ಮುಂಬರುವ ಜಿಪಂ, ತಾಪಂ ಚುನಾವಣೆಗೆ ಸಿದ್ಧರಾಗಿ

| Published : Jun 09 2024, 01:36 AM IST

ಸಾರಾಂಶ

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಾಗಿ ಮುಂಬರುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಎದುರಿಸುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನ ಜನತೆ ಪ್ರೀತಿ ವಿಶ್ವಾಸದಿಂದ ತಮ್ಮ ಮೇಲೆ ನಂಬಿಕೆ ಇಟ್ಟು ೨ನೇ ಬಾರಿಗೆ ಶಾಸಕರಾಗಲು ಅವಕಾಶ ಕಲ್ಪಿಸಿದ್ದು, ತಾಲೂಕಿನ ಜನತೆಯ ಋಣ ತೀರಿಸುವ ಸಲುವಾಗಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.ತಾಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ ಶಾಸಕರ ಅಭಿಮಾನಿಗಳು ಹಮ್ಮಿಕೊಂಡಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅಭಿನಂದನೆಗಳು ಸ್ವೀಕರಿಸಿ ಮಾತನಾಡಿ, ಬಡ ರೈತ ಕುಟುಂಬದಲ್ಲಿ ಜನಿಸಿದ ನಾನು ನಮ್ಮ ಕುಟುಂಬವನ್ನು ತಾಲೂಕಿನ ಜನತೆ ಗ್ರಾಪಂ ಸದಸ್ಯನಾಗಿ ಬಳಿಕ ಶಾಸಕರಾಗಿ ೨ನ ಬಾರಿಗೆ ಆಯ್ಕೆ ಮಾಡಿ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಾರೆ ಎಂದರು. ಸಚಿವ ಸ್ಥಾನ ಬೇಡ, ಅಭಿವೃದ್ಧಿಗೆ ನೆರವಾಗಿ

ನನಗೆ ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನ ಬೇಡವೆಂದು ಮುಖ್ಯಮಂತ್ರಿಗಳಿಗೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದ್ದೆನೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಾಗಿ ಮುಂಬರುವ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಎದುರಿಸುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಆಡಳಿತದಲ್ಲಿದ್ದು, ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಹೆಚ್ಚುವರಿ ಅನುದಾನ ತಂದಿದ್ದು, ಅಭಿವೃದ್ಧಿ ಕೆಲಸಗಳು ಆರಂಭವಾಗಿದೆ. ತಾಲೂಕಿನ ಜನತೆ ಮತ್ತಷ್ಟು ಶಕ್ತಿ ನೀಡಿದರೆ ಸರ್ಕಾರದಿಂದ ಹೆಚ್ಚಿನ ಅನುದಾನಗಳನ್ನು ತಂದು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಅಭಿಮಾನಿಗಳಿಗಾಗಿ ಆಚರಣೆ

ತಾಲೂಕಿನ ಜನತೆಯ ಶಾಂತಿ ನೆಮ್ಮದಿ ಮುಖ್ಯ ನಾನು ಸದಾ ಜನರೊಂದಿಗೆ ಇರುವ ಸಾಮಾನ್ಯ ವ್ಯಕ್ತಿಯಾಗಿದ್ದು ನನ್ನ ಹುಟ್ಟುಹಬ್ಬವನ್ನು ಎಂದಿಗೂ ಆಡಂಬರವಾಗಿ ಆಚರಣೆ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ ಆದರೂ ಸಹ ನನ್ನ ಅಭಿಮಾನಿಗಳು ಅಭಿಮಾನದಿಂದ ಹುಟ್ಟುಹಬ್ಬ ಕಾರ್ಯಕ್ರಮವನ್ನು ಪರಿಸರ ನಿರ್ವಹಣೆಗಾಗಿ ಗಿಡಗಳ ವಿತರಣೆ,ಅರ್ಥಿಕವಾಗಿ ಹಿಂದುಳಿಂದ ಕುಟುಂಬಗಳಿಗೆ ಅರ್ಥಿಕ ಸಹಕಾರ ನೀಡುವ ಮೂಲಕ ತಾಲೂಕಿನ ಕೆಲವು ಭಾಗಗಳಲ್ಲಿ ಆಚರಣೆ ಮಾಡಿದ್ದಾರೆ. ತಾಲೂಕಿನ ಜನತೆ ಹಾಗೂ ನನ್ನ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಜಿ.ಮಧುಸೂದನ್, ಎಚ್.ಎಂ.ವಿಜಯನರಸಿಂಹ, ಕೆಪಿಸಿಸಿ ಸದಸ್ಯರುಗಳಾದ ಅಂಜನಿ ಸೋಮಣ್ಣ, ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನರಾಯಪ್ಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹೀಂ ಉಲ್ಲಾ ಖಾನ್, ಜಿ.ಪಂ ಮಾಜಿ ಅಧ್ಯಕ್ಷ ರತ್ನಮ್ಮ ನಂಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಕೆಪಿಸಿಸಿ ಸದಸ್ಯ ಪ್ರವೀಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ, ಮತ್ತಿತರರು ಹಾಜರಿದ್ದರು.