ಸಾರಾಂಶ
ತಾಲೂಕಿನ ಶಿರನಾಳ ಗ್ರಾಮದ ರೈತರ ಕಬ್ಬು ಸಾಗಣೆಗೆ ಸೂಕ್ತ ರಸ್ತೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಜ.16ರಂದು ಧೂಳಖೇಡ ಗ್ರಾಮ ಪಂಚಾಯತಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಗ್ರಾಪಂ ಸದಸ್ಯ ಕಲ್ಲಪ್ಪ ಗುಮತೆ ಹೇಳಿದರು.
ಕನ್ನಡಪ್ರಭ ವಾರ್ತೆ ಚಡಚಣ
ತಾಲೂಕಿನ ಶಿರನಾಳ ಗ್ರಾಮದ ರೈತರ ಕಬ್ಬು ಸಾಗಣೆಗೆ ಸೂಕ್ತ ರಸ್ತೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಜ.16ರಂದು ಧೂಳಖೇಡ ಗ್ರಾಮ ಪಂಚಾಯತಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಗ್ರಾಪಂ ಸದಸ್ಯ ಕಲ್ಲಪ್ಪ ಗುಮತೆ ಹೇಳಿದರು.
ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕುರಿತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ತಾಲೂಕಿನ ಹೊಳೆ ಶಿರನಾಳ ಗ್ರಾಮದ ರೈತರು ಕಬ್ಬು ಸಾಗಿಸಲಾಗದೆ 4 ತಿಂಗಳಿಂದ ಒದ್ದಾಡುತ್ತಿದ್ದಾರೆ. ಅತೀಕ್ರಮಣ ರಸ್ತೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನಕೂಲ ಕಲ್ಪಿಸಕೊಡಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಪಿಡಿಒ ಅವರು ಇಒ ಕಡೆ ಬೊಟ್ಟು ಮಾಡುತ್ತಾರೆ. ಇಒ ಅವರನ್ನು ಸಂಪರ್ಕಿಸಿದರೆ ಅವರು ಪಿಡಿಒ ಅವರ ಕಡೆ ಬೊಟ್ಟು ಮಾಡುತ್ತಾರೆ ಎಂದರು.
ರೈತರ ಕಷ್ಟಕ್ಕೆ ಸ್ಪಂದಿಸದ ಅಧಿಕಾರಿಗಳು ಕಾಲಹಣ ಮಾಡುತ್ತಿದ್ದಾರೆ. ಜ.16 ರಂದು ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಹಸೀಲ್ದಾರ್ ಅವರಿಗೆ ಮನವರಿಕೆ ಮಾಡಿದ್ದೇವೆ. ಅದಕ್ಕೂ ಬೇಡಿಕೆ ಈಡೇರದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ಅವಾಗಲೂ ರೈತರ ನೆರವಿಗೆ ಬರದಿದ್ದರೇ ಕಬ್ಬಿಗೆ ಬೆಂಕಿ ಹಚ್ಚಿತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಗುರುಬಾಯಿ ಬಿರಾದಾರ, ಪಾರ್ವತಿ ಗುಮತೆ, ರೂಪಾ ಹಳ್ಳಿ, ಮುರಳಿಧರ ಬಡಿಗೇರ, ರತ್ನಾಬಾಯಿ ಧೂಳಖೇಡ, ಶಿವಾಜಿ ಸಂಕಪಳ, ಹಣಮಂತ ಸಂಕಫಳ, ನಾರಾಯಣ ಸಂಕಫಳ, ಗೋಪಾಲ ಸಂಕಫಳ, ಲಕ್ಷ್ಮಣ ಸಂಕಫಳ, ಬಾಪುರಾಯ ಕುರಗೊಟಗಿ, ಜಕ್ಕಪ್ಪ ಕುರಗೊಟಗಿ, ಸಿದ್ದಾರಾಮ ಸಂಕಫಳ ಇದ್ದರು.