ಸಾರಾಂಶ
ಯಾದಗಿರಿ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಗರ ಮಂಡಲ ವತಿಯಿಂದ ಭಗೀರಥ ಮಹಿರ್ಷಗಳ ಜಯಂತಿ ಆಚರಿಸಲಾಯಿತು
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಗರ ಮಂಡಲ ವತಿಯಿಂದ ಭಗೀರಥ ಮಹಿರ್ಷಗಳ ಜಯಂತಿ ಆಚರಿಸಲಾಯಿತು.ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ಭಗೀರಥರು ಮಹಾನ್ ತಪಸ್ವಿಯಾಗಿದ್ದರು. ಅವರಂತೆ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಭಗೀರಥರ ಆದರ್ಶ, ತತ್ವಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗಬೇಕು ಎಂದರು.ಕಠಿಣವಾದ ಹಾಗೂ ಸುದೀರ್ಘವಾದ ತಪಸ್ಸಿನಿಂದ ದೇವನದಿ ಗಂಗೆಯನ್ನು ಭೂಲೋಕ ಹಾಗೂ ಪಾತಾಳ ಲೋಕಕ್ಕೆ ಕರೆ ತರಲು ಶ್ರಮಿಸಿದ ಭಗೀರಥ ಮಹರ್ಷಿಗಳು. ಎಂಥ ವಿಘ್ನಗಳು ಬಂದರೂ ಎದೆಗುಂದದೆ ಸತತ ಪ್ರಯತ್ನದಿಂದ ತಮ್ಮ ಕಾರ್ಯ ಸಾಧನೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಹಿರಿಯ ಮುಖಂಡ ವೆಂಕಟರಡ್ಡಿ ಅಬ್ಬೆತುಮಕೂರು, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಟ್ಟಿಮನಿ, ರಮೇಶ್ ದೊಡಮನಿ, ಸೊಮಣ್ಣಗೌಡ, ಶ್ರೀನಿವಾಸ ಇಟ್ಟೆಕರ, ಸಾಬು ಚಂಡ್ರಕಿ, ಮಲ್ಲು ಸಿ. ಕೊಲಿವಾಡ ಸೇರಿದಂತೆ ಇತರರಿದ್ದರು.