‘ಭೋಗನಂದೀಶ್ವರ’ ಯುನೆಸ್ಕೋ ಪಟ್ಟಿಗೆ ಸೇರಿಸಲು ಯತ್ನ

| Published : Jul 21 2025, 12:00 AM IST

ಸಾರಾಂಶ

ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ತರುವ ನನ್ನ ಬಹುದಿನಗಳ ಕನಸಿಗೆ ವರ್ಲ್ಡ್ ಹೆರಿಟೇಜ್ ಸೈಟ್ ಬಂದಾಗ ಮಾತ್ರ ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ಬರುತ್ತದೆ. ಇಲ್ಲವಾದರೆ ಅದು ಕನಸಿನ ಮಾತು. ಅಂತರರಾಷ್ಟ್ರೀಯ ಪ್ರವಾಸಿಗರು ದೇವಾಲಯಕ್ಕೆ ಹೆಚ್ಚು ಹೆಚ್ಚು ಬರುವುದರಿಂದ ಸರ್ಕಾರಗಳು ಅಂತರರಾಷ್ಟ್ರೀಯ ಪ್ರಯಾಣಿಕರ ಮೂಲಭೂತ ಸೌಕರ್ಯಗಳ ಅಡಿಯಲ್ಲಿ ಮೆಟ್ರೋ ವಿಸ್ತರಿಸಬಹುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದಲ್ಲಿ ನಗರದ 22 ನೇ ವಾರ್ಡ್ ನಲ್ಲಿರುವ ವಿನಾಯಕ ನಗರಕ್ಕೆ ಭಾನುವಾರ ಶಾಸಕ ಪ್ರದೀಪ್ ಈಶ್ವರ್ ನಗರಸಭೆ, ತಾಲೂಕು ಆಡಳಿತ, ತಾಲೂಕು ಪಂಚಾಯತಿ ಮತ್ತು ಇತರೆ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಅಲ್ಲಿನ ಜನತೆಯ ಸಮಸ್ಯೆಗಳನ್ನು ಆಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಂದಿ ದೇವಾಲಯವನ್ನ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಪಟ್ಟಿಗೆ(ಯುನೆಸ್ಕೋ) ಸೇರಿಸಲು ನನಗೆ ಆಸೆ ಇದೆ. ಅದಕ್ಕಾಗಿ ವಿಶ್ವ ಮಟ್ಟದಲ್ಲಿ ಪ್ರಭಾವಿಯಾಗಿರುವ ಜಗ್ಗಿ ವಾಸುದೇವ್ ಅವರಿಗೆ ಮನವಿ ಮಾಡಿದ್ದೇನೆ. ಇದರ ಜತೆಗೆ ಸರ್ಕಾರವು ವಿಶ್ವದರ್ಜೆಯ ದೇಗುಲವಾಗಿ ನಂದಿ ಯೋಗನಂದಿಶ್ವರ ಸೇರಿಸಲು ಸರ್ಕಾರದಲ್ಲೂ ತೀರ್ಮಾನ ಮಾಡಿಸುವ ಪ್ರಯತ್ನ ಮಾಡುತಿದ್ದೇನೆ ಎಂದರು

ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು

ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ತರುವ ನನ್ನ ಬಹುದಿನಗಳ ಕನಸಿಗೆ ವರ್ಲ್ಡ್ ಹೆರಿಟೇಜ್ ಸೈಟ್ ಬಂದಾಗ ಮಾತ್ರ ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ಬರುತ್ತದೆ. ಇಲ್ಲವಾದರೆ ಅದು ಕನಸಿನ ಮಾತು. ಅಂತರರಾಷ್ಟ್ರೀಯ ಮಟ್ಟದ ಪ್ರಯಾಣಿಕರು ಮತ್ತು ದೇವಾಲಯವನ್ನು ವೀಕ್ಷಿಸುವ ಭಕ್ತಾದಿಗಳು ಹೆಚ್ಚು ಹೆಚ್ಚು ಬರುವುದರಿಂದ ಸರ್ಕಾರಗಳು ಅಂತರರಾಷ್ಟ್ರೀಯ ಪ್ರಯಾಣಿಕರ ಮೂಲಭೂತ ಸೌಕರ್ಯಗಳ ಅಡಿಯಲ್ಲಿ ಮೆಟ್ರೋ ವಿಸ್ತರಿಸಬಹುದು ಎಂದರು.

ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರಿಗೂ ಮೆಟ್ರೋ ಬರುತ್ತಿರುವುದು ದೇವನಹಳ್ಳಿಗೆ ಅಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ದೇಶದಿಂದ ಎಂಬುದು ನಾವು ಆರಿತುಕೊಳ್ಳಬೇಕು. ಆದ್ದರಿಂದ ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ತರುವ ಉದ್ದೇಶದ ಮೊದಲ ಪ್ರಯತ್ನವೇ ನಂದಿಯ ಭೋಗ ನಂದೀಶ್ವರ ದೇವಾಲಯ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವುದು. ಇದರ ಪ್ರಯತ್ನದ ಭಾಗವೇ ಸದ್ಗುರುಗಳ ಭೇಟಿ ಎಂದು ತಿಳಿಸಿದರು. ವಿನಾಯಕ ನಗರಕ್ಕೆ ಸೌಲಭ್ಯ

ಇಂದು ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದ ಅಡಿಯಲ್ಲಿ 22ನೇ ವಾರ್ಡ್ ನ ವಿನಾಯಕ ನಗರ ಸುತ್ತಿ ಜನರ ಕಷ್ಟಗಳನ್ನು ಆಲಿಸಿ ಸುಮಾರು ಮೂರು ಕೋಟಿ ಅನುದಾನವನ್ನು ಇಲ್ಲಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ನೀಡುತ್ತಿದ್ದೇನೆ. ಅಧಿಕಾರ ಇರುವಾಗ ಜನರಿಗೆ ಏನಾದರೂ ಮಾಡಬೇಕು ಎಂಬ ಇವರ ಪರಿಕಲ್ಪನೆಯ ಮುಖಾಂತರ ಇನ್ನು ಅಮ್ಮ ಆಂಬುಲೆನ್ಸ್ ಕ್ಷೇತ್ರದ ಮಟ್ಟಿಗೆ ರಾಜಕೀಯ ರಹಿತವಾಗಿ ಬಳಕೆ ಮಾಡಿಕೊಳ್ಳುತ್ತಿರುವ ಸಾಮಾಜಿಕ ಕಳಕಳಿ ಯೋಜನೆಯಾಗಿದೆ ತಿಂಗಳಿಗೆ ಹದಿನೈದು ಲಕ್ಷ ಖರ್ಚು ಬಂದರೂ ನಾನು ಅದನ್ನ ಹೆಮ್ಮೆಯಿಂದ ಮಾಡುತಿದ್ದೇನೆ ಎಂದರು.

ಮಾದರಿ ಕ್ಷೇತ್ರ ಮಾಡುವ ಗುರಿ

ಇನ್ನು ಕ್ಷೇತ್ರದಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ನನ್ನ ಗಮನಕ್ಕೆ ಬರುತ್ತಿದ್ದು ಇದರ ಬಗ್ಗೆ ಅಧಿಕಾರಿಗಳೊಂದಿಗೆ ಗಂಭೀರವಾಗಿ ಚರ್ಚಿಸಿ ತಕ್ಷಣ ಅವುಗಳ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿ ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ ಎಂದು ತಿಳಿಸಿದರು.

ಈ ವೇಳೆ ತಹಸೀಲ್ದಾರ್ ವಿ.ರಶ್ಮೀ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಪೌರಾಯುಕ್ತ ಮನ್ಸೂರ್ ಆಲಿ,ಮಂಡಿಕಲ್ ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ಜಿ.ಪಂ ಮಾಜಿಸದಸ್ಯ ಕೆ.ಎಂ.ಮುನೇಗೌಡ,ಟಿಎಪಿಸಿಎಂಎಸ್ ನಿರ್ದೇಶಕ ಬಿಸೇಗಾರಹಳ್ಳಿ ನಾಗೇಶ್,ನಗರಸಭೆ ನಾಮ ನಿರ್ದೇಶನ ಸದಸ್ಯ ಡೈರಿ ಗೋಪಿ,ಅಣ್ಣಮ್ಮ, ಮುಖಂಡರಾದ ಡ್ಯಾನ್ಸ್ ಶ್ರೀನಿವಾಸ್, ಉಮೇಶ್,ಎಮ್ ಬಿ ಕೆ ರಾಜು ನಾಯನಹಳ್ಳಿ ನಾರಾಯಣಸ್ವಾಮಿ,ನಾರಾಯಣಮ್ಮ ಮತ್ತಿತರರು ಇದ್ದರು.