ಕನ್ನಡ ಭವನ ನಿರ್ಮಾಣಕ್ಕೆ ₹೨೫ ಲಕ್ಷ ಅನುದಾನ

| Published : Oct 16 2024, 12:44 AM IST

ಸಾರಾಂಶ

ಕೆಜಿಎಫ್ ವಿಧಾನಸಭೆ ಕ್ಷೇತ್ರವು ಗಡಿ ಭಾಗದಲ್ಲಿ ಇದ್ದರು ಇಲ್ಲಿ ಕಳೆದ ೬೦ ವರ್ಷದಿಂದ ತಮ್ಮದೇ ಆದ ಹೋರಾಟಗಳನ್ನು ಮಾಡುವ ಮೂಲಕ ಕನ್ನಡ ಉಳಿಸಿಬೆಳೆಸಿಕೊಂಡು ಬಂದಿರುವ ಹಲವು ಹೋರಾಟಗಾರರು ಚಳುವಳಿಗಾರರು ಇದ್ದಾರೆ ಅವರ ಸಲಹೆ ಮಾರ್ಗದರ್ಶನ ಪಡೆದು ಕನ್ನಡ ಕಟ್ಟುವ ಕೆಲಸ ಎಲ್ಲರು ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ ಕನ್ನಡ ಭವನ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿಯಿಂದ ೨೫ ಲಕ್ಷ ಅನುದಾನ ಮಂಜೂರು ಮಾಡಿರುವ ಆದೇಶದ ಪ್ರತಿಯನ್ನು ಶಾಸಕಿ ರೂಪಕಲಾಶಶಿಧರ್‌ ಕೆಜಿಎಫ್ ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನರೆಡ್ಡಿರಿಗೆ ಹಸ್ತಾಂತರಿಸಿದರು.ನಗರದ ತಾಲೂಕು ಕಚೇರಿಯಲ್ಲಿ ನಡೆದ ೬೯ನೇ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಅನುದಾನ ಮಂಜೂರು ಪತ್ರವನ್ನು ಹಸ್ತಾಂತರಿಸಿದರು.

ಪ್ರಮುಖ ಬೀದಿಗೆ ಗಣ್ಯರ ಹೆಸರು

ಕೆಜಿಎಫ್ ವಿಧಾನಸಭೆ ಕ್ಷೇತ್ರವು ಗಡಿ ಭಾಗದಲ್ಲಿ ಇದ್ದರು ಇಲ್ಲಿ ಕಳೆದ ೬೦ ವರ್ಷದಿಂದ ತಮ್ಮದೇ ಆದ ಹೋರಾಟಗಳನ್ನು ಮಾಡುವ ಮೂಲಕ ಕನ್ನಡ ಉಳಿಸಿಬೆಳೆಸಿಕೊಂಡು ಬಂದಿರುವ ಹಲವು ಹೋರಾಟಗಾರರು ಚಳುವಳಿಗಾರರು ಇದ್ದಾರೆ ಅವರ ಸಲಹೆ ಮಾರ್ಗದರ್ಶನ ಪಡೆದು ಕನ್ನಡ ಕಟ್ಟುವ ಕೆಲಸ ಎಲ್ಲರು ಮಾಡಬೇಕಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಹೆಸರಾಂತ ಸಾಹಿತಿ ಕವಿ ಹೋರಾಟಗಾರರ ಹೆಸರುಗಳ ನಾಮಫಲಕ ಹಾಕುವ ಮೂಲಕ ಗಣ್ಯರ ಹೆಸರು ಉಳಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ನಗರಸಭೆಯಲ್ಲಿ ಕನ್ನಡ ಬಳಸಿ

ಕನ್ನಡಪರ ಹೋರಾಟಗಾರ ವಿಎಸ್.ಪ್ರಕಾಶ್, ಮದಿರಪ್ಪ ಮಾತನಾಡಿ, ನಗರದ ಕುವೆಂಪು ಬಸ್ ನಿಲ್ದಾಣದಲ್ಲಿ ಕುವೆಂಪು ಪ್ರತಿಮೆ ಸ್ವಾಗತ ಕಮಾನಿನ ಮೇಲೆ ಹಾಕಿರುವುದರಿಂದ ಅವರ ಹುಟ್ಟ ಹಬ್ಬದಂದು ಮಾರ್ಲಾಪಣೆ ಮಾಡಲು ಸಾಧ್ಯವಾಗುತ್ತಿಲ್ಲ ಪ್ರತಿಮೆಗೆ ಮಾರ್ಲಾಪಣೆ ಮಾಡಲು ವ್ಯವಸ್ಥೆ ಮಾಡಬೇಕು ಮತ್ತು ಅಂಗಡಿ ಮುಂದೆ ಹಾಗೂ ನಗರಸಭೆ ಕಚೇರಿಯಲ್ಲಿ ಕನ್ನಡ ಬಳಸಬೇಕು ನಗರದ ಪ್ರಮುಖ ರಸ್ತೆಗಳಿಗೆ ಹಿಂದೆ ಇಡಲಾಗಿದ್ದ ಹೆಸರುಗಳನ್ನು ಉಳಿಸಿಕೊಳ್ಳಬೇಕು ಎಂದರು.ಸಭೆಯಲ್ಲಿ ಸಾಹಿತಿ ಕೃಷ್ಣಪ್ಪ, ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನರೆಡ್ಡಿ, ಜಿಪಂ ಮಾಜಿ ಸದಸ್ಯ ಲಕ್ಷ್ಮಿನಾರಾಯಣ, ತ್ಯಾಗರಾಜ್, ಲೋನಿ, ಶೇಖರಪ್ಪ ನಗರಸಭೆ ಅಧ್ಯಕ್ಷೆ ಇಂಧಿರಾಗಾಂಧಿದಯಶಂಕರ್, ನಗರಸಭೆ ಪೌರಾಯುಕ್ತ ಪವನ್‌ಕುಮಾರ್, ತಹಸೀಲ್ದಾರ್ ನಾಗವೇಣಿ, ಕೆಡಿಎ ಧಮೇಂದ್ರ, ಸಮಾಜ ಕಲ್ಯಾಣ ಅಧಿಕಾರಿ ಅಂಜಲಿ, ಇಒ ಮಂಜುನಾಥ್, ಸಿಡಿಪಿಒ ರಾಜೇಶ್ ಇದ್ದರು.