ಸಾರಾಂಶ
ಕನ್ನಡಪ್ರಭ ವಾರ್ತೆ ಟೇಕಲ್
ಟೇಕಲ್‌ನ ಕೆ.ಜಿ.ಹಳ್ಳಿಯ ಗೋಮಾಳ ಸರ್ವೆ ನಂ.73 ಹಾಗೂ 10 ರಲ್ಲಿ ಅಕ್ರಮವಾಗಿ ನಿವೇಶನ ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಯಾವುದೇ ಕಾರಣಕ್ಕೂ ಇಂತಹ ಅಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಕೆ.ವೈ.ನಂಜೇಗೌಡರು ಎಚ್ಚರಿಸಿದರು.ಅವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಮನೆ ಇಲ್ಲದ ಕುಟುಂಬಗಳನ್ನು ಕೆ.ಜಿ.ಹಳ್ಳಿ ಗ್ರಾಪಂ ಪಟ್ಟಿ ಮಾಡಲಿ. ಅವರಿಗೆ ನಿವೇಶನವನ್ನು ನೀಡಲು ತಹಸೀಲ್ದಾರ್ ರವರು ಕಾನೂನುಬದ್ಧ ವ್ಯವಸ್ಥೆ ಮಾಡುತ್ತಾರೆ. ಇನ್ನಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಳ್ಳಲು ಬಿಡಬಾರದೆಂದು ಸೂಚಿಸಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಸ್ಥಳದಲ್ಲಿದ್ದ ಕೆ.ಜಿ.ಹಳ್ಳಿ ಗ್ರಾ.ಪಂ.ಅಧ್ಯಕ್ಷರಿಗೆ ಎಸ್.ಆರ್.ಯಲ್ಲಪ್ಪ ನವರಿಗೆ ನಿವೇಶನ ರಹಿತರ ಪಟ್ಟಿ ಮಾಡಿ ಪಂಚಾಯ್ತಿಯಲ್ಲಿ ಪ್ರಸ್ತಾವನೆಗೆ ತಂದು ತಿಳಿಸಿ, ತದನಂತರ ಅವರಿಗೆ ಕಾನೂನು ಅಡಿಯಲ್ಲಿ ಸಹಕಾರ ನೀಡಲಾಗುವುದು. ಸರ್ವೆ ನಂ.73 ರಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಇದೀಗ ಸರ್ಕಾರದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದು ಆದಷ್ಟು ಬೇಗ ಆಸ್ಪತ್ರೆ ನಿರ್ಮಿಸಲಾಗುವುದು ಎಂದರು.
ಜಲಜೀವನ ಮಿಷನ್ ಅಡಿಯಲ್ಲಿ ಕೆ.ಜಿ.ಹಳ್ಳಿ ಗ್ರಾಮಕ್ಕೆ ಟೇಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಪಕ್ಕದಲ್ಲಿ ನಿರ್ಮಾಣ ಮಾಡುತ್ತಿದ್ದ ಜೆಜೆಎಂ ಓವರ್ ಹೆಡ್ ಟ್ಯಾಂಕನ್ನು ಅತೀ ಎತ್ತರದ ಪ್ರದೇಶದಲ್ಲಿ ನಿರ್ಮಿಸಬೇಕು. ಈಗಾಗಲೇ ಸುಮಾರು ಶೇ.೪೦ ಭಾಗದಷ್ಟು ಕಟ್ಟಿದ ಟ್ಯಾಂಕ್ ಕಾಮಗಾರಿಯನ್ನು ನಿಲ್ಲಿಸುವಂತೆ ಸೂಚಿಸಿದರು. ಟ್ಯಾಂಕ್ ಕಟ್ಟಲು ಇದು ಸೂಕ್ತ ಸ್ಥಳವಲ್ಲ. ಐಟಿಐ ಕಾಲೇಜು ಬಳಿ ನಿರ್ಮಿಸಿದರೆ ಕೆ.ಜಿ.ಹಳ್ಳಿ ಗ್ರಾಮಕ್ಕೆ ನೀರು ಒದಗಿಸಿದಂತೆ ಆಗುತ್ತದೆ ಎಂದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ರಮೇಶ್, ಇಒ ಕೃಷ್ಣಪ್ಪ, ಪಂಚಾಯ್ತಿ ಅಧ್ಯಕ್ಷ ಎಸ್.ಆರ್.ಯಲ್ಲಪ್ಪ, ಉಪಾಧ್ಯಕ್ಷೆ ಮಮತಶಶಿಧರ, ಉಪತಹಶೀಲ್ದಾರ್ ಮಮತಾದೇವಿ, ಆರ್.ಐ ನಾರಾಯಣಸ್ವಾಮಿ, ಮಾಜಿ ತಾ.ಪಂ.ಸದಸ್ಯೆ ಕಾಂತಮ್ಮಸಂಪಂಗಿ, ರಮೇಶ್‌ಗೌಡ, ವಿನೋದ್‌ಗೌಡ, ಪಿಡಿಒ ಮಂಜುಳ, ಎ.ಕೆ.ವೆಂಕಟೇಶ್, ಮುಂತಾದವರು ಉಪಸ್ಥಿತರಿದ್ದರು.