ಪ್ರತಿ ಗ್ರಾಪಂಗೊಂದು ಎಫ್‌ಪಿಒ ಸ್ಥಾಪಿಸಬೇಕು

| Published : Oct 02 2024, 01:10 AM IST

ಸಾರಾಂಶ

ಎಫ್‌ಪಿಒ ಒಂದು ಮಹತ್ವದ ಯೋಜನೆ. ಈ ಬಗ್ಗೆ ರೈತರಿಗೆ ಇನ್ನೂ ಅರಿವು ಇಲ್ಲ. ಜನಪ್ರತಿನಿಧಿಗಳಿಗೂ ಇಲ್ಲ. ವಿವಿಧ ಇಲಾಖೆಗಳಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದೆ. ರೈತರು ಸ್ವಾವಲಂಬಿಗಳಾಗಬೇಕು ಎಂಬುದು ಉದ್ದೇಶ. ಅನುಷ್ಠಾನ ಮಾಡಿ ಮೂರು ವರ್ಷಗಳಾಗಿದ್ದು, ಎಲ್ಲಾ ಕಡೆ ಜಾರಿಗೆ ಬಂದಿಲ್ಲ.

ಕನ್ನಡಪ್ರಭ ವಾರ್ತೆ ಕೋಲಾರರೈತರ ಉತ್ಪನ್ನಗಳಿಗೆ ನಿರ್ದಿಷ್ಟ ಬೆಲೆ ನಿಗದಿ ಮಾಡಲು ಯಾವುದೇ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಇದರಿಂದ ರೈತರಿಗೆ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಹೀಗಾಗಿ ಪ್ರತಿ ಪಂಚಾಯತಿಗೊಂದು ರೈತ ಉತ್ಪಾದನಾ ಸಂಸ್ಥೆ (ಎಫ್.ಪಿ.ಒ) ಸ್ಥಾಪನೆ ಮಾಡಬೇಕು. ರೈತರು ತಮ್ಮ ಉತ್ಪನ್ನಗಳಿಗೆ ಬ್ರ್ಯಾಂಡ್ ಮಾಡಿ ಮಾರಾಟದ ಮೂಲಕ ಲಾಭಗಳಿಸಬೇಕು ಎಂದು ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.ತಾಲೂಕಿನ ಮುದುವತ್ತಿಯಲ್ಲಿ ರೈತ ಉತ್ಪಾದಕ ಸಂಸ್ಥೆ ಹಾಗೂ ವಕ್ಕಲೇರಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.ಎಫ್‌ಪಿಒ ಬಲಿಷ್ಠವಾಗಬೇಕು

ಎಫ್‌ಪಿಒ ಒಂದು ಮಹತ್ವದ ಯೋಜನೆ. ಈ ಬಗ್ಗೆ ರೈತರಿಗೆ ಇನ್ನೂ ಅರಿವು ಇಲ್ಲ. ಜನಪ್ರತಿನಿಧಿಗಳಿಗೂ ಇಲ್ಲ. ವಿವಿಧ ಇಲಾಖೆಗಳಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ತಂದಿದೆ. ರೈತರು ಸ್ವಾವಲಂಬಿಗಳಾಗಬೇಕು ಎಂಬುದು ಉದ್ದೇಶ. ಅನುಷ್ಠಾನ ಮಾಡಿ ಮೂರು ವರ್ಷಗಳಾಗಿದ್ದು, ಎಲ್ಲಾ ಕಡೆ ಜಾರಿಗೆ ಬಂದಿಲ್ಲ. ಎಫ್‌ಪಿಒಗಳು ಬಲಿಷ್ಠವಾಗಬೇಕು ಎಂದು ಸಲಹೆ ನೀಡಿದರು.ಜಿಲ್ಲೆಯಲ್ಲಿ ಮಣ್ಣಿನ ಫಲವತ್ತತೆ ಹಾಳಾಗಿದೆ. ಕಳೆನಾಶಕ ಹೆಚ್ಚು ಬಳಕೆ ಮಾಡುತ್ತಿದ್ದೇವೆ. ಅಂಗಡಿಗಳಲ್ಲಿ ಬೀಜ ಕೊಡುವಾಗಲೇ ಔಷಧಿಯನ್ನೂ ಕೊಡುತ್ತಿದ್ದಾರೆ. ಇಲಾಖೆಗಳಿಂದ ಹಾಗೂ ತಜ್ಞರಿಂದ ಸಲಹೆ ಪಡೆದು ವ್ಯವಸಾಯ ಮಾಡಿದರೆ ಲಾಭ ಮಾಡಿಕೊಳ್ಳಬಹುದು ಎಂದರು.ಮಧ್ಯವರ್ತಿ ಹಾಳಿಗೆ ಕಡಿವಾಣ

ಕೋಲಾರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಿವಾನಂದ ವಿ.ಹೊಂಗಲ್ ಮಾತನಾಡಿ, ರೈತರ ಶ್ರೇಯೋಭಿವೃದ್ಧಿಗಾಗಿ ರೈತ ಉತ್ಪಾದಕ ಸಂಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ರಾಜ್ಯದಲ್ಲಿ ೧,೪೫೯ ಎಫ್‌ಪಿಒಗಳಿವೆ. ರೈತರು ತಾವು ಬೆಳೆದ ಬೆಳೆಗೆ ತಾವೇ ಬ್ರ್ಯಾಂಡ್ ಮಾಡಬೇಕು. ಮಧ್ಯವರ್ತಿ ಹಾವಳಿಯಿಂದ ರೈತರಿಗೆ ಲಾಭ ಕಡಿಮೆ. ರೈತರು ಮಾರುಕಟ್ಟೆ ಮಾಡಿದರೆ ಮಾತ್ರ ಲಾಭ ಎಂದು ಹೇಳಿದರು. ಎಫ್‌ಪಿಒ ಜಿಲ್ಲಾ ನೋಡಲ್ ಅಧಿಕಾರಿ ತೋಟಗಾರಿಕೆ ಇಲಾಖೆಯ ಡಿ.ಪರಮೇಶ್, ಸಂಸ್ಥೆಯ ಅಧ್ಯಕ್ಷ ಎನ್.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ಮಮ್ಮ ಹನುಮಂತಪ್ಪ, ಕೃಷಿ ಇಲಾಖೆಯ ಎನ್.ಶ್ರೀನಿವಾಸ್, ವಿಜಯ ಪುಲಿ, ಪಿಡಿಒ ಎಚ್.ಎಂ.ರವಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಸುನಿಲ್, ತೋಟಗಾರಿಕೆ ಅಧಿಕಾರಿ ರಾಘವೇಂದ್ರ, ಕೃಷಿ ಸಹಾಯಕಿ ಲಾವಣ್ಯಾ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ವೈ.ಶಿವಕುಮಾರ್, ವಕ್ಕಲೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಪಾರ್ವತಮ್ಮ, ಕೆಂಪಣ್ಣ, ವೆಂಕಟರಮಣಪ್ಪ, ಪಿ.ಎಂ.ವೆಂಕಟೇಶ್, ಟಿ.ಎನ್.ನಾಗರಾಜ್, ನಾರಾಯಣಪ್ಪ ಇದ್ದರು.