ಸಾರಾಂಶ
ಮಕ್ಕಳು ಕಲಿಕೆಯೊಂದಿಗೆ ಆಟಗಳನ್ನು ಭಾಗವಹಿಸಿ ತಮ್ಮ ಪ್ರತಿಭೆ ಹೊರ ಹಾಕಬೇಕು. ಸೋಲು ಗೆಲುವು ಮುಖ್ಯವಲ್ಲ
ಬಾದಾಮಿ:
ಮಕ್ಕಳಿಗೆ ಇಂದು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಸಹ ಅವಶ್ಯಕವಾಗಿದ್ದು, ಇದರಿಂದ ಮಾನಸಿಕ, ದೈಹಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಹಳಗೇರಿ ಹೇಳಿದರು.ಅವರು ನಗರದ ಶ್ರೀ ಕಾಂಚನೇಶ್ವರ ವಿದ್ಯಾವರ್ದಕ ಸಂಸ್ಥೆಯ ದಿ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ 2023-24ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಕಲಿಕೆಯೊಂದಿಗೆ ಆಟಗಳನ್ನು ಭಾಗವಹಿಸಿ ತಮ್ಮ ಪ್ರತಿಭೆ ಹೊರ ಹಾಕಬೇಕು. ಸೋಲು ಗೆಲುವು ಮುಖ್ಯವಲ್ಲ ಎಂದು ಹೇಳಿದರು. ವೇದಿಕೆಯ ಮೇಲೆ ಸಂಸ್ಥೆಯ ಅಧ್ಯಕ್ಷೆ, ಮಾಜಿ ಜಿ.ಪಂ ಸದಸ್ಯೆ ರೇಣುಕಾ ಗುಡ್ಡದ, ಸಂಸ್ಥಾಪಕ ಅಧ್ಯಕ್ಷ ವೈ.ಎಸ್.ಗುಡ್ಡದ, ಶಾಲೆಯ ಮುಖ್ಯಶಿಕ್ಷಕಿ ರೂಪಶ್ರೀ ಫತ್ತೇಪೂರ, ಆಡಳಿತಾಧಿಕಾರಿ ಅರವಿಂದ ಗುಡ್ಡದ, ದೈಹಿಕ ಶಿಕ್ಷಕ ರವಿ ಗೌಡರ ಹಾಜರಿದ್ದರು. ಶಿಕ್ಷಕಿ ರಜನಿ ನಿರೂಪಿಸಿ, ವಂದಿಸಿದರು. ಶಾಲೆಯ ಮಕ್ಕಳಿಗೆ ವಿವಿದ ಕ್ರೀಡೆಗಳನ್ನು ಆಯೋಜಿಸಲಾಯಿತು.
--ಚಿತ್ರ ಮಾಹಿತಿ;
5-ಬಾದಾಮಿ-2