ಕೂಸಿನ ಮನೆ ಆರೈಕೆದಾರರಿಗೆ ಕ್ಷೇತ್ರ ಭೇಟಿ

| Published : Feb 26 2024, 01:32 AM IST

ಸಾರಾಂಶ

ಕೂಸಿನ ಮನೆ ನೋಡಲ್ ಅಧಿಕಾರಿ ರಾಜು ಢಾಂಗೆ ಮಾತನಾಡಿ, ಕೂಲಿ ಕಾರ್ಮಿಕರ ಮಕ್ಕಳನ್ನು ಕೂಸಿನ ಮನೆಗಳಲ್ಲಿ ಪಾಲನೆ ಮಾಡಬೇಕಾಗಿದೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಮಕ್ಕಳ ಆರೈಕೆ ವಿಚಾರದಲ್ಲಿ ಆರೈಕೆದಾರರು ಜವಾಬ್ದಾರಿ ನಿರ್ವಹಿಸಬೇಕು. ವೇಳಾಪಟ್ಟಿ ಅನ್ವಯ ಆಹಾರ ವಿತರಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪಂಚಾಯಿತಿಯೊಂದಿಗೆ ಸಮನ್ವಯ ಸಾಧಿಸಬೇಕು. ಮನೆ ಮನೆಗೆ ತೆರಳಿ ಕೂಸಿನ ಮನೆಗೆ ಬರುವ ಮಕ್ಕಳ ಸಮೀಕ್ಷೆ ನಡೆಸಬೇಕು ಎಂದು ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣ ಹೇಳಿದರು.

ತಾಲೂಕಿನ ಕೊಟಬಾಗಿ ಗ್ರಾ.ಪಂನ ರಕ್ಷಿ ಗ್ರಾಮದಲ್ಲಿ ಕೂಸಿನ ಮನೆಗೆ ತರಬೇತಿಯ ಆರೈಕೆದಾರರಿಗೆ ಕ್ಷೇತ್ರ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ವೇಳೆ ಅವರು ಮಾತನಾಡಿದರು. ಕೂಸಿನ ಮನೆ ನೋಡಲ್ ಅಧಿಕಾರಿ ರಾಜು ಢಾಂಗೆ ಮಾತನಾಡಿ, ಕೂಲಿ ಕಾರ್ಮಿಕರ ಮಕ್ಕಳನ್ನು ಕೂಸಿನ ಮನೆಗಳಲ್ಲಿ ಪಾಲನೆ ಮಾಡಬೇಕಾಗಿದೆ. ಹಾಗಾಗಿ ತಾವುಗಳು ತರಬೇತಿ ಪಡೆದು ಕೂಸಿನ ಮನೆಗಳನ್ನು ಯಶಸ್ವಿಯಾಗಿ ನಡೆಸಬೇಕು. ಮಕ್ಕಳ ದಾಖಲಾತಿ ರಿಜಿಸ್ಟರ್‌ ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಬೆಳಗ್ಗೆ ಮತ್ತು ಸಂಜೆ ಪೋಷಕರ ಸಹಿ ಮಾಡಿಸಿಕೊಳ್ಳಬೇಕು ಎಂದರು.

ಪಿಡಿಒ ನಿರಂಜನ ಕುರಬೇಟ, ಗ್ರಾಪಂ ಉಪಾಧ್ಯಕ್ಷೆ ಸೋನವ್ವ ಚಂದರಗಿ, ಸದಸ್ಯೆ ಶಂಕರೆವ್ವ ಕರೋಶಿ, ಕಾರ್ಯದರ್ಶಿ ಸುರೇಶ ಘಸ್ತಿ, ಅಂಗನವಾಡಿ ಮೇಲ್ವಿಚಾರಕಿಯರಾದ ಸುಜಾತಾ ಪಾಶ್ಚಾಪೂರೆ, ಶೋಭಾ ಬಸ್ತವಾಡೆ, ಶೈಲಾ ಪಾಟೀಲ, ಐಇಸಿ ತಾಲೂಕು ಸಂಯೋಜಕ ಮಹಾಂತೇಶ ಬಾದವನಮಠ, ಆಡಳಿತ ಸಹಾಯಕಿ ಪ್ರೀತಿ ಜವಳಿ, ಡಿಇಒ ಅನೀಲ ಗೋಣಿ, ಬಿಎಫ್‌ಟಿ ಸುರೇಶ ಖಾತೆದಾರ, ಗ್ರಾಮ ಕಾಯಕ ಮಿತ್ರ ಪುಷ್ಪಾ ಕಟ್ಟಿ ಮತ್ತಿತರರು ಇದ್ದರು.