ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಆಡಳಿತ ಹಸ್ತಾಂತರ, ದಲಿತ ಸಿಎಂ ಬೇಡಿಕೆ ಹಾಗೂ ಕಾಂಗ್ರೆಸ್ ಒಳಜಗಳದ ಚರ್ಚೆಗಳು ಜೋರಾಗಿದೆ. ಇದೇ ಸಂದರ್ಭದಲ್ಲಿ ಸಚಿವರು ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಯಾವುದೇ ಕಾಂಗ್ರೆಸ್ ಮುಖಂಡರಿಗೂ, ಹಾಗೆಯೇ ತಮ್ಮದೇ ಇಲಾಖೆಯ ಪೊಲೀಸರಿಗೆ ಸಹ ಮಾಹಿತಿ ನೀಡದೆ, ಏಕಾಂಗಿಯಾಗಿ ಹಾಗೂ ಮಟ್ಟಿಗೆ ಗೌಪ್ಯವಾಗಿ ಮಠಕ್ಕೆ ಭೇಟಿ ನೀಡಿರುವುದು ಹಲವಾರು ಊಹಾಪೋಹಗಳಿಗೆ ತುತ್ತಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಪ್ರಸಿದ್ಧ ಸುಕ್ಷೇತ್ರವಾದ ಹಾರನಹಳ್ಳಿ ಕೋಡಿ ಮಠಕ್ಕೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಸೋಮವಾರ ಮುಂಜಾನೆ ಕೋಡಿಮಠಕ್ಕೆ ದಿಢೀರ್‌ ಭೇಟಿ ನೀಡಿ ಪೀಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆಸಿದರು. ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಆಡಳಿತ ಹಸ್ತಾಂತರ, ದಲಿತ ಸಿಎಂ ಬೇಡಿಕೆ ಹಾಗೂ ಕಾಂಗ್ರೆಸ್ ಒಳಜಗಳದ ಚರ್ಚೆಗಳು ಜೋರಾಗಿದೆ. ಇದೇ ಸಂದರ್ಭದಲ್ಲಿ ಸಚಿವರು ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಯಾವುದೇ ಕಾಂಗ್ರೆಸ್ ಮುಖಂಡರಿಗೂ, ಹಾಗೆಯೇ ತಮ್ಮದೇ ಇಲಾಖೆಯ ಪೊಲೀಸರಿಗೆ ಸಹ ಮಾಹಿತಿ ನೀಡದೆ, ಏಕಾಂಗಿಯಾಗಿ ಹಾಗೂ ಮಟ್ಟಿಗೆ ಗೌಪ್ಯವಾಗಿ ಮಠಕ್ಕೆ ಭೇಟಿ ನೀಡಿರುವುದು ಹಲವಾರು ಊಹಾಪೋಹಗಳಿಗೆ ತುತ್ತಾಗಿದೆ. ಕೋಡಿಮಠದ ಶ್ರೀಗಳು ರಾಜ್ಯದ ಅನೇಕ ಘಟನೆಗಳು, ಪ್ರಕೃತಿ ವಿಕೋಪ, ರಾಜಕೀಯ ಏರಿಳಿತಗಳ ಬಗ್ಗೆ ನೀಡುವ ತಾಳೆ ಭವಿಷ್ಯಕ್ಕಾಗಿ ಪ್ರಸಿದ್ಧರಾಗಿದ್ದು, ಮುಂದಿನ ರಾಜಕೀಯ ಪರಿಸ್ಥಿತಿಗಳನ್ನು ಕುರಿತು ಸಚಿವರು ಶ್ರೀಗಳಿಂದ ಸಲಹೆ ಪಡೆದಿರಬಹುದೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.“ಯಾವುದೇ ವಿಶೇಷ ಚರ್ಚೆ ನಡೆದಿಲ್ಲ”: ಸ್ವಾಮೀಜಿ ಸ್ಪಷ್ಟನೆಗೃಹ ಸಚಿವ ಭೇಟಿ ಕುರಿತು ಸ್ಪಷ್ಟನೆ ನೀಡಿದ ಕೋಡಿಮಠ ಶ್ರೀಗಳು, ಪರಮೇಶ್ವರ್ ಅವರು ಮಠದ ಸದ್ಭಕ್ತರು. ಆಗಾಗ ದರ್ಶನಕ್ಕೆ ಬರುತ್ತಾರೆ. ಇಂದೂ ಶಿವಲಿಂಗಜ್ಜಯ್ಯ ಮತ್ತು ನೀಲಮ್ಮಜ್ಜಯ್ಯ ಗದ್ದುಗೆ ದರ್ಶನ ಮಾಡಿ ಪೂಜೆ ಸಲ್ಲಿಸಿ ಹಿಂತಿರುಗಿದರು. ಅದರ ಹೊರತಾಗಿ ಯಾವುದೇ ರಾಜಕೀಯ ಅಥವಾ ವಿಶೇಷ ಚರ್ಚೆ ನಡೆದಿಲ್ಲ ಎಂದು ಹೇಳಿದರು. ಭವಿಷ್ಯ ಕುರಿತು ಕೇಳಿದಾಗ, ಸಂಕ್ರಾಂತಿ ಬಳಿಕ ಭವಿಷ್ಯ ಹೇಳುವ ಕಾರ್ಯಕ್ರಮ ನಡೆಯಲಿದೆ ಎಂದು ಅವರು ನಗೆಚುಮುಕಿದರು.ರಾಜಕೀಯ ವಲಯದಲ್ಲಿ ಪ್ರಶ್ನೆಗಳು ಮುಂದುವರಿಕೆ:ಇದೀಗ ಸಚಿವರ ಈ ದಿಢೀರ್, ಏಕಾಂಗಿ ಭೇಟಿ ಮತ್ತು ದೀರ್ಘ ಮಾತುಕತೆ, ರಾಜ್ಯ ರಾಜಕೀಯದ ಹಿನ್ನಲೆಯಲ್ಲಿ “ಏನೋ ವಿಶೇಷವಾಗುತ್ತಿದೆ” ಎಂಬ ಚರ್ಚೆಗೆ ಕಾರಣವಾಗಿದೆ.