ನಕಲಿ ಪತ್ರಕರ್ತನ ಬಂಧನ

| Published : Feb 22 2024, 01:49 AM IST

ಸಾರಾಂಶ

ಅಥಣಿಯ ಕೃಷ್ಣಾ ಬಡಾವಣೆಯ ರಮಜಾನ ಸುಬಾನ್‌ ಮುಜಾವರ (36) ಬಂಧಿತ. ಸುದ್ದಿವಾಹಿನಿ ಲೋಗೋದ ಸ್ಟೀಕರ್‌ ಅಂಟಿಸಿದ್ದ ಕಾರು ನಗರದ ಸಾಹಿತ್ಯ ಭವನದಲ್ಲಿ ನಿಲ್ಲಿಸಲಾಗಿತ್ತು.

ಬೆಳಗಾವಿ: ಖಾಸಗಿ ಸುದ್ದಿ ವಾಹಿನಿ ಲೋಗೋದ ಸ್ಟಿಕರ್‌ ಕಾರಿಗೆ ಅಂಟಿಸಿಕೊಂಡು ಹಾಗೂ ವಾಹಿನಿಯ ಪಶ್ಚಿಮ ಭಾಗದ ಮುಖ್ಯಸ್ಥನೆಂದು ಹೇಳಿಕೊಂಡು ತಿರುಗಾಡುತ್ತಿದ್ದ ನಕಲಿ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಅಥಣಿಯ ಕೃಷ್ಣಾ ಬಡಾವಣೆಯ ರಮಜಾನ ಸುಬಾನ್‌ ಮುಜಾವರ (36) ಬಂಧಿತ. ಸುದ್ದಿವಾಹಿನಿ ಲೋಗೋದ ಸ್ಟೀಕರ್‌ ಅಂಟಿಸಿದ್ದ ಕಾರು ನಗರದ ಸಾಹಿತ್ಯ ಭವನದಲ್ಲಿ ನಿಲ್ಲಿಸಲಾಗಿತ್ತು. ಇದನ್ನು ಕಂಡ ಅದೇ ವಾಹಿನಿಯ ವರದಿಗಾರ ಸಹದೇವ ಮಾನೆ ವಿಚಾರಿಸಿದ್ದಾರೆ. ಈ ವೇಳೆ ಬಂಧಿತ ರಮಜಾನ್‌ ಮುಜಾವರ ತಾನು ಮಹಾಷ್ಟ್ರದಲ್ಲಿ ವರದಿಗಾರ ಮತ್ತು ಪಶ್ಚಿಮ ಭಾಗದ ಮುಖ್ಯಸ್ಥನಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಯಾವುದೇ ವ್ಯಕ್ತಿಯನ್ನು ನೇಮಿಸಿಕೊಳ್ಳುವ ಹಾಗೂ ತೆಗೆದು ಹಾಕುವ ಅಧಿಕಾರ ನನಗಿದೆ ಎಂದು ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ಸಹದೇವ ಮಾನೆ, ಮಹಾರಾಷ್ಟ್ರದಲ್ಲಿನ ತಮ್ಮ ವಾಹಿನಿಯ ವರದಿಗಾರರನ್ನು ವಿಚಾರಿಸಿದ್ದಾರೆ. ಈ ವೇಳೆ ರಮಜಾನ್‌ನ ಅಸಲಿ ಮುಖ ಗೊತ್ತಾಗುತ್ತಿದ್ದಂತೆ ತಮ್ಮ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಲ್ಲದೇ, ಆತನ ವಿರುದ್ಧ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ರಮಜಾನ್‌ ಮುಜಾವರನ್ನನ್ನು ಬಂಧಿಸಿದ್ದು, ಆತನೊಂದಿಗೆ ಇರುವ ವ್ಯಕ್ತಿಗಳ ಪತ್ತೆಗೆ ಬಲೆ ಬೀಸಿದ್ದಾರೆ.