ಪ್ರೇಕ್ಷಕರ ಮನ ಗೆದ್ದ ‘ಹೆಜ್ಜೆ ಗೆಜ್ಜೆ ನೂಪುರ ಝೇಂಕಾರ’

| Published : Aug 29 2025, 01:00 AM IST

ಸಾರಾಂಶ

ಮಣಿಪಾಲದ ಹೆಜ್ಜೆ ಗೆಜ್ಜೆ ಸಂಸ್ಥೆಯ ಆಯೋಜನೆಯಲ್ಲಿ ಕುಂಜಿಬೆಟ್ಟಿನ ಐವೈಸಿ ಇನ್ಫೋಸಿಸ್ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನೃತ್ಯ ವಿದುಷಿ ದೀಕ್ಷಾ ರಾಮಕೃಷ್ಣ ಅವರು ವಿಶೇಷವಾಗಿ ಸಂಯೋಜಿಸಿದ ನೂತನ ಭರತನಾಟ್ಯ ನೃತ್ಯ ಬಂಧಗಳನ್ನೊಳಗೊಂಡ ನೂಪುರ ಝೇಂಕಾರ ಭರತನಾಟ್ಯ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ, ಉಡುಪಿ

ಮಣಿಪಾಲದ ಹೆಜ್ಜೆ ಗೆಜ್ಜೆ ಸಂಸ್ಥೆಯ ಆಯೋಜನೆಯಲ್ಲಿ ಕುಂಜಿಬೆಟ್ಟಿನ ಐವೈಸಿ ಇನ್ಫೋಸಿಸ್ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ನೃತ್ಯ ವಿದುಷಿ ದೀಕ್ಷಾ ರಾಮಕೃಷ್ಣ ಅವರು ವಿಶೇಷವಾಗಿ ಸಂಯೋಜಿಸಿದ ನೂತನ ಭರತನಾಟ್ಯ ನೃತ್ಯ ಬಂಧಗಳನ್ನೊಳಗೊಂಡ ನೂಪುರ ಝೇಂಕಾರ ಭರತನಾಟ್ಯ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿ ಬಂದು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನಿರ್ದೇಶಕ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಯಕ್ಷಗಾನ ಕಲಾರಂಗ ಉಡುಪಿ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್ , ಸನಾತನ ನಾಟ್ಯಾಲಯದ ಹಿರಿಯ ನೃತ್ಯ ಗುರುಗಳಾದ ವಿದುಷಿ ಶ್ರೀಲತಾ ನಾಗರಾಜ್ , ಭರತನಾಟ್ಯ ಕಲಾವಿದ ವಿದ್ವಾನ್ ಮಂಜುನಾಥ ಎನ್. ಪುತ್ತೂರು ಮತ್ತು ಸಮಾಜ ಸೇವಾ ಧುರೀಣ ಡಾ. ಶರಣಬಸವ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಜ್ಜೆ ಹೆಜ್ಜೆ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣ ಅವರು ವಹಿಸಿದ್ದರು. ಹೆಜ್ಜೆ ಗೆಜ್ಜೆಯ 23 ಕಲಾವಿದರು ನೂಪುರ ಝೇಂಕಾರ ಭರತನಾಟ್ಯ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು. ವಿದುಷಿ ಯಶಾ ರಾಮಕೃಷ್ಣ ಸ್ವಾಗತಿಸಿದರು. ಸಂಚಾಲಕ ಡಾ. ರಾಮಕೃಷ್ಣ ಹೆಗಡೆ ವಂದಿಸಿದರು.