ಸಾರಾಂಶ
ರೈತರು ವ್ಯಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಹಾಲು ಉತ್ಪಾದನೆ ಜೊತೆಗೆ ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ರೈತರು ನೆಮ್ಮದಿಯಾಗಿ ಜೀವನ ಮಾಡಲು ತುಂಬಾ ಅನುಕೂಲವಾಗಿದೆ. ರೈತರು ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮವಹಿಸಬೇಕು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ರಾಜ್ಯ ಸರ್ಕಾರ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಿದೆ. ಅದೇ ರೀತಿಯಾಗಿ ಈ ರಾಜ್ಯದ ಹಾಲು ಉತ್ಪಾದಕರಿಗಾಗಿ ಆರನೇ ಗ್ಯಾರಂಟಿಯಾಗಿ ಹಾಲಿನ ಪ್ರೋತ್ಸಾಹ ಧನವನ್ನು 10 ರೂಪಾಯಿಗಳಿಗೆ ಹೆಚ್ಚಿಸಬೇಕೆಂದು ಶಾಸಕ ಬಿ.ಎನ್ ರವಿಕುಮಾರ್ ತಿಳಿಸಿದರು.ತಾಲೂಕಿನ ಚೀಮಂಗಲ ಗ್ರಾಪಂ ನಾರಾಯಣದಾಸರಹಳ್ಳಿ ಎಂಪಿಸಿಎಸ್ ನೂತನ ಕಟ್ಟಡ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಆ ಸಂಘಗಳು ಅಭಿವೃದ್ದಿ ಹೊಂದಲು ಸಾಧ್ಯ. ಡೇರಿಗಳಲ್ಲಿ ರಾಜಕೀಯಕ್ಕೆ ಅವಕಾಶ ಕಲ್ಪಿಸದೆ ಅದನ್ನು ದೇವಾಲಯ ಎಂದು ಭಾವಿಸಿ ಎಂದರು. ಸಂಘದ ಅಭಿವೃದ್ಧಿಗೆ ಶ್ರಮಿಸಿ
ಕೆಎಂಎಫ್ ನಿರ್ದೇಶಕ ಶ್ರಿನಿವಾಸ್ ರಾಮಯ್ಯ ಮಾತನಾಡಿ, ರೈತರು ವ್ಯಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ನಮ್ಮ ತಾಲ್ಲೂಕಿನಲ್ಲಿ ಹಾಲು ಉತ್ಪಾದನೆ ಜೊತೆಗೆ ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ರೈತರು ನೆಮ್ಮದಿಯಾಗಿ ಜೀವನ ಮಾಡಲು ತುಂಬಾ ಅನುಕೂಲವಾಗಿದೆ. ರೈತರು ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮವಹಿಸಬೇಕು ಎಂದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿದರು, ಈ ಸಂದರ್ಭದಲ್ಲಿ ಡೈರಿ ಅಧ್ಯಕ್ಷರಾದ ಟಿ. ಲಕ್ಷ್ಮೀನಾರಾಯಣ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ ಸುಬ್ರಮಣಿ, ತಾದೂರು ರಘು, ಹುಜುಗೂರು ರಾಮಣ್ಣ, ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಎ.ಸಿ ಶ್ರೀನಿವಾಸಗೌಡ, ಜಿ.ಮಾಧವ, ಸಮರ್ಥ ರಾಮ್, ಜಿಲ್ಲಾ ಉಪಸ್ಥಾಪಕ ಬಿ ಆರ್ ರವಿ ಕಿರಣ್, ಸುನಂದಮ್ಮ ನಾಗರಾಜ್,ಮುರಳಿ, ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಸಿ.ಎಸ್ ನಿರ್ದೇಶಕ ಪ್ರಶಾಂತ್, ಅಭಿವೃದ್ಧಿ ಅಧಿಕಾರಿ ತನ್ವೀರ್ ಅಹ್ಮದ್, ಮಾಧವಮ್ಮ, ಶಾರದಮ್ಮ ಲಕ್ಷ್ಮೀನಾರಾಯಣ, ದೇವರಾಜ್, ಕ ಸಾ ಪ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.