ನಾನು ಹಣದ ಆಮಿಷಕ್ಕೆ ಬಲಿಯಾಗಿಲ್ಲ

| Published : Sep 21 2024, 01:47 AM IST

ಸಾರಾಂಶ

ನಾನು ರೇವಣ್ಣ ಅವರ ಕುಟುಂಬದ ಜೊತೆ ರಾಜಿ ಮಾಡಿಕೊಂಡು ಅವರಿಂದ ಕೋಟಿ ಕೋಟಿ ಹಣ ಪಡೆದು ಸಂಧಾನ ಮಾಡಿಕೊಂಡಿದ್ದೇನೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ನಾನು ಹಣ ಮಾಡುವುದೇ ಆಗಿದ್ದರೆ ಏನು ಬೇಕಿದ್ದರೂ ಮಾಡಬಹುದಾಗಿತ್ತು. ಸುಳ್ಳು ಪ್ರಕರಣದಲ್ಲಿ ನನ್ನನ್ನ ಜೈಲಿಗೆ ಕಳಿಸಲಾಯಿತು. ಹಣದ ಆಮಿಷಕ್ಕೆ ನಾನು ಬಲಿಯಾಗಿದ್ದರೆ ನಾನು ಜೈಲಿಗೆ ಹೋಗಬೇಕಾಗಿರಲಿಲ್ಲ. ನನ್ನನ್ನು ತುಳಿಯಲೇಬೇಕೆಂದು ಪ್ರಯತ್ನ ಮಾಡಿದ ವ್ಯಕ್ತಿ ಮೋದಿ ಅಮಿತ್ ಶಾ ಜೊತೆ ಮಾತಾಡಿದ್ದಾರೆ. ನನ್ನ ಶಕ್ತಿ ಏನೆಂದು ಗೊತ್ತಾಗಿ ಮಾತಾಡಿದ್ದಾರೆ ಎಂದು ವಕೀಲ ದೇವರಾಜೇಗೌಡ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಹಣದ ಆಮಿಷಕ್ಕೆ ನಾನು ಬಲಿಯಾಗಿದ್ದರೆ ನಾನು ಜೈಲಿಗೆ ಹೋಗಬೇಕಾಗಿರಲಿಲ್ಲ. ನನ್ನನ್ನು ತುಳಿಯಲೇಬೇಕೆಂದು ಪ್ರಯತ್ನ ಮಾಡಿದ ವ್ಯಕ್ತಿ ಮೋದಿ ಅಮಿತ್ ಶಾ ಜೊತೆ ಮಾತಾಡಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ವಕೀಲ ಜಿ. ದೇವರಾಜೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ದೇವರಾಜೇಗೌಡರು ಮೌನವಾಗಿದ್ದು, ಅವರ ಹೋರಾಟ ನಿಂತುಹೋಗಿದೆ, ಅವರ ರಾಜಕೀಯ ಅಂತ್ಯವಾಗಿದೆ, ಅವರು ಯಾರಿಗೂ ಬೇಡವಾದ ವ್ಯಕ್ತಿ ಎಂಬ ಅಭಿಪ್ರಾಯ ಬಂದಿದೆ. ನನ್ನ ಹೋರಾಟ ಹಾಸನ ಜಿಲ್ಲೆಯಲ್ಲಿ ರಾಜಕೀಯ ಭ್ರಷ್ಟರ ವಿರುದ್ಧವಾಗಿದೆ ಎಂಬುದು ಜನಸಾಮಾನ್ಯರಿಗೆ ಗೊತ್ತಾಗಿದೆ. ನಾನೊಬ್ಬ ಸಾಮಾನ್ಯ ಕುಟುಂಬದಿಂದ ಬಂದಿದ್ದು, ಯಾವ ರಾಜಕೀಯ ಹಿನ್ನೆಲೆಯಿಂದ ಬಂದಿರುವುದಿಲ್ಲ. ನನ್ನನ್ನು ೨೦೨೩ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಜಿಲ್ಲೆಯ ಕೇಂದ್ರಬಿಂದುವಾದ ಹೊಳೆನರಸೀಪುರ ಕ್ಷೇತ್ರ ನೀಡಿದರು. ನಾನು ರೇವಣ್ಣ ಅವರ ಕುಟುಂಬದ ಜೊತೆ ರಾಜಿ ಮಾಡಿಕೊಂಡು ಅವರಿಂದ ಕೋಟಿ ಕೋಟಿ ಹಣ ಪಡೆದು ಸಂಧಾನ ಮಾಡಿಕೊಂಡಿದ್ದೇನೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ನಾನು ಹಣ ಮಾಡುವುದೇ ಆಗಿದ್ದರೆ ಏನು ಬೇಕಿದ್ದರೂ ಮಾಡಬಹುದಾಗಿತ್ತು. ಸುಳ್ಳು ಪ್ರಕರಣದಲ್ಲಿ ನನ್ನನ್ನ ಜೈಲಿಗೆ ಕಳಿಸಲಾಯಿತು. ಹಣದ ಆಮಿಷಕ್ಕೆ ನಾನು ಬಲಿಯಾಗಿದ್ದರೆ ನಾನು ಜೈಲಿಗೆ ಹೋಗಬೇಕಾಗಿರಲಿಲ್ಲ. ನನ್ನನ್ನು ತುಳಿಯಲೇಬೇಕೆಂದು ಪ್ರಯತ್ನ ಮಾಡಿದ ವ್ಯಕ್ತಿ ಮೋದಿ ಅಮಿತ್ ಶಾ ಜೊತೆ ಮಾತಾಡಿದ್ದಾರೆ. ನನ್ನ ಶಕ್ತಿ ಏನೆಂದು ಗೊತ್ತಾಗಿ ಮಾತಾಡಿದ್ದಾರೆ. ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನನ್ನ ಹೋರಾಟ ರೇವಣ್ಣ ಅವರ ರಾಜಕೀಯ ಹಾಗು ಅವರ ಕೆಟ್ಟ ನಡವಳಿಕೆ ವಿರುದ್ಧ. ನಾನು ಹಣಕ್ಕೆ ಮಾರಾಟ ಆಗೋದಾಗಿದ್ದರೆ ಡಿ.ಕೆ. ಶಿವಕುಮಾರ್ ಹಾಗೂ ಅವರ ಕಡೆಯವರು ಆಫರ್ ಮಾಡಿದಾಗಲೆ ಸುಮ್ಮನಾಗುತ್ತಿದ್ದೆ.

ನಾನು ಸರ್ಪಾಸ್ತ್ರ ತೆಗೆದರೆ ಭ್ರಷ್ಟರ ಸಂಹಾರ ಆಗುತ್ತದೆ. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೊಬ್ಬರು ಬಿಜೆಪಿ ಹೈಕಮಾಂಡ್ ಭೇಟಿಯಾಗಿದ್ದಾರೆ. ಅವರು ತಮ್ಮ ರಕ್ಷಣೆಗಾಗಿ ಬಿಜೆಪಿ ಹೈಕಮಾಂಡ್ ಭೇಟಿಯಾಗಿದ್ದಾರೆ ಎಂದು ಹೇಳಿ ಹೆಸರನ್ನು ಹೇಳದೆ ದೂರಿದರು. ಇದೇ ವೇಳೆ ಪಕ್ಷ ನನಗೆ ಏನು ಸೂಚನೆ ಕೊಡುತ್ತದೋ ಅದನ್ನು ಪಾಲನೆ ಮಾಡುವೆ ಎಂದ ಅವರು, ನಾನು ಮೂಲೆ ಗುಂಪಾಗಿಲ್ಲ ಎಂದರು.