ಸಾರಾಂಶ
ಎರಡು ಶತಮಾನ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆದ ಭಾರತ ದೇಶ ಇಂದು 79ನೆಯ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ ಎಂದು ನಾಡಕಚೇರಿಯ ಪ್ರಭಾರಿ ಉಪ ತಹಸೀಲ್ದಾರ್ ಕವಿರಾಜ್ ತಿಳಿಸಿದರು.
ಆನಂದಪುರ: ಎರಡು ಶತಮಾನ ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿ ಪಡೆದ ಭಾರತ ದೇಶ ಇಂದು 79ನೆಯ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ ಎಂದು ನಾಡಕಚೇರಿಯ ಪ್ರಭಾರಿ ಉಪ ತಹಸೀಲ್ದಾರ್ ಕವಿರಾಜ್ ತಿಳಿಸಿದರು.
ನಾಡಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಸ್ಥಳೀಯ ಆನಂದಪುರ ಗ್ರಾಪಂ, ಯಡೇಹಳ್ಳಿ ಗ್ರಾಪಂ. ಆಚಾಪುರ ಗ್ರಾಪಂ, ಹೊಸೂರು ಗ್ರಾಪಂ, ಗೌತಮಪುರ ಗ್ರಾಪಂ, ಶಾಲಾ ಕಾಲೇಜು, ಮೆಸ್ಕಾಂ ಇಲಾಖೆ, ಪೊಲೀಸ್ ಠಾಣೆ, ಆರೋಗ್ಯ ಇಲಾಖೆ, ವಿದ್ಯಾರ್ಥಿನಿಲಯ, ಬ್ಯಾಂಕ್, ಕನ್ನಡ ಸಂಘ, ಆಟೋ ಚಾಲಕರ ಸಂಘ, ವಾಹನ ಚಾಲಕರ ಸಂಘ, ಯುವ ನಕ್ಷತ್ರ ಸಂಘ, ರೈಲ್ವೆ ನಿಲ್ದಾಣ ಸೇರಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಸ್ವಾತಂತ್ರೋತ್ಸವ ಆಚರಿಸಲಾಯಿತು. ಬೆಳಿಗ್ಗೆ ವಿಪರೀತ ಮಳೆಯಿಂದ ಯಾವುದೇ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಥಸಂಚಲನ ಮಾಡದೆ ಶಾಲೆಯಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು.