ಯಳವಾರೆ ಕೆರೆಗೆ ನೀರು ತುಂಬಿಸುವಂತೆ ರೈತರ ಪ್ರತಿಭಟನೆ

| Published : Nov 01 2025, 01:30 AM IST

ಸಾರಾಂಶ

ಗೀಜಿಹಳ್ಳಿ ಗ್ರಾಮ ಪಂಚಾಯಿತಿ ಯಳವಾರೆ ಗ್ರಾಮದ ಕೆರೆಗೆ ಹಾರನಹಳ್ಳಿ ಕೆರೆಯಿಂದ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಹಾರನಹಳ್ಲಿ ಕೆರೆಕೋಡಿಯಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಹಾರನಹಳ್ಳಿ ಕೆರೆ ತುಂಬಿರುವುದರಿಂದ ಹಾರನಹಳ್ಳಿ ಅಚ್ಚುಕಟ್ಟು ಪ್ರದೇಶದ ರಾಜಕಾಲುವೆ ಹುಳು ತುಂಬಿದ್ದು ತಕ್ಷಣ ನೀರಾವರಿ ಇಲಾಖೆ ಹುಳು ತೆಗೆಸಬೇಕು ಎಂದರು. ಸಣ್ಣ ನೀರಾವರಿ ಇಲಾಖೆ ದೂರದೃಷ್ಠಿ ಯೋಜನೆ ಸಿದ್ಧಪಡಿಸಿ ಎತ್ತಿನಹೊಳೆ ಮುಖಾಂತರ ಹಾಗೂ ನೈಜವಾಗಿ ಕೆರೆ ಕೋಡಿಬಿದ್ದ ಸಂಧರ್ಭದಲ್ಲಿ ಯಳವಾರೆ ಕೆರೆಗೆ ನೀರು ಕೊಟ್ಟು ರೈತರ ಆತ್ಮಸ್ಥೈರ್ಯ ಹೆಚ್ಚಿಸುವಂತೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಾರನಹಳ್ಳಿ

ಗೀಜಿಹಳ್ಳಿ ಗ್ರಾಮ ಪಂಚಾಯಿತಿ ಯಳವಾರೆ ಗ್ರಾಮದ ಕೆರೆಗೆ ಹಾರನಹಳ್ಳಿ ಕೆರೆಯಿಂದ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸಂಚಾಲಕ ಕನಕಂಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಹಾರನಹಳ್ಲಿ ಕೆರೆಕೋಡಿಯಲ್ಲಿ ನಿಂತು ಪ್ರತಿಭಟನೆ ನಡೆಸಿದರು.

ಈ ಸಮಯದಲ್ಲಿ ರೈತರನ್ನು ಉದೇಶಿಸಿ ಮಾತನಾಡಿದ ಅವರು, ನೀರು ರೈತರಿಗೆ ಜೀವನಾಡಿಯಾಗಿದ್ದು, ಹಾರನಹಳ್ಳಿ ಯಳವಾರೆ ಕೆರೆಗಳು ಅಕ್ಕ ತಂಗಿ ಕೆರೆಗಳು. ಇವತ್ತು ಹಾರನಹಳ್ಳಿ ಕೆರೆ ತುಂಬಿ ಅರಸೀಕೆರೆ ಹೋಗುತ್ತಿದೆ, ಹಾರನಹಳ್ಳಿ ಕೆರೆ ತುಂಬಿದ ಸಂಧರ್ಭದಲ್ಲಿ ಹೆಚ್ಚುವರಿ ನೀರನ್ನು ಯಳವಾರೆ ಕೆರೆಗೆ ಪೈಪುಮೂಲಕ ನೀರು ಹರಿಸಿ ಆ ಕೆರೆಯ ತುಂಬವ ಯೋಜನೆಕಾರ್ಯಗಳು ತಕ್ಷಣ ಆಗಬೇಕಾಗಿದೆ ಎಂದರು. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಗಮನ ಹರಿಸುವಂತೆ ಒತ್ತಾಯಿಸಿದ ಅವರು ಕೋಡಿಮಠದ ಡಾ. ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಹಾಗೂ ಅಶೋಕ್ ಹಾರನಹಳ್ಳಿ ಅವರ ಆಶೀರ್ವಾದದಿಂದ ಅರಸೀಕೆರೆ ತಾಲೂಕಿನ ಕೆರೆಗಳಿಗೆ ನೀರು ಕೊಡುವ ಬಗ್ಗೆ ಹಾರನಹಳ್ಳಿಯಲ್ಲಿ 40 ದಿನಗಳ ಕಾಲ ನಿರಂತರ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸದರು.

