ಸಂವಿಧಾನ ಉಳಿಸುವುದು ನಮ್ಮ ಕರ್ತವ್ಯ

| Published : Jan 27 2025, 12:46 AM IST

ಸಾರಾಂಶ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಲ್ಲ ಧರ್ಮ, ಎಲ್ಲ ಜಾತಿ-ಜನಾಂಗಳಿಗೆ ಒಪ್ಪುವ ಇಡೀ ವಿಶ್ವವೇ ಒಪ್ಪುವ ಸಂವಿಧಾನವನ್ನು ರಚನೆ ಮಾಡಿದ ಡಾ.ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುತ್ತಾ ಹರಿದು ಹಂಚಿ ಹೊಗಿದ್ದ ಭಾರತ ದೇಶವನ್ನು ಮತ್ತೆ ಒಗ್ಗೂಡಿಸಲು ಹೋರಾಟ ಮಾಡಿದ ಸರ್ದಾರ್ ವಲ್ಲಾಬಾಯಿ ಪಟೇಲ್ ಅವರನ್ನು ನೆನಪಿಸಿಕೊಳ್ಳೋಣ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಲ್ಲ ಧರ್ಮ, ಎಲ್ಲ ಜಾತಿ-ಜನಾಂಗಳಿಗೆ ಒಪ್ಪುವ ಇಡೀ ವಿಶ್ವವೇ ಒಪ್ಪುವ ಸಂವಿಧಾನವನ್ನು ರಚನೆ ಮಾಡಿದ ಡಾ.ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುತ್ತಾ ಹರಿದು ಹಂಚಿ ಹೊಗಿದ್ದ ಭಾರತ ದೇಶವನ್ನು ಮತ್ತೆ ಒಗ್ಗೂಡಿಸಲು ಹೋರಾಟ ಮಾಡಿದ ಸರ್ದಾರ್ ವಲ್ಲಾಬಾಯಿ ಪಟೇಲ್ ಅವರನ್ನು ನೆನಪಿಸಿಕೊಳ್ಳೋಣ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ೭೬ನೇ ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನವರಿ ೨೬ ಸಂವಿಧಾನ ಸಮರ್ಪಣಾ ದಿನ ಆಗಿದ್ದು, ಈ ಸಂವಿಧಾನದಲ್ಲಿ ದೇಶವನ್ನು ಆಳುವ ನಾಯಕನನ್ನು ಪ್ರಜೆಗಳೇ ಆಯ್ಕೆ ಮಾಡಿ ಪ್ರಜೆಗಳೇ ಸಾರ್ವಭೌಮನಾಗಿದ್ದಾನೆ. ನಾವೆಲ್ಲರೂ ಒಂದು ಎಂಬ ಭಾವನೆ ಸಂವಿಧಾನದ ನೀತಿಯಾಗಿದೆ. ಇಂತಹ ಸಂವಿಧಾನವನ್ನು ಉಳಿಸುವ ಕರ್ತವ್ಯ ನಮ್ಮದಾಗಿದೆ ಎಂದರು.

ದೇಶಕ್ಕಾಗಿ ನಿಸ್ವಾರ್ಥತೆಯಿಂದ ಶ್ರಮಿಸಿದ ಗಾಂಧೀಜಿ ಅಂಬೇಡ್ಕರ್‌ನಂತಹ ಮಹಾಪುರುಷರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ರೈತದೇಶದ ಬೆನ್ನಲುಬು ಆಗಿದ್ದು, ರೈತ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಆಡಳಿತ ವರ್ಗ ಶ್ರಮಿಸಬೇಕು ಎಂದರು.

ಅಂಬೇಡ್ಕರ್‌ ತತ್ವ ಆಧರಿಸಿದ ಭಾರತ ದೇಶದ ಸಂವಿಧಾನ ಪ್ರಪಂಚದಲ್ಲೇ ಶ್ರೇಷ್ಠವಾಗಿದ್ದು ಮಾದರಿಯಾಗಿದೆ. ನಮ್ಮ ರಾಷ್ಟ್ರ ಜಾತ್ಯತೀತ ರಾಷ್ಟ್ರವಾಗಿದೆ. ದೇಶದಲ್ಲಿ ಕೆಲವರು ಜಾತೀಯತೆ ಭಾವನೆಗಳನ್ನು ಮೂಡಿಸುತ್ತಿರುವುದು ಬೇಸರವಾಗಿದೆ. ಜನ ಪ್ರೀತಿಯ ಸಂವಿಧಾನದಲ್ಲಿ ಭವ್ಯ ಭಾರತ ದೇಶದ ಪರಂಪರೆ ಉಳಿಯಬೇಕೆಂಬುದೇ ನನ್ನ ಆಶಯವಾಗಿದೆ ಎಂದು ಹೇಳಿದರು.

