ಸಾರಾಂಶ
ಕನ್ನಡಪ್ರಭ ವಾರ್ತೆ ಚೇಳೂರುಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿವರ್ಷ ರೂಪಿಸಿರುವ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿ ಗ್ರಾಮಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಗ್ರಾಮ ಪಂಚಾಯಿತಿಗಳಿಗೆ ನೀಡುವ ಗ್ರಾಂಧಿ ಗ್ರಾಮ ಪುರಸ್ಕಾರಕ್ಕೆ ೨೦೨೩-೨೪ನೇ ಸಾಲಿನಲ್ಲಿ ತಾಲೂಕಿನ ಏನಿಗದಲೆ ಗ್ರಾಮ ಪಂಚಾಯಿತಿ ಭಾಜನವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಾಲೂಕಿಗೆ ಒಂದ ರಂತೆ ೨೦೨೩-೨೪ನೇ ಸಾಲಿನಲ್ಲಿ ೮ ಪಂಚಾಯಿತಿಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಇದರಲ್ಲಿ ನೂತನ ಚೇಳೂರು ತಾಲೂಕಿನಿಂದ ಏನಿಗದಲೆ ಗ್ರಾಪಂ ಆಯ್ಕೆಯಾಗಿದೆ. ನೂತನ ತಾಲೂಕಿನಲ್ಲೇ ಮೊದಲ ಬಾರಿಗೆ ಆಯ್ಕೆಯಾಗಿದ್ದು ಹೆಗ್ಗಳಿಕೆಗೆ ಪಾತ್ರವಾಗಿದೆ.ಗ್ರಾಮಗಳಿಗೆ ಉತ್ತಮ ಸೌಲಭ್ಯಸರ್ಕಾರದ ಅನುದಾನ ಬಳಸಿ, ಗ್ರಾಮಗಳಿಗೆ ಅಗತ್ಯ ಸೌಕರ್ಯ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯಾನ, ಕಾಂಪೌಂಡ್, ಶೌಚಾಲಯ, ಶುದ್ಧ ನೀರಿನ ವ್ಯವಸ್ಥೆ, ಹೊಗೆಮುಕ್ತ ಗ್ರಾಮ, ಸಿಸಿ ರಸ್ತೆ, ನಮ್ಮ ಗ್ರಾಮ ನಮ್ಮ ರಸ್ತೆ ನಿರ್ಮಾಣ, ಗ್ರಂಥಾಲಯ ಸೇವೆ ಕಲ್ಪಿಸಲಾಗಿದೆ. ಹೀಗೆ ಹಲವಾರು ಯೋಜನೆ ಬಳಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವುದರಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.ಆ.2ರಂದು ಪ್ರಶಸ್ತಿ ಪ್ರದಾನ
ಪುರಸ್ಕಾರ ಪ್ರದಾನ: ೨೦೨೩-೨೪ನೇ ಸಾಲಿನ ಗಾಂಧಿ ಪುರಸ್ಕಾರ ಗ್ರಾಮವನ್ನಾಗಿ ಏನಿಗದಲೆ ಗ್ರಾಂ ಪ ಆಯ್ಕೆಯಾಗಿದ್ದು, ಅ.೨ರಂದು ಗಾಂಧಿ ಜಯಂತಿ ದಿನ ದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಗ್ರಾಪಂ ಅಧ್ಯಕ್ಷರು, ಪಿಡಿಒ, ತಾಪಂ ಇಒ ಹಾಗೂ ಸದಸ್ಯರಿಗೆ ಪುರಸ್ಕರಿಸಿ ೫ ಲಕ್ಷ ರೂ. ನಗದು ಮತ್ತು ಪಾರಿ ತೋಷಕವನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಪ್ರದಾನ ಮಾಡಲಿದ್ದಾರೆ.ಗ್ರಾಪಂ ಪ್ರಶಸ್ತಿ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಪಿಡಿಒ ಶೈಲಜಾ ಅವರು, ನಮ್ಮ ಸಿಬ್ಬಂದಿ, ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರು, ಗ್ರಾಮಸ್ಥರ ಸಹಕಾರ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಈ ಎಲ್ಲಾ ಅಭಿವೃದ್ಧಿ ನಡೆಸಿದ್ದು ಅದಕ್ಕಾಗಿ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಈ ಪ್ರಶಸ್ತಿಯು ಪ್ರೇರಣೆ ಆಗಿದೆ ಎಂದರು.