ಫೆ.11ಕ್ಕೆ ಉಚಿತ ಉದ್ಯೋಗ ಮೇಳ : ಎಂ. ಜಿ. ಹಿರೇಮಠ

| Published : Feb 10 2024, 01:49 AM IST

ಸಾರಾಂಶ

ಅಕ್ಕಮಹಾದೇವಿ ಮಹಿಳಾ ಕಾಲೇಜನಲ್ಲಿ ಫೆ.೧೧ ರ ಬೆಳಗ್ಗೆ ೯-೩೦ ರಿಂದ ಸಂಜೆ ೫-೩೦ ವರೆಗೆ ಆಯೋಜಿಸಲಾಗಿದೆ

ಕನ್ನಡಪ್ರಭ ವಾರ್ತೆ ಬೈಲಹೊಂಗಲಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರೂಪಿಸಿದ ಮಾರ್ಗ ಸಂಸ್ಥೆಯಿಂದ ನಾಡಿನ ವಿದ್ಯಾವಂತ ನಿರುದ್ಯೋಗಿಗಳಿಗೆ ಅನುಕೂಲತೆ ನೀಡಬೇಕೆನ್ನುವ ಉದ್ದೇಶದಿಂದ ಉಚಿತ ಉದ್ಯೋಗ ಮೇಳವನ್ನು ಪಟ್ಟಣದ ಚನ್ನಮ್ಮ ಸಮಾಧಿ ರಸ್ತೆಯ, ಅಕ್ಕಮಹಾದೇವಿ ಮಹಿಳಾ ಕಾಲೇಜನಲ್ಲಿ ಫೆ.೧೧ ರ ಬೆಳಗ್ಗೆ ೯-೩೦ ರಿಂದ ಸಂಜೆ ೫-೩೦ ವರೆಗೆ ಆಯೋಜಿಸಲಾಗಿದೆ ಎಂದು ಬೆಳಗಾವಿ ನಿವೃತ್ತ ಪ್ರಾದೇಶಿಕ ಆಯುಕ್ತ ಎಂ. ಜಿ. ಹಿರೇಮಠ ಹೇಳಿದರು.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ವಿವಿಧ ಹೆಸರಾಂತ ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಆಸಕ್ತ ೭ ನೇ ತರಗತಿ, ಎಸ್.ಎಸ್.ಎಲ್.ಸಿ., ಬಿಎ, ಬಿಎಸ್ಸಿ, ಬಿಕಾಂ, ಬಿಇ, ಐ.ಟಿ.ಐ ಸೇರಿದಂತೆ ಯಾವುದೇ ಪದವಿ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಈ ಭಾಗದ ಬೈಲಹೊಂಗಲ, ಸವದತ್ತಿ, ರಾಮದುರ್ಗ, ಕಿತ್ತೂರ ಸೇರಿ ವಿವಿಧ ತಾಲೂಕಿನವರು ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

HTTPS://SITES. GOOGLE.COM/VIEW/DSDOBELAGAVI ವಿಳಾಸಕ್ಕೆ ಭೇಟಿ ನೀಡಿ ಉಚಿತ ನೋಂದಣಿ ಮಾಡಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪ್ರೊ.ಸಿ.ಎಂ. ಕುಲಕರ್ಣಿ ಮಾತನಾಡಿ, ಜಿಲ್ಲಾಧಿಕಾರಿಗಳಾಗಿ, ಜಿಲ್ಲೆಯ ಪ್ರಾದೇಶಿಕ ಆಯುಕ್ತರಾಗಿ ಸೇವೆ ಸಲ್ಲಿಸಿದ ನಮ್ಮ ನಾಡಿನ ಎಂ.ಜಿ. ಹಿರೇಮಠ ಅವರು ನಾಡಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಮಾರ್ಗ ಸಂಸ್ಥೆಯನ್ನು ಹುಟ್ಟು ಹಾಕಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಿದ್ದಾರೆ. ಈಗ ನಿರುದ್ಯೋಗ ವಿದ್ಯಾವಂತರ ಭವಿಷ್ಯ ರೂಪಿಸಲು ಉಚಿತ ಉದ್ಯೋಗ ಮೇಳ ಆಯೋಜಿಸಿದ್ದು, ಇದರ ಆಯೋಜನೆಯನ್ನು ಮೇಲಿಂದ ಮೇಲೆ ಹಮ್ಮಿಕೊಳ್ಳುವ ಯೋಜನೆ ಹೊಂದಿದ್ದಾರೆ ಎಂದರು.ವಿ.ಬಿ.ಗುರವನ್ನವರ, ಎಸ್.ಎಸ್. ಅಬ್ಬಾಯಿ, ಮಲ್ಲೇಶ ಬೊಳತ್ತಿನ ಇದ್ದರು.