ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಜೆಪಿಯ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಸಂಪೂರ್ಣ ಮರೆತಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಯುಕ್ತಾ ಪಾಟೀಲ ಅವರ ಆಯ್ಕೆ ಅವಶ್ಯವಾಗಿದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರ ಗುರುವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿವೆ. ಸಂಸದ ಪಿ.ಸಿ.ಗದ್ದಿಗೌಡರ ಅವರು 20 ವರ್ಷದ ಅವಧಿಯಲ್ಲಿ ಅಭಿವೃದ್ಧಿಯನ್ನೆ ಮರೆತುಬಿಟ್ಟಿದ್ದಾರೆ. ಸಂಯುಕ್ತಾ ಪಾಟೀಲ ಅವರು ಗೆಲುವಾದರೆ ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವವನ್ನೇ ಸೃಷ್ಟಿಸಲಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಗೆದ್ದೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ಮತ ನೀಡಿ. ನಿಮ್ಮ ಮನೆ ಮಗಳೆಂದು ನನಗೆ ಆಶೀರ್ವಾದ ಮಾಡಿ. ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿಯೇ ನನ್ನ ಮೂಲ ಧ್ಯೇಯವಾಗಿದೆ, ನಿಮ್ಮ ಮನೆ ಮಗಳಾಗಿ ಕಾರ್ಯ ಮಾಡುತ್ತೇನೆ ಎಂದು ಭರವಸೆ ನೀಡಿದರು.ಮುಖಂಡ ಬಿ.ಎಸ್. ಸಿಂಧೂರ ಮಾತನಾಡಿ, ಸಂಯುಕ್ತಾ ಪಾಟೀಲ ಅವರಲ್ಲಿ ಯುವ ನಾಯಕಿಯ ಲಕ್ಷಣಗಳಿವೆ. ಜನಸಾಮಾನ್ಯರ ಜೊತೆ ಬೆರೆಯುತ್ತ ಕ್ಷೇತ್ರದ ನಾಡಿಮಿಡಿತ ಅರಿತಿದ್ದಾರೆ. ಈ ಸಾರಿ ಲೋಕಸಭಾ ಚುನಾವಣೆಯಲ್ಲಿ ಸಂಯುಕ್ತಾ ಪಾಟೀಲ ಅವರು 2 ಲಕ್ಷ ಮತಗಳ ಅಂತರದಿಂದ ಗೆದ್ದು ಇತಿಹಾಸ ಸೃಷ್ಠಿಸಲಿದ್ದಾರೆ. ಅದಕ್ಕೆ ಎಲ್ಲರು ಆಶೀರ್ವಾದ ಮಾಡಬೇಕು ಎಂದು ಕೇಳಿಕೊಂಡರು.
ಜವಳಿ ನಿಗಮದ ಮಾಜಿ ಉಪಾಧ್ಯಕ್ಷ ನಜೀರ ಕಂಗನೊಳ್ಳಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರಿಗಾಗಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿನ ಬಡವರು ಇಂದು ಸಂತೋಷದಿಂದ ಇರಲು ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆ ಕಾರಣಗಳಾಗಿವೆ. ಕಾಂಗ್ರೆಸ್ ಪಕ್ಷ ಬಡವರ ಅಭಿವೃದ್ಧಿ ಬಯಸುತ್ತದೆ. ಆದರೆ, ಬಿಜೆಪಿಯವರು ಉದ್ಯಮಿಗಳ ಅಭಿವೃದ್ಧಿಯನ್ನೇ ಬಯಸುತ್ತಾರೆ ಎಂದು ಆರೋಪಿಸಿದರು.ಮುತ್ತಣ್ಣ ಹಿಪ್ಪರಗಿ, ಶ್ರೀಶೈಲ ದಳವಾಯಿ, ಎನ್.ಎಸ್.ದೇವರವರ ಮಾತನಾಡಿದರು. ಈ ವೇಳೆ ಗ್ರಾಮದ ಪ್ರಮುಖರು ಕಂಬಳಿ ಹೊದಿಸಿ ಪೇಟಾ ಸುತ್ತಿ ಸಂಯುಕ್ತ ಪಾಟೀಲ ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರನ್ನು ಸನ್ಮಾನಿಸಿದರು. ಈಶ್ವರ ವಾಳೆನ್ನವರ, ಕಲ್ಲಪ್ಪ ಗಿರಡ್ಡಿ, ರವಿ ಯಡಹಳ್ಳಿ, ನಿಂಗಪ್ಪ ಗಸ್ತಿ, ಮಹಿಬೂಬ ಪೆಂಡಾರಿ, ಸಿದ್ದಪ್ಪ ಎಣ್ಣಿ ಇತರರು ಇದ್ದರು.
ಕೋಟ್..ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ಮತ ನೀಡಿ. ನಿಮ್ಮ ಮನೆ ಮಗಳೆಂದು ನನಗೆ ಆಶೀರ್ವಾದ ಮಾಡಿ. ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿಯೇ ನನ್ನ ಮೂಲ ಧ್ಯೇಯವಾಗಿದೆ, ನಿಮ್ಮ ಮನೆ ಮಗಳಾಗಿ ಕಾರ್ಯ ಮಾಡುತ್ತೇನೆ.
ಸಂಯುಕ್ತಾ ಪಾಟೀಲ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ-----
ಸಂಸದ ಪಿ.ಸಿ.ಗದ್ದಿಗೌಡರ ಅವರು 20 ವರ್ಷದ ಅವಧಿಯಲ್ಲಿ ಅಭಿವೃದ್ಧಿಯನ್ನೆ ಮರೆತುಬಿಟ್ಟಿದ್ದಾರೆ. ಸಂಯುಕ್ತಾ ಪಾಟೀಲ ಅವರು ಗೆಲುವಾದರೆ ಇಡಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಪರ್ವವನ್ನೆ ಸೃಷ್ಠಿಸಲಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಗೆದ್ದೆ ಗೆಲ್ಲುತ್ತಾರೆ.ಆನಂದ ನ್ಯಾಮಗೌಡ. ಮಾಜಿ ಶಾಸಕ
--