ಗ್ರಾಮೀಣ ಸಮಸ್ಯೆಗಳ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ

| Published : Oct 08 2024, 01:01 AM IST

ಗ್ರಾಮೀಣ ಸಮಸ್ಯೆಗಳ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತರಿಗೆ ಸಾಕಷ್ಟು ಸ್ಮಶಾನ ಜಾಗೆಗಳಿಲ್ಲ. ಜಾಗಗಳಿದ್ದರೂ ಬಲಾಡ್ಯರು ಒತ್ತುವರಿ ಮಾಡಿ ಕೊಂಡಿದ್ದಾರೆ.ಅದರ ತೆರವಿಗೆ ಮತ್ತು ಕೆಲ ಗ್ರಾಮಗಳಲ್ಲಿ ಸ್ಮಶಾನಕ್ಕೆ ರಸ್ತೆ ಹಾಗೂ ಸ್ಮಶಾನಕ್ಕೆ ಜಾಗ ಒದಗಿಸಲು, ಗ್ರಾಮಗಳ ನೈರ್ಮಲ್ಯ, ಕುಡಿಯುವ ನೀರು ಒದಗಿಸಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಮ್ಮೂರಿಗೆ ನಮ್ಮ ಶಾಸಕರು ಕಾರ್ಯಕ್ರಮದಡಿ ನಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಐದು ಗ್ರಾಮಗಳಿಗೆ ಸೋಮವಾರ ಶಾಸಕ ಪ್ರದೀಪ್ ಈಶ್ವರ್ ಆಧಿಕಾರಿಗಳೊಂದಿಗೆ ಬೇಟಿ ನೀಡಿ ಸಮಸ್ಯೆಗಳನ್ನಾಲಿಸಿ ಕೆಲವಕ್ಕೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿ, ಉಳಿಕೆ ಸಮಸ್ಯೆಗಳಿಗೆ ಕಾಲಾವಾಕಾಶದಲ್ಲಿ ಈಡೇರಿಸಿವ ಭರವಸೆ ನೀಡಿದರು.

ಬೆಳ್ಳಂ ಬೆಳಗ್ಗೆ ತಾಲೂಕು ಪಂಚಾಯತಿ, ಆರೋಗ್ಯ, ಕಂದಾಯ, ಆಹಾರ, ಬೆಸ್ಕಾಂ,ಪೋಲಿಸ್ ಮತ್ತು ಗ್ರಾಮ ಪಂಚಾಯತಿ ಇಲಾಖೆಗಳ ಅಧಿಕಾರಿಗಳೊಟ್ಟಿಗೆ ನಂದಿ ಗ್ರಾಮಪಂಚಾಯತಿ ವ್ಯಾಪ್ತಿಯ ಸಿಂಗಾಟಿಕದಿರೇನಹಳ್ಳಿ, ಮಡುಕು ಹೊಸಹಳ್ಳಿ(ಗಾಂಧಿಪುರ), ಸುಲ್ತಾನ್ ಪೇಟೆ, ಬೈರನಾಯಕನಹಳ್ಳಿ ಮತ್ತು ನಂದಿ ಗ್ರಾಮಗಳಿಗೆ ಭೇಟಿ ನೀಡಿ ಮನೆ ಮನೆಗೂ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.

ಸಮಸ್ಯೆಗಳ ಮನವರಿಕೆ

ಗ್ರಾಮಸ್ಥರು ತಾವು ಎದುರಿಸುತ್ತಿರುವ ರಸ್ತೆ, ಚರಂಡಿ, ಕಲ್ಯಾಣಿ ಸ್ವಚ್ಛತೆ, ಸ್ಮಶಾನಕ್ಕೆ ಜಾಗ, ಸ್ಮಶಾನಕ್ಕೆ ತೆರಳುವ ರಸ್ತೆ, ಒತ್ತುವರಿ ತೆರವು, ವಿದ್ಯುತ್, ಜಮೀನು ಖಾತೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಖುದ್ಧಾಗಿ ಶಾಸಕರ ಗಮನಕ್ಕೆ ತಂದರು. ನಂದಿ ಗ್ರಾಮದಲ್ಲಿ ಜನತೆಯ ಅಹವಾಲು ಆಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಸ್ವಾತಂತ್ರ್ಯ ಬಂದಾಗಿನಿಂದ ದಲಿತರಿಗೆ ಸಾಕಷ್ಟು ಸ್ಮಶಾನ ಜಾಗೆಗಳಿಲ್ಲ. ಜಾಗಗಳಿದ್ದರೂ ಬಲಾಡ್ಯರು ಒತ್ತುವರಿ ಮಾಡಿ ಕೊಂಡಿದ್ದಾರೆ.ಅದರ ತೆರವಿಗೆ ಮತ್ತು ಕೆಲ ಗ್ರಾಮಗಳಲ್ಲಿ ಸ್ಮಶಾನಕ್ಕೆ ರಸ್ತೆ ಹಾಗೂ ಸ್ಮಶಾನಕ್ಕೆ ಜಾಗ ಒದಗಿಸಲು, ಗ್ರಾಮಗಳ ನೈರ್ಮಲ್ಯ, ಕುಡಿಯುವ ನೀರು ಒದಗಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಬಿರುಕು ಬಿಟ್ಟಿರುವ ನಂದಿ ಗ್ರಾಮದ ಕೆರೆ ದುರಸ್ತಿಗೆ ಸೂಚಿಸಿದ್ದೇನೆ ಎಂದರು.

ಗ್ಯಾರಂಟಿಗಳ ಸಮರ್ಪಕ ಜಾರಿ

ಗ್ರಾಮೀಣ ಭಾಗದ ಬಡವರು ದಲಿತ,ಹಿಂದುಳಿದ, ಅಲ್ಪಸಂಖ್ಯಾತರು ಸಮಾಜದಲ್ಲಿ ಮುಂದೆ ಬರಬೇಕು. ಈಗಾಗಲೇ ಪಂಚ ಗ್ಯಾರಂಟಿಗಳನ್ನು ನಮ್ಮ ಸರ್ಕಾರ ನೀಡಿದ್ದು ಇದರಲ್ಲಿ ಮಹಿಳೆಯರು ಅರ್ಥಿಕವಾಗಿ ಸಬಲರಾಗಲು ಗೃಹಲಕ್ಷ್ಮಿ ಯೋಜನೆಯಡಿ ವಾರ್ಷಿಕ 24 ಸಾವಿರ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಉಚಿತ ಪ್ರಯಾಣ, 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಯುವ ನಿಧಿ ನೀಡುತ್ತಿದ್ದೇವೆ ಎಂದರು.

ಈ ವೇಳೆ ತಾಪಂ ಇಒ ಮಂಜುನಾಥ್, ಮುಖಂಡರಾದ ಕೆ.ಎಲ್.ಶ್ರೀನಿವಾಸ್, ಡ್ಯಾನ್ಸ್ ಶ್ರೀನಿವಾಸ್,ಸುದಾವೆಂಕಟೇಶ್, ಕಣಿತಹಳ್ಳಿ ವೆಂಕಟೇಶ್, ನಾಗಭೂಷಣ್,ಖೋಡೇಸ್ ವೆಂಕಟೇಶ್,ನಂದಿ ಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.