ಕೃಷ್ಣಾ ಪ್ರವಾಹ: ಕೊಳ್ಳೂರು (ಎಂ) ಸೇತುವೆ ಮುಳುಗಡೆ ಭೀತಿ

| Published : Jul 25 2024, 01:26 AM IST

ಕೃಷ್ಣಾ ಪ್ರವಾಹ: ಕೊಳ್ಳೂರು (ಎಂ) ಸೇತುವೆ ಮುಳುಗಡೆ ಭೀತಿ
Share this Article
  • FB
  • TW
  • Linkdin
  • Email

ಸಾರಾಂಶ

Flood: Fear to dip Bridge in Shahapur

- ಕೊಳ್ಳೂರು (ಎಂ) ಸೇತುವೆಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

------

ಕನ್ನಡಪ್ರಭ ವಾರ್ತೆ ಶಹಾಪುರ

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಈಗಾಲೇ ಒಂದೂವರೆ ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಸೇತುವೆಗೆ ಮುಳುಗಡೆ ಭೀತಿ ಶುರುವಾಗಿದೆ. ಬೀದರ್‌ -ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ 150 ಮಾರ್ಗದಲ್ಲಿ ಬರುವ, ಕಲಬುರಗಿ-ಯಾದಗಿರಿ- ರಾಯಚೂರು ಜಿಲ್ಲೆಗಳ ಸಂಪರ್ಕಿಸುವ ಪ್ರಮುಖ ಸೇತುವೆ ಇದಾಗಿದೆ.

ಸೇತುವೆ ಮುಳುಗಡೆಗೆ ಇನ್ನೂ ಎರಡರಿಂದ ಮೂರು ಅಡಿಗಳಷ್ಟು ಮಾತ್ರ ಬಾಕಿ ಉಳಿದಿದೆ. ಅತ್ತ ಮಹಾರಾಷ್ಟ್ರದಲ್ಲಿ ಕ್ಷಣಕ್ಷಣಕ್ಕೂ ವರುಣಾರ್ಭಟ ಜೋರಾಗಿದ್ದು, ಆಲಮಟ್ಟಿ ಜಲಾಶಯದಕ್ಕೆ ನೀರಿ ಹರಿದು ಬರುತ್ತಿದೆ. ಇದಕ್ಕೆ ಸಮಾನಾಂತರ ಜಲಾಶಯವಾದ ಬಸವ ಸಾಗರಕ್ಕೂ ಆಲಮಟ್ಟಿಯಿಂದ ಒಳಹರಿವು ಹೆಚ್ಚಿದ್ದು, ಬಸವ ಸಾಗರ ಜಲಾಶಯದ ಮಟ್ಟ ಕಾಯ್ದುಕೊಂಡು ಕೃಷ್ಣಾ ಯಾವುದೇ ಕ್ಷಣದಲ್ಲಿ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದರಿಂದಾಗಿ ಕೊಳ್ಳೂರು (ಎಂ) ಸೇತುವೆ ಮುಳುಗಡೆ ಭೀತಿ ಶುರುವಾಗಿದೆ. ನದಿಪಾತ್ರದ ಜನರು ಜಾಗೃತರಾಗಿರಬೇಕು, ಅಲ್ಲದೆ ಸುರಕ್ಷಿತ ಜಾಗಕ್ಕೆ ಸ್ಥಳಾಂತಗೊಳ್ಳಬೇಕೆಂದು ಜಿಲ್ಲಾಡಳಿತ ಈಗಾಗಲೇ ನದಿಪಾತ್ರದ ಜನರಿಗೆ ಸೂಚನೆ ನೀಡಿದ್ದಾರೆ.