ಇಲ್ಲಿಯ ಜನ ಎಲ್ಲಾ ಹೋರಾಟಕ್ಕೆ ಸಹಕಾರ ನೀಡಿದ್ದಾರೆ. ಇವತ್ತು ಸಾವಿರಾರು ಕೋಟಿ ಎತ್ತಿನಹೊಳೆ ಯೋಜನೆ ಹಣ ಹರಿದು ಬಂದರೂ ಇನ್ನು ಅರಸೀಕೆರೆ ತಾಲೂಕಿಗೆ ನೀರು ಹರಿದು ಬಂದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ದೇಶದವರೋ ಅಥಾವ ಬೇರೆ ದೇಶದವರೋ ಅರಣ್ಯ ಇಲಾಖೆ ಜನೋಪಯೋಗಿ ಕಾರ್ಯಗಳಿಗೆ ತಕ್ಷಣ ಅನುಮತಿ ನೀಡಬೇಕು. ತಕ್ಷಣ ಎತ್ತಿನಹೊಳೆ ಮುಖಾಂತರ ನೀರು ಹರಿದು ಅರಸೀಕೆರೆ ತಾಲೂಕು ಕೆರೆಗಳಿಗೆ ನೀರು ತುಂಬಬೇಕು ಎಂದರು.ಹಾರನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಚ್. ಎಸ್. ನಂದೀಶ್ ಮಾತನಾಡಿ, ಯಳವಾರೆ ಕೆರೆ ಕಾಲವೆ ನೀರು ಹರಿದ್ದು ಹೋಗುತ್ತಿತ್ತು, ಕೆಲವು ಕಾಲುವೆಗಳ ಮುಚ್ಚಿದೆ ಪೈಪು ಮುಖಾಂತರ ಹಾರನಹಳ್ಳಿ ಕೆರೆ ತುಂಬಿದ ಸಂದರ್ಭದಲ್ಲಿ ನೀರು ಹರಿಸುವ ಕಾರ್ಯಗಳು ಆಗಬೇಕು. ಇದರಿಂದ ಯಳವಾರೆ ಕೆರೆ ರೈತರಿಗೆ ಅನುಕೂಲವಾಗುತ್ತದೆಂದರು. ಹಾರನಹಳ್ಳಿ ಕೆರೆ ತುಂಬಿರುವುದರಿಂದ ಹಾರನಹಳ್ಳಿ ಅಚ್ಚುಕಟ್ಟು ಪ್ರದೇಶದ ರಾಜಕಾಲುವೆ ಹುಳು ತುಂಬಿದ್ದು ತಕ್ಷಣ ನೀರಾವರಿ ಇಲಾಖೆ ಹುಳು ತೆಗೆಸಬೇಕು ಎಂದರು. ಸಣ್ಣ ನೀರಾವರಿ ಇಲಾಖೆ ದೂರದೃಷ್ಠಿ ಯೋಜನೆ ಸಿದ್ಧಪಡಿಸಿ ಎತ್ತಿನಹೊಳೆ ಮುಖಾಂತರ ಹಾಗೂ ನೈಜವಾಗಿ ಕೆರೆ ಕೋಡಿಬಿದ್ದ ಸಂಧರ್ಭದಲ್ಲಿ ಯಳವಾರೆ ಕೆರೆಗೆ ನೀರು ಕೊಟ್ಟು ರೈತರ ಆತ್ಮಸ್ಥೈರ್ಯ ಹೆಚ್ಚಿಸುವಂತೆ ಮನವಿ ಮಾಡಿದರು.