ಸಾಧಕರಿಗೆ ಸನ್ಮಾನ ಕಾರ್ಯ ಸ್ತುತ್ಯಾರ್ಹ

| Published : Feb 06 2024, 01:36 AM IST

ಸಾರಾಂಶ

ಸುಮಾರು 20 ವರ್ಷಗಳಿಂದ ಹಿಡಕಲ್ ಜಲಾಶಯ ಪರಿಸರದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸಾಹಿತ್ಯದ ಅಭಿರುಚಿಗಳನ್ನು ಬೆಳೆಸುವುದರ ಜೊತೆಗೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ನಾಡಿಗೆ ಪರಿಚಯಿಸುವ ಕಾರ್ಯ ಗೆಳೆಯರ ಬಳಗದ ಸಹಕಾರದೊಂದಿಗೆ ನಮ್ಮ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಸತ್ಕರಿಸುವ ಕಾರ್ಯದಲ್ಲಿ ಮಾದರಿಯಾಗಿರುವ ಕರ್ನಾಟಕ ಪತ್ರಕರ್ತರ ಸಂಘದ ಸೇವಾ ಕಾರ್ಯವು ಅತ್ಯಂತ ಸ್ತುತ್ಯಾರ್ಹ ಎಂದು ಹಿರಿಯ ಸಾಹಿತಿ, ಕರ್ನಾಟಕ ರಾಜ್ಯ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಎಂ.ಶಿರೂರ ಹೇಳಿದರು.ಭಾನುವಾರ ನಡೆದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬೆಳಗಾವಿ ಉಪಾಧ್ಯಕ್ಷರು, ಡಾ.ಬಿ.ಆರ್‌ ಅಂಬೇಡ್ಕರ ಎಸ್.ಸಿ/ ಎಸ್. ಟಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಪ್ರಕಾಶ ಹೊಸಮನಿ ಇವರಿಗೆ ಕರ್ನಾಟಕ ಪತ್ರಕರ್ತರ ಸಂಘ ಹುಕ್ಕೇರಿ ತಾಲೂಕು ಘಟಕದ ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಪ್ರಕಾಶ್ ಹೊಸಮನಿ ಮಾತನಾಡಿ, ಸುಮಾರು 20 ವರ್ಷಗಳಿಂದ ಹಿಡಕಲ್ ಜಲಾಶಯ ಪರಿಸರದಲ್ಲಿ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಸಾಹಿತ್ಯದ ಅಭಿರುಚಿಗಳನ್ನು ಬೆಳೆಸುವುದರ ಜೊತೆಗೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ನಾಡಿಗೆ ಪರಿಚಯಿಸುವ ಕಾರ್ಯ ಗೆಳೆಯರ ಬಳಗದ ಸಹಕಾರದೊಂದಿಗೆ ನಮ್ಮ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿಡಕಲ್ ಡ್ಯಾಮಿನ ಶ್ರೀ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅರ್ಥಶಾಸ್ತ್ರದ ಉಪನ್ಯಾಸಕರಾದ ಪ್ರೊ.ಎ.ವೈ.ಸೋನ್ಯಾಗೋಳ ಮಾತನಾಡಿ ಇತ್ತೀಚಿಗೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದ್ದು ನೈಜ ಪತ್ರಕರ್ತರು ತೆರೆಮರೆಯಲ್ಲಿದ್ದಾರೆ. ನಕಲಿ ಪತ್ರಕರ್ತರ ಹಾವಳಿಯ ವಿರುದ್ಧ ಸರ್ಕಾರ ನಿರ್ಧಾಕ್ಷಿಣವಾಗಿ ಕ್ರಮವನ್ನು ಕೈಗೊಳ್ಳಬೇಕು. ಪತ್ರಕರ್ತರು ವಸ್ತುನಿಷ್ಠ ವರದಿಗಳನ್ನು ಪ್ರಕಟಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬೇಕು ಎಂದರು.

ಮಾನಸ ಕಂಪ್ಯೂಟರ್ ಶಿಕ್ಷಣದ ಸಂಯೋಜಕ ಲಕ್ಷ್ಮಣ್ ಪೂಜಾರಿ, ಹಿರಿಯ ಸಾಹಿತಿ ಕಾ.ಹೋ.ಶಿಂಧೆ, ಎ.ಬಿ.ನಿರ್ವಾಣಿ, ಡಾ. ಎಂ. ಬಿ.ಕಮತೆ, ಸಂಘದ ಕಾರ್ಯದರ್ಶಿ ಕುಶಾ ನಾಗನೂರಿ, ದೀಪಕ ನಾಡಗೌಡ, ಕರ್ನಾಟಕ ಪತ್ರಕರ್ತರ ವಿವಿಧೊದ್ದೇಶಗಳ ಸಹಕಾರಿ ಸಂಘದ ನಿರ್ದೇಶಕ ಎ.ಎಂ.ಕರ್ನಾಚಿ, ಲವ ನಾಗನೂರಿ, ಮತ್ತು ಅನ್ನಪೂರ್ಣಾ ಹೊಸಮನಿ ಯುವ ಕವಿ ಮಹಾಂತೇಶ ಹೊಸಮನಿ, ಗದಿಗಯ್ಯಾ ಹನಿಮನಾಳ, ಎನ್.ಟಿ.ಸಿ. ಪ್ರಶಿಕ್ಷಣಾರ್ಥಿಗಳಾದ ರೂಪಾ ಮದವಾಲ, ಸರೋಜಿನಿ ನಾಯಿಕ, ಜ್ಯೋತಿ ನೆರ್ಲಿ, ಜ್ಯೋತಿ ಸನದಿ, ಸವಿತಾ ಹೊಸಮನಿ,ಅನಸೂಯಾ ಹೆಗಡೆ,ಶೀತಲ ಮಗದುಮ್ಮ ಮುಂತಾದವರು ಇದ್ದರು.