ಸಾರಾಂಶ
ಸ್ನೇಹಿತರ ಬಳಗದಿಂದ ಪ್ರತಿ ತಿಂಗಳು ವಾರ್ಡ್ ನಂ. ೩೦, ೩೧ನೇ ವಾರ್ಡ್‌ಗಳಲ್ಲಿರುವ ಬಡ ಕುಟುಂಬಗಳನ್ನು ಗುರುತಿಸಿ ಅನಾರೋಗ್ಯದಿಂದ ಬಳಲುತ್ತಿದ್ದರೇ ಉಚಿತ ಔಷಧಿಗಳನ್ನು ನೀಡುವ ಕಾರ್ಯವನ್ನು ೨೦೨೧ರಿಂದ ಮಾಡಿಕೊಂಡು ಬರುತ್ತಿದ್ದೇವೆ. ಅದೇ ರೀತಿ ನಗರದ ೧ನೇ ಮತ್ತು ೧೭ನೇ ವಾರ್ಡ್‌ನಲ್ಲಿ ಈ ತಿಂಗಳಿನಿಂದ ಪ್ರಾರಂಭಿಸಲಾಗಿದೆ. ಅಲ್ಲದೇ ಈ ವಾರ್ಡ್‌ನಲ್ಲಿ ಯಾರಾದರೂ ಮೃತರಾದರೇ ಅವರ ಅಂತ್ಯಸಂಸ್ಕಾರಕ್ಕಾಗಿ ೫ ಸಾವಿರ ಸಹಾಯಧನವನ್ನು ಕೊಡುವಂತಹ ಯೋಜನೆಯನ್ನು ಸಹ ನಾವು ಮಾಡಿದ್ದೇವೆ ಎಂದು ಸಮಾಜ ಸೇವಕ ರಮೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಸ್ವ ಪ್ರೇರಣೆಯಿಂದ ಅವರಿಗೆ ಅನುಕೂಲಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಪ್ರಾರಂಭವಾದ ಸುಜಾತ ರಮೇಶ್ ಸ್ನೇಹಿತರ ಬಳಗ ಇಂದು ಹಲವು ಸೇವಾಕಾರ್ಯಗಳನ್ನು ಮಾಡುತ್ತ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದೆ ಎಂದು ಡಾ. ರಜತ್ ಹೇಳಿದರು.ನಗರಸಭೆ ಸದಸ್ಯೆ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ ನಗರದ ವಾರ್ಡ್ ನಂ. ೧ರ ಕಂತೇನಹಳ್ಳಿ, ಸರಸ್ವತಿಪುರಂ ಮತ್ತು ವಕೀಲರಾದ ವಿವೇಕ್‌ರವರ ನೇತೃತ್ವದಲ್ಲಿ ಹೆಂಜಗೊಂಡನಹಳ್ಳಿಯ ೧೭ನೇ ವಾರ್ಡ್‌ನಲ್ಲಿ ಬಡ ಕುಟುಂಬಗಳಿಗೆ ಉಚಿತ ಔಷಧಿಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನದಲ್ಲಿ ಪ್ರತಿಯೊಬ್ಬರು ತಮ್ಮ ದುಡಿಮೆಯ ಜತೆಯಲ್ಲಿ ಸೇವಾಕಾರ್ಯಗಳಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಿದೆ. ಸಮಾಜದಲ್ಲಿ ಹಲವು ಬಡ ಕುಟುಂಬಗಳಿದ್ದು, ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹ ಕುಟುಂಬಗಳಿಗೆ ತಮ್ಮಲ್ಲಾಗುವ ಅನುಕೂಲಕ್ಕೆ ತಕ್ಕಂತೆ ಸೇವೆಯನ್ನು ಮಾಡಲು ಎಲ್ಲರೂ ಮುಂದಾಗುವಂತೆ ಹೇಳಿದರು.ಸಮಾಜ ಸೇವಕ ರಮೇಶ್ ಮಾತನಾಡಿ, ಸ್ನೇಹಿತರ ಬಳಗದಿಂದ ಪ್ರತಿ ತಿಂಗಳು ವಾರ್ಡ್ ನಂ. ೩೦, ೩೧ನೇ ವಾರ್ಡ್‌ಗಳಲ್ಲಿರುವ ಬಡ ಕುಟುಂಬಗಳನ್ನು ಗುರುತಿಸಿ ಅನಾರೋಗ್ಯದಿಂದ ಬಳಲುತ್ತಿದ್ದರೇ ಉಚಿತ ಔಷಧಿಗಳನ್ನು ನೀಡುವ ಕಾರ್ಯವನ್ನು ೨೦೨೧ರಿಂದ ಮಾಡಿಕೊಂಡು ಬರುತ್ತಿದ್ದೇವೆ. ಅದೇ ರೀತಿ ನಗರದ ೧ನೇ ಮತ್ತು ೧೭ನೇ ವಾರ್ಡ್‌ನಲ್ಲಿ ಈ ತಿಂಗಳಿನಿಂದ ಪ್ರಾರಂಭಿಸಲಾಗಿದೆ. ಅಲ್ಲದೇ ಈ ವಾರ್ಡ್‌ನಲ್ಲಿ ಯಾರಾದರೂ ಮೃತರಾದರೇ ಅವರ ಅಂತ್ಯಸಂಸ್ಕಾರಕ್ಕಾಗಿ ೫ ಸಾವಿರ ಸಹಾಯಧನವನ್ನು ಕೊಡುವಂತಹ ಯೋಜನೆಯನ್ನು ಸಹ ನಾವು ಮಾಡಿದ್ದೇವೆ ಎಂದರು.
ಕರವೇ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ಗುಡಿಸಲಿನಲ್ಲಿ ವಾಸಿಸುತ್ತಿದ್ದ ಮಹಿಳೆಗೆ ಮನೆಯನ್ನು ಸಹ ಕಟ್ಟಿಸಿಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿರುವ ಬಳಗ ಇದ್ದಾಗಿದೆ. ಇಂತಹ ಸೇವಾ ಕಾರ್ಯಗಳನ್ನು ಉಳ್ಳವರು ತಮ್ಮ ವ್ಯಾಪ್ತಿಯಲ್ಲಿ ಮಾಡಿದರೇ ಸಮಾಜದ ಬಡ ವರ್ಗಕ್ಕೆ ಅನುಕೂಲವಾಗಲಿದೆ ಎಂದರು.ಈ ಸಂದರ್ಭದಲ್ಲಿ ಉಮೇಶ್ ನಾಯ್ಕ, ಸರಸ್ವತಿಪುರಂ ಮಂಜು ಉಪಸ್ಥಿತರಿದ್ದರು.