ಅಂಗನವಾಡಿ ಕಟ್ಟಡಗಳ ಕಾಮಗಾರಿ ಶೀಘ್ರ ಮುಗಿಸುವಂತೆ ಸೂಚನೆ

| Published : Jul 25 2025, 12:30 AM IST

ಅಂಗನವಾಡಿ ಕಟ್ಟಡಗಳ ಕಾಮಗಾರಿ ಶೀಘ್ರ ಮುಗಿಸುವಂತೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ನಿಗದಿತ ಅವಧಿಯೊಳಗೆ ಬಾಕಿ ಇರುವ 19 ಕಟ್ಟಡಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಶಾಸಕ ಎ.ಮಂಜು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಪಟ್ಟಣದಲ್ಲಿ 22 ಮತ್ತು ತಾಲೂಕಿನಾದ್ಯಂತ 270 ಸೇರಿದಂತೆ ಒಟ್ಟು 292 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡ 242ಕ್ಕೆ ಇದೆ. ಸರ್ಕಾರಿ ಶಾಲೆಗಳ ಕೊಠಡಿಯಲ್ಲಿ 15 ಕಾರ್ಯನಿರ್ವಹಿಸುತ್ತಿವೆ. ಪರ್ಯಾಯ ವ್ಯವಸ್ಥೆಯಲ್ಲಿ 13 ಹಾಗೂ ಬಾಡಿಗೆ ಕಟ್ಟಡದಲ್ಲಿ 19 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ನಿಗದಿತ ಅವಧಿಯೊಳಗೆ ಬಾಕಿ ಇರುವ 19 ಕಟ್ಟಡಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಶಾಸಕ ಎ.ಮಂಜು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಪಟ್ಟಣದಲ್ಲಿ 6 ಮತ್ತು ತಾಲೂಕಿನ ಹಲವುಗಳ ಗ್ರಾಮಗಳಲ್ಲಿ 13 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದೆ. ಆದರೆ ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಜಾಗ ಹಾಗೂ ಇತರೆ ಸಮಸ್ಯೆಗಳು ಇದ್ದರೇ ತಹಸೀಲ್ದಾರ್, ತಾಪಂ ಇಒ ಹಾಗೂ ಜಿಪಂ ಎಂಜಿನಿಯರ್‌ ಬಳಿ ಚರ್ಚಿಸಿ ಪರಿಹಾರ ಕಂಡುಕೊಂಡು ಕಟ್ಟಡಗಳ ನಿರ್ಮಾಣವನ್ನು ಮಾಡಿಸಬೇಕೆಂದು ಸಿಡಿಪಿಒ ವೆಂಕಟೇಶ್ ಅವರಿಗೆ ಸೂಚಿಸಿದರು.

ಪಟ್ಟಣದಲ್ಲಿ 22 ಮತ್ತು ತಾಲೂಕಿನಾದ್ಯಂತ 270 ಸೇರಿದಂತೆ ಒಟ್ಟು 292 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡ 242ಕ್ಕೆ ಇದೆ. ಸರ್ಕಾರಿ ಶಾಲೆಗಳ ಕೊಠಡಿಯಲ್ಲಿ 15 ಕಾರ್ಯನಿರ್ವಹಿಸುತ್ತಿವೆ. ಪರ್ಯಾಯ ವ್ಯವಸ್ಥೆಯಲ್ಲಿ 13 ಹಾಗೂ ಬಾಡಿಗೆ ಕಟ್ಟಡದಲ್ಲಿ 19 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನಿರ್ಮಾಣ ಹಂತದಲ್ಲಿ ಇರುವ ಕಟ್ಟಡಗಳ ಸಂಖ್ಯೆ 19.ಅವಶ್ಯಕತೆ ಇರುವ ಕಟ್ಟಡಗಳ ಸಂಖ್ಯೆ 19 ಹಾಗೂ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸಲು ಲಭ್ಯವಿರುವ ನಿವೇಶನಗಳು 13 ಇವೆ ಎಂದು ಮಾಹಿತಿ ನೀಡಿದರು.

ತಹಸೀಲ್ದಾರ್‌ ಜಾಗದ ಸಮಸ್ಯೆ ಇರುವುಗಳನ್ನು ಬಗೆಹರಿಸಿಕೊಡುತ್ತಾರೆ. ಆಯಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ನಿವೇಶನ ಕೊಡಲು ತಾಪಂ ಇಒ ಮುಂದಾಗಬೇಕು. ಜಿಪಂ ಎಂಜಿನಿಯರ್ ಕೂಡಲೇ ಟೆಂಡರ್ ಪ್ರಕ್ರಿಯೆ ಮುಗಿಸಿ ಕೆಲಸ ಆರಂಭಿಸಬೇಕಿದೆ. ಹಣ ಕೂಡ ಲಭ್ಯವಿದೆ. ಸಿಡಿಪಿಒ ವೆಂಕಟೇಶ್ ಪ್ರತಿ ಹಂತದಲ್ಲಿ ಆಗುವ ಬೆಳವಣಿಗೆಯನ್ನು ನನ್ನ ಗಮನಕ್ಕೆ ತರಬೇಕೆಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್‌ ಸೌಮ್ಯ, ಜಿಪಂ ಎಇಇ ರಮೇಶ್, ಸಿಡಿಪಿಒ ವೆಂಕಟೇಶ್, ಸರ್ವೆ ಇಲಾಖೆ ಅಧಿಕಾರಿ ಸುಂದರ್, ಪಪಂ ಮುಖ್ಯಾಧಿಕಾರಿ ಇದ್ದರು.