ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಫೈನಲ್ ಪಿಚ್ ಡೇ’

| Published : Sep 05 2025, 01:00 AM IST

ಸಾರಾಂಶ

ಕೆನರಾ ಎಂಜಿನಿಯರಿಂಗ್ ಕಾಲೇಜಿನ ಉದ್ಯಮಶೀಲತಾ ಅಭಿವೃದ್ಧಿ ಕೋಶ (ಇ.ಡಿ.ಸಿ.) ವತಿಯಿಂದ ಎಕ್ಸ್‌ಪ್ಲೋರಿಂಗ್ ಎಂಟ್ರಪ್ರಿನರ್ಶಿಪ್ ಪ್ರೋಗ್ರಾಂನ ಫೈನಲ್ ಪಿಚ್ ಡೇ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕೆನರಾ ಎಂಜಿನಿಯರಿಂಗ್ ಕಾಲೇಜಿನ ಉದ್ಯಮಶೀಲತಾ ಅಭಿವೃದ್ಧಿ ಕೋಶ (ಇ.ಡಿ.ಸಿ.) ವತಿಯಿಂದ ಎಕ್ಸ್‌ಪ್ಲೋರಿಂಗ್ ಎಂಟ್ರಪ್ರಿನರ್ಶಿಪ್ ಪ್ರೋಗ್ರಾಂನ ಫೈನಲ್ ಪಿಚ್ ಡೇ ಆಯೋಜಿಸಲಾಯಿತು.

ಉಡುಪಿ ಎಸ್.ಎಂ.ವಿ.ಐ.ಟಿ.ಎಂ. ಮತ್ತು ಮಂಗಳೂರು ಕೆನರಾ ಎಂಜಿನಿಯರಿಂಗ್ ಕಾಲೇಜುಗಳಿಂದ ಆಯ್ಕೆಯಾದ 14 ವಿದ್ಯಾರ್ಥಿ ತಂಡಗಳು ತಮ್ಮ ಸ್ಟಾರ್ಟ್‌ಅಪ್ ಕಲ್ಪನೆಗಳನ್ನು ಸೆಕ್ಷನ್ ಇನ್ಫಿನ್–8 ಫೌಂಡೇಶನ್ (ಎಸ್‌.ಐ–8) ನೇಮಕ ಮಾಡಿದ ತೀರ್ಪುಗಾರರ ಮುಂದಿಟ್ಟರು.

ತೀರ್ಪುಗಾರರಾಗಿ ಅಜಯ್ ಪ್ರಭು ವ್ಯವಸ್ಥಾಪಕ ನಿರ್ದೇಶಕ, ಕೆ.ವಿ.ಪಿ. ಬಿಸಿನೆಸ್ ಸೊಲ್ಯೂಶನ್ಸ್, ಪುನೀತ್ ರೈ ಇಂಕ್ಯುಬೇಶನ್ ಮ್ಯಾನೇಜರ್, ಅಟಲ್ ಇಂಕ್ಯುಬೇಶನ್ ಸೆಂಟರ್ ನಿಟ್ಟೆ, ಹಾಗೂ ವಿಶ್ವಾಸ್ ಯು.ಎಸ್. ಸಂಸ್ಥಾಪಕ ನಿರ್ದೇಶಕ ಎಸ್‌.ಐ.–8 ಇದ್ದರು.

ಟೆಕಿನಿಯರ್ಸ್ (ಎಸ್.ಎಂ.ವಿ.ಐ.ಟಿ.ಎಂ.), ಮಿಸ್ ನಿರೀಕ್ಷಾ ನರೇಶ್ ನೇತೃತ್ವದಲ್ಲಿ ಪ್ರಥಮ ಬಹುಮಾನ 2,000 ರು. ಪಡೆದಿತು. ಟಾಸ್ಕ್ ಹ್ಯಾಂಡಿ (ಸಿ.ಇ.ಸಿ.), ಮಿಸ್ ಎಂ. ಮಹಿಮಾಶ್ರೀ ಹಾಗೂ ಮಿಸ್ ಕೆ. ಕಾಮಾಕ್ಷಿ ಶೆಣೈ ನೇತೃತ್ವದಲ್ಲಿ ದ್ವಿತೀಯ ಬಹುಮಾನ 1,500 ರು. ಗಳಿಸಿತು. ಫ್ಯೂಚರ್ ಫೌಂಡರ್ಸ್ (ಸಿ.ಇ.ಸಿ.), ದೀಪಕ್ ಡಿ. ನಾಯಕ್ ನೇತೃತ್ವದಲ್ಲಿ ತೃತೀಯ ಬಹುಮಾನ1,000 ರು. ನೀಡಲಾಯಿತು.

ಪ್ರಾಂಶುಪಾಲ ಡಾ. ನಾಗೇಶ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು ಪ್ರಶಾಂತ್ ಕುಮಾರ್ ಇ.ಡಿ.ಸಿ. ಸಂಯೋಜಕರು, ಡಾ. ಉದಯಕುಮಾರ್ ಕೆ. ಶೆಣೈ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಅವರ ಮಾರ್ಗದರ್ಶನದಲ್ಲಿ ನೆರವೇರಿತು.