Share this Article
  • FB
  • TW
  • Linkdin
  • Email

ಸಾರಾಂಶ

ಕಲಿತ ಜ್ಞಾನವನ್ನು ಜೀವನಕ್ಕೆ ಸಮೀಕರಿಸಿಕೊಂಡಾಗ ಅದು ಶಾಶ್ವತವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಜಗತ್ತಿನ ಸರ್ವ ಸಮಸ್ಯೆಗಳಿಗೂ ಪರಿಹಾರವೆಂದರೆ ಶಿಕ್ಷಣ ಎಂಬ ಡಾ.ರಾಧಾಕೃಷ್ಣನ್ ವಾಣಿಯಂತೆ ಶಿಕ್ಷಣವನ್ನು ಧಾರೆ ಎರೆಯುವ ಶಿಕ್ಷಕ ಪ್ರಸ್ತುತ ಸನ್ನಿವೇಶದ ಕಲ್ಪವೃಕ್ಷ, ಕಾಮಧೇನು ಎಂದು ಶಿಕ್ಷಕ ನಾರನಗೌಡ ಉತ್ತಂಗಿ ಹೇಳಿದರು.

ಸಮೀಪದ ಯಲ್ಲಟ್ಟಿಯ ಶ್ರೀ ನಿರೂಪಾಧೀಶ್ವರ ಮಠದ ಆವರಣದಲ್ಲಿ ಬನಹಟ್ಟಿಯ ಜನತಾ ಶಿಕ್ಷಣ ಸಂಸ್ಥೆಯ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಜರುಗುತ್ತಿರುವ ಪೌರತ್ವ ತರಬೇತಿ ಶಿಬಿರದ 2 ನೇ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಆಶಯದಂತೆ ಶಿಕ್ಷಣ ಧೈರ್ಯವಂತ ಪರಾಕ್ರಮಿಗಳನ್ನು ಸೃಷ್ಠಿಸಬೇಕು. ಹಾಗಾಗದಿದ್ದರೆ ಶಿಕ್ಷಣ ಕೇವಲ ಅಕ್ಷರ ಜ್ಞಾನವಾಗಿ ವ್ಯರ್ಥವಾಗುತ್ತದೆ. ಈ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡುವ ಶಿಕ್ಷಕ ಸರ್ವಶ್ರೇಷ್ಠ. ಭಾವಿ ಶಿಕ್ಷಕರಾದ ಪ್ರಶಿಕ್ಷಣಾರ್ಥಿಗಳ ಹೃದಯದಲ್ಲಿ ಇಂತಹ ಹೆಮ್ಮೆ ಮತ್ತು ಅಭಿಮಾನ ಸದಾ ಇರಲಿ ಆಗ ಮಾತ್ರ ನಿಮ್ಮಿಂದ ದೇಶಕ್ಕೆ ಕೊಡುಗೆಯಾಗಲು ಸಾಧ್ಯ ಎಂದರು.

ಕಾಲೇಜು ಪ್ರಾಂಶುಪಾಲೆ ಡಾ. ಮಧುಮಾಲತಿ ಬೂದಿ ಅಧ್ಯಕ್ಷತೆ ವಹಿ ಮಾತನಾಡಿ, ಕಲಿತ ಜ್ಞಾನವನ್ನು ಜೀವನಕ್ಕೆ ಸಮೀಕರಿಸಿಕೊಂಡಾಗ ಅದು ಶಾಶ್ವತವಾಗುತ್ತದೆ. ಪ್ರಶಿಕ್ಷಣಾರ್ಥಿಗಳು ಗ್ರಾಮೀಣ ಜೀವನ ಅರ್ಥೈಸುವ, ಶ್ರಮವನ್ನು ಗೌರವಿಸುವ, ಸಾಂಘಿಕ ಮನೋಭಾವ, ನಾಯಕತ್ವ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂಬುದು ಶಿಬಿರದ ಉದ್ದೇಶವಾಗಿದೆ ಎಂದರು.

ಸುನಂದಾ ತೇಲಿ ಪ್ರಾರ್ಥಿಸಿ, ಶೋಭಾ ಕಿತ್ತೂರ ಮತ್ತು ಗಾಯತ್ರಿ ಗುರವ ಸ್ವಾಗತಿಸಿ, ಅರ್ಚನಾ ಬಟ್ಲದ ಪರಿಚಯಿಸಿ, ಈರಣ್ಣ ಹಳದೂರ ವಂದಿಸಿದರು. ಉಪನ್ಯಾಸಕ ಪ್ರೊ. ಎಸ್.ಐ.ಮೇಲಗಿರಿ ಹಾಗೂ ಸಿಬ್ಬಂದಿ ಶ್ರೀದೇವಿ ನೇಸೂರ, ಜಯಶ್ರೀ ಕೊಲ್ಲಾಪುರ, ಈರಣ್ಣ ಬಿಳ್ಳೂರ ಇತರರಿದ್ದರು.