ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ

| Published : Dec 18 2023, 02:00 AM IST

ಸಾರಾಂಶ

ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ

ಕನ್ನಡಪ್ರಭವಾರ್ತೆ ಕೆರೂರ

ಸರ್ಕಾರಿ ಕಾಮಗಾರಿಗಳು ಕಳಪೆಯಾಗಬಾರದು. ಗುಣಮಟ್ಟದ್ದಾಗಿರಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಗುತ್ತಿಗೆದಾರರಿಗೆ ಸಲಹೆ ನೀಡಿದರು.

ಅವರು ಪಟ್ಟಣದ ತರಕಾರಿ ಮಾರುಕಟ್ಟೆಯ ಆವರಣದ ₹65 ಲಕ್ಷ ವೆಚ್ಚದ ಪ್ಲೇವರ್ಸ್‌ ಜೋಡಣೆ ಕಾಮಗಾರಿ ವೀಕ್ಷಿಸಿ ಸಲಹೆ ನೀಡಿದರು.ಕೆರೂರ ಪಟ್ಟಣದ ಹೃದಯ ಭಾಗದಲ್ಲಿರುವ ಮುಖ್ಯ ಮಾರುಕಟ್ಟೆಯಲ್ಲಿ ಮಳೆಗಾಲದ ಸಮಯದಲ್ಲಿ ನೀರು ನಿಂತು ಸರಿಯಾದ ನಿರ್ವಹಣೆಯಿಲ್ಲದೆ ಕೊಚ್ಚೆಯಂತಾಗಿ ತರಕಾರಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ತೊಂದರೆ ಅನುಭವಿಸುವಂತಾಗಿತ್ತು. ಕೆರೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾರುಕಟ್ಟೆಯ ಅವ್ಯವಸ್ಥೆ ಕಂಡು ಮುತುವರ್ಜಿ ವಹಿಸಿ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಯನ್ನು ಶೀಘ್ರ ಕೈಗೊಳ್ಳುವಂತೆ ಕ್ರಮ ಕೈಗೊಂಡಿದ್ದರು.

ಕಾರ್ತಿಕೋತ್ಸವದಲ್ಲಿ ಭಾಗಿ:ಪಟ್ಟಣದ ಚಿನಗುಂಡಿ ಪ್ಲಾಟದಲ್ಲಿರುವ ಜಾಗೃತ ಮಾರುತೇಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರು ಕಾರ್ತಿಕೋತ್ಸವದ ನಿಮಿತ್ತ ದೀಪ ಬೆಳಗಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು. ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಶ್ರೀಗಳು ಹಾಗೂ ಗುಳೇದಗುಡ್ಡದ ನೀಲಕಂಠ ಶ್ರೀಗಳು ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಪ.ಪಂ. ಮಾಜಿ ಅಧ್ಯಕ್ಷ ಬಿ.ಬಿ.ಸೂಳಿಕೇರಿ, ಪ.ಪಂ. ಸದಸ್ಯರಾದ ಮಲ್ಲಣ್ಣ ಹಡಪದ, ಯಾಸೀನ ಖಾಜಿ, ಮಾಜಿ ಸದಸ್ಯರಾದ ಸೈದುಸಾಬ ಚೌಧರಿ, ಉಸ್ಮಾನಸಾಬ ಅತ್ತಾರ, ರಫೀಕ್ ಫೀರಖಾನ, ಪ್ರಮುಖರಾದ ಭೀಮಶಿ ಬದಾಮಿ, ಯಮನಪ್ಪ ಮ್ಯಾಗೇರಿ, ಇಮಾಮಸಾಬ ಕಳ್ಳಿಮನಿ, ನಾಗೇಶ ಚಂದಾವರಿ ಸೇರಿದಂತೆ ಹಲವಾರು ಪ್ರಮುಖರಿದ್ದರು.