ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಗುರುಕುಲ ಪರಿಸರದ ಶಿಕ್ಷಣ ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಭದ್ರ ಬುನಾದಿಯಾಗಲಿದೆ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅಭಿಮತ ವ್ಯಕ್ತಪಡಿಸಿದರು.ಬಾಗೇವಾಡಿ ಜಿ.ಪಂ ಕ್ಷೇತ್ರದ ವ್ಯಾಪ್ತಿಯ ಪದ್ಮಾವತಿ ನಗರ, ಹನುಮಾನ ನಗರ, ಹಾಗೂ ಕಡಹಟ್ಡಿ ಮತ್ತು ಸಾರಾಪುರ ಮದಕರಿ ತೋಟದಲ್ಲಿ ಒಟ್ಟು ₹58 ಲಕ್ಷ ವೆಚ್ಚದಲ್ಲಿ (ತಲಾ 14.50 ರೂ ಮೊತ್ತದ) 2022-23 ನೇ ಸಾಲಿನ ವಿವೇಕ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಐದು ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದ ಅವರು, ಶಾಲೆಯ ಸುತ್ತ ಶುದ್ಧ ನಿಸರ್ಗ ನಿರ್ಮಿಸಿದಲ್ಲಿ ಮಕ್ಕಳಲ್ಲಿ ಉತ್ಸಾಹ, ಏಕಾಗ್ರತೆ, ಆತ್ಮಸ್ಥೈರ್ಯ ಸ್ವಾಭಿಮಾನದಿಂದ ಬದುಕುವ ಮನೋಭಾವನೆ ಗುರುಕುಲದಿಂದ ಶಿಕ್ಷಣ ದೊರೆಯುತ್ತದೆ ಎಂದರು.
ಕೇವಲ ಕೊಠಡಿಗಳನ್ನು ಸರ್ಕಾರ ನೀಡುವ ಬದಲು ಮೂಲ ಸೌಲಭ್ಯಗಳನ್ನು ನೀಡಬೇಕು. ಜೊತೆಗೆ ಪಾಲಕರ ಮತ್ತು ಶಾಲಾ ಸುಧಾರಣೆ ಸಮಿತಿಯವರ ಜವಾಬ್ದಾರಿಯಿಂದ ಶಾಲೆ ಪರಿಸರ ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ಸಯ್ಯದ ಅಮ್ಮಣಗಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ, ಸಿಆರ್‌ಪಿ ಜಗದೀಶ ಮಿರಗಿ, ಮಹಾವೀರ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಹಿರಾಶುಗರ ನಿರ್ದೇಶಕ ಬಸವರಾಜ ಮರಡಿ, ಅಶೋಕ ಪಟ್ಟಣಶೆಟ್ಟಿ, ಜಿಪಂ ಮಾಜಿ ಸದಸ್ಯೆ ಶೋಭಾ ಮದಕರಿ, ಮುಖಂಡ ಕೆ.ಜಿ.ಪಾಟೀಲ, ಎಸ್.ಎಂ. ಪಾಟೀಲ, ಬಸಪ್ಪ ಮದಕರಿ, ಶಂಕರ ಬಡಗಾಂವಿ, ಗ್ರಾಪಂ ಸದಸ್ಯ ಪುಟ್ಟು ಚೌಗಲಾ, ಜಿನ್ನಪ್ಪಾ ಬೆಳವಿ, ಸಿದ್ಪಪ್ಪ ಪೂಜೇರಿ, ಎಸ್‌ಡಿಎಂಸಿ ಉಪಾಧ್ಯಕ್ಷ ಜಿನ್ನಪ್ಪ ಚೌಗಲಾ, ಗುತ್ತಿಗೆದಾರ ಶಂಕರ ಗುಡಸಿ, ವಿಶ್ವನಾಥ ಗುಡಸಿ, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಪ್ರಭಾಕರ ಕಾಮತ, ವಿಜಯ ಖೋರಾಡಗಿ ಮತ್ತಿತರರು ಇದ್ದರು. ಫೋಟೊ ಶೀರ್ಷಿಕೆ : 24ಎಚ್‌ಯುಕೆ-2ಹುಕ್ಕೇರಿ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಬುಧವಾರ ಸರ್ಕಾರಿ ಶಾಲಾ ಕೊಠಡಿಗಳನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಉದ್ಘಾಟಿಸಿದರು.