ಸೇತುವೆ ಪರಿಶೀಲಿಸಿದ ಡೀಸಿ: ಕೊಳ್ಳೂರು (ಎಂ) ಸೇತುವೆಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಸುಶೀಲಾ, ಪರಿಶೀಲನೆ ನಡೆಸಿದರು. ಅಲ್ಲದೆ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ನೋಡಿಕೊಳ್ಳಬೇಕು. ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ಧಾವಿಸಬೇಕೆಂದು ಮುನ್ನೆಚ್ಚರಿಕೆ ವಹಿಸಲು ತಾಲೂಕು ಆಡಳಿತಕ್ಕೆ ನಿರ್ದೇಶನ ನೀಡಿದರು.ಅಲ್ಲದೆ ಆಯಾ ಗ್ರಾ.ಪಂ ಪಿಡಿಓ, ಕಂದಾಯ ಇಲಾಖೆಯ ಸಿಬ್ಬಂದಿ ನದಿ ಪಾತ್ರದ ಕೊಳ್ಳೂರು (ಎಂ), ಮರಕಲ್, ಗೌಡೂರ, ಟೊಣ್ಣೂರ, ಕೊಂಕಲ್, ಹಯ್ಯಾಳ (ಬಿ) ಭಾಗದ ಯಕ್ಷಿಂತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಾಲೂಕು ದಂಡಾಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಸೇತುವೆ ಮುಳುಗಡೆ ಸಾಧ್ಯತೆ ಇದ್ದು, ದೇವದುರ್ಗ- ಶಹಾಪುರ ಸಂಪರ್ಕ ಸ್ಥಗಿತಗೊಳ್ಳಲಿದೆ. ಸೇತುವೆ ಬಳಿ ಸದಾ ಪೊಲೀಸ್‌ ಕಾವಲು ಹಾಕಿದ್ದು, ಸೇತುವೆ ಮುಳುಗಡೆಯಾದಲ್ಲಿ ಸಂಚಾರ ಸ್ಥಗಿತಗೊಳಿಸಬೇಕಿದೆ. ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ತಹಶೀಲ್ದಾರ ಉಮಾಕಾಂತ ಹಳ್ಳಿ, ತಾಲೂಕು ಪಂಚಾಯತ್‌ ಅಧಿಕಾರಿ ಸೋಮಶೇಖರ ಬಿರಾದಾರ, ಪೊಲೀಸ್ ಸಿಬ್ಬಂದಿ ಸೇರಿದಂತೆ ಮುಂತಾದವರಿದ್ದರ.

----

----ಕೋಟ್‌-1 -----

ಜಿಲ್ಲೆಯಲ್ಲಿ ಕೃಷ್ಣಾ ನದಿ ಮತ್ತು ಭೀಮಾ ನದಿ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದ್ದು, ಈಗಾಗಲೇ ಶಹಾಪುರಿನ ಭೀಮಾನದಿ ಪ್ರವಾಹದಿಂದ ಸನ್ನತಿ ಸೇತುವೆ ಹಿನ್ನೀರಿನಿಂದ ಹುರುಸಗುಂಡಿಗಿ ಗ್ರಾಮಸ್ಥರು ಸೇರಿದಂತೆ ಕೃಷ್ಣಾ ನದಿ ಪಾತ್ರದ ಹತ್ತಾರು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಕ್ಷಣದಲ್ಲಿ ನೀರು ಬರುವ ಸಾಧ್ಯತೆ ಇದೆ. ಕಾರಣ ಯಾರೊಬ್ಬರೂ ನದಿಗೆ ಇಳಿಯುವದಾಗಲೀ, ಸಮೀಪ ಹೋಗುವಂತಿಲ್ಲ. ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳ ಕಂಡುಕೊಳ್ಳಬೇಕು. ಉಳಿದಂತೆ ಪ್ರವಾಹದಿಂದ ಸಮಸ್ಯೆ ಉಂಟಾದಲ್ಲಿ ಎದುರಿಸಲು ಭೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. : - ಡಾ. ಬಿ. -ಸುಶೀಲಾ, ಜಿಲ್ಲಾಧಿಕಾರಿಗಳು ಯಾದಗಿರಿ.

---- ಕೋಟ್‌-----

ಪ್ರವಾಹ ಬಂದಾಗ ಗ್ರಾಮಕ್ಕೆ ಬರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸುಳ್ಳು ಭರವಸೆ ನೀಡಿ ಹೋಗುತ್ತಾರೆ. ಆದರೆ ಮತ್ತೆ ಮಳೆಗಾಲ ಬಂದಾಗ ಮತ್ತದೇ ಗೋಳು ಶುರುವಾಗುತ್ತದೆ. ನಮಗೆ ಶಾಶ್ವತ ಪರಿಹಾರ ನೀಡಬೇಕು. ಇಲ್ಲದೆ ಹೋದರೆ ನಾವು ನ್ಯಾಯಾಲಯದ ಮೆಟ್ಟಿಲು ಹತ್ತಬೇಕಾಗುತ್ತದೆ.

-ಶಿವರೆಡ್ಡಿ ಪಾಟೀಲ್, ಕೊಳ್ಳೂರು ಗ್ರಾಮದ ರೈತ ಮುಖಂಡ.

-----

ಫೋಟೊ: 24ವೈಡಿಆರ್‌12

ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಸೇತುವೆ ವೀಕ್ಷಿಸಿ ಸಮಗ್ರ ಮಾಹಿತಿ ಪಡೆದುಕೊಂಡು ಜಿಲ್ಲಾಧಿಕಾರಿ ಡಾ. ಸುಶೀಲಾ.

---000---