ಯಳವಾರೆ ಕೆರೆ ತುಂಬಿ ಸುಮಾರು 25 ವರ್ಷವಾಗಿದೆ. ಜಾಲಿ ಮಳ್ಳಿ ನಿಂದ ಕೆರೆ ಆವೃತವಾಗಿದೆ. ಕೆರೆ ಸ್ವಚ್ಛತೆಗೆ ಲಕ್ಷಾಂತರ ರುಪಾಯಿ ಹಣ ವ್ಯಯ ಮಾಡಲಾಗಿದೆ. ಆದರೆ ನೀರಿಲ್ಲ, 25 ವರ್ಷದಲ್ಲಿ ಹಾರನಹಳ್ಳಿ ಕೆರೆ 3 ಬಾರಿ ತುಂಬಿ ಹರಿದ್ದಿದ್ದೆ ಇಂತಹ ಸಂಧರ್ಭದಲ್ಲಿ ಹಾರನಹಳ್ಳಿ ಕೋಡಿಯಿಂದ ಪೈಪ್‌ಲೈನ್ ಹಾಕಿದರೆ ಗ್ರಾವೀಟಿ ಮೂಲಕ ಯಳವಾರೆ ಕೆರೆನೀರು ಹರಿಯುತ್ತದೆ ಶಾಸಕರು ಇಂತಹ ಯೋಜನೆ ಆಸಕ್ತಿ ವಹಿಸ ಬೇಕು ಎಂಧು ಯಳವಾರೆ ಭಾಗದ ರೈತರು ಸಭೆಯಲ್ಲಿ ಮಾತನಾಡಿದ್ದರು. ರೈತರು ಯಳವಾರೆ ಕೆರೆಗೆ ನೀರು ಕೊಡಿ ತೆಂಗು ರಕ್ಷಿಸಿ ಎತ್ತರದ ಧ್ವನಿಯಲ್ಲಿ ಘೋಷಣೆ ಕೂಗಿದ್ದರು, ಕೆರೆ ಸಮೀಪಕ್ಕೆ ಆಗಮಿಸಿದ ಎತ್ತಿನಹೊಳೆ ಯೋಜನೆಯ ಮುಖ್ಯ ಅಭಿಯಂತರಾದ ಇಂದು ಕುಮಾರ್ ರೈತರ ಮನವಿ ಸ್ವೀಕರಿಸಿ ಮಾತನಾಡಿ ಯಳವಾರೆ ಕೆರೆ ಗೆ ಎತ್ತಿನಹೊಳೆ ಯೋಜನೆಯಲ್ಲಿ ದೇವರಾಯಪಟ್ಟಣ ದಿಂದ ಪೈಪು ಮೂಲಕ ನೀರು ಹರಿಸಲು ಡಿಫಿಆರ್‌ ಆಗಿದೆ, ಇನ್ನೇನು ಕೆಲವು ದಿನಗಳಲ್ಲಿ ಟೆಂಡರ್‌ ಕರೆಯುವುದಾಗಿ ರೈತರಿಗೆ ತಿಳಿಸಿದರು.ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಉಮೇಶ್ ರೈತರ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕಾಮಗಾರಿ ಬಗ್ಗೆ ಸರ್ಕಾರಕ್ಕೆ ವರಧಿ ನೀಡುವುದಾಗಿ ತಿಳಿಸಿದ್ದರು. ಈ ಸಂರ್ಭದಲ್ಲಿ ರೈತ ಸಂಘದ ಏಜಾಜ್‌ ಫಾ಼ಷ,ಮಹಮದ್ ದಸ್ತಗಿರಿ, ಅಯೂಬ್‌ ಪಾಷಾ, ನಂಜಮ್ಮದ, ಭೋಜರಾಜ್,ಜವರನಹಳ್ಳಿ ನಿಂಗಪ್ಪ,ಅಜ್ಜಪ್ಪ,ಚಂದ್ರಶೇಖರ್,ಪ್ರಸನ್ನ,ಕಿರಣ್, ರೇವಣ್ಣ, ಯಳವಾರೆ ಕೆರೆ ಅಜುಭಾಜು ರೈತರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.