ಬ್ರೀಟಿಷರ ದಬ್ಬಾಳಿಕೆಗೆ ಒಳಪಟ್ಟು ಅಶಾಂತಿಯ ಗೂಡಾಗಿದ್ದ ಭಾರತ ದೇಶವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಗಂಡಿಸಿ ಒಗ್ಗಟ್ಟಿನ ಭಾರತವನ್ನು ನಿರ್ಮಾಣ ಮಾಡಲು ಹೋರಾಟ ಮಾಡಿದ ಸರ್ದಾರ್‌ ವಲ್ಲಬಾಯಿ ಪಟೇಲ್‌ರವರ ಇತಿಹಾಸ ನೆನಪಿಸಿಕೊಂಡು ಈ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡೋಣ ಎಂದರು.

ತಹಸೀಲ್ದಾರ್‌ ಸಂತೋಷ್‌ ಕುಮಾರ್‌ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ. ಅವರನ್ನು ಸ್ಮರಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಮ್ಮ ದೇಶದ ಸಂವಿಧಾನ ಅರ್ಥಪೂರ್ಣವಾಗಿದ್ದು ಪ್ರತಿಯೊಬ್ಬರೂ ಸಂವಿಧಾನದ ಆಶಯವನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಸಾಧನೆಯ ಹಾದಿ ಹಿಡಿಯಬೇಕು ಎಂದು ಹೇಳಿದರು.

ತಾಲೂಕಿನ ಸಾಧಕ ಕ್ರೀಡಾಪಟುಗಳು, ಪೌರಕಾರ್ಮಿಕರು ಹಾಗೂ ಉತ್ತಮ ವೈದ್ಯಕೀಯ ಸೇವೆ ಸಲ್ಲಿಸಿದವರಿಗೆ ಗೌರವಿಸಿ ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಗಣರಾಜ್ಯ ದಿನಾಚರಣೆಯ ಅಂಗವಾಗಿ ಭಾರತ ಸೇವಾ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಕೈಗೊಂಡಿದ್ದ ಪಥಸಂಚಲನ ಪ್ರೇಕ್ಷಕರ ಗಮನ ಸೆಳೆಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ನಿಬ್ಬೆರಗಾಗುವಂತೆ ಮಾಡಿತು. ಅತ್ಯುತ್ತಮ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದ ಶಾಂತಿನಿಕೇತನ ಶಾಲೆಯ ಮಕ್ಕಳಿಗೆ ಪ್ರಶಸ್ತಿ ಪಾಲಕ ನೀಡುವ ಮೂಲಕ ಗೌರವಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಿವಲಿಂಗೇಗೌಡ ಸನ್ಮಾನಿಸಿದರು.

ತಾಲೂಕು ಪಂಚಾಯಿತಿ ಇ.ಓ.ಸತೀಶ್‌, ನಗರಸಭೆ ಆಯುಕ್ತ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ ಕುಮಾರ್‌, ಗ್ಯಾರಂಟಿ ಯೋಜನಾ ಅನುಷ್ಟಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್‌, ಉಪಾಧ್ಯಕ್ಷ ಜವನಪ್ಪ, ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್‌ ಹಾಗೂ ಸದಸ್ಯರು, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ಎಸ್.ಅರುಣ್‌ ಕುಮಾರ್‌ ಹಾಗೂ ಸದಸ್ಯರು ,ಡಿವೈಎಸ್‌ಪಿ ಲೋಕೇಶ್‌, ಕಸಾಪ ಅಧ್ಯಕ್ಷ ಚಂದ್ರಶೇಖರ್‌ ಬಾಬು, ರಾಜ್ಯ ಸರ್ಕಾರಿ ತಾಲ್ಲೂಕು ನೌಕರರ ಅಧ್ಯಕ್ಷ ಜಯಣ್ಣ, ರೈಲ್ವೆ ಮಹದೇವ್‌, ವಿವಿಧ ಇಲಾಖಾ ಅಧಿಕಾರಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗಣರಾಜ್ಯ ದಿನಾಚರಣೆಯ ಅಂಗವಾಗಿ ಭಾರತ ಸೇವ ದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಕೈಗೊಂಡಿದ್ದ ಪಥಸಂಚಲನ ಪ್ರೇಕ್ಷಕರ ಗಮನ ಸೆಳೆಯಿತು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ನಿಬ್ಬೆರಗಾಗುವಂತೆ ಮಾಡಿತು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೋಹನ್ ಕುಮಾರ್, ನಗರಸಭೆ ಪೌರಯುಕ್ತ ಕೃಷ್ಣಮೂರ್ತಿ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಪರಶಿವ ಮೂರ್ತಿ,ಕ ಸ ಪ ಅಧ್ಯಕ್ಷ ಚಂದ್ರಶೇಖರ್ , ಡಿವೈಎಸ್‌ಪಿ .ಲೋಕೇಶ್, ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ್, ವೃತ್ತ ನೀರಿಕ್ಷಕ ಗಂಗಾಧರ್, ಇನ್ಸ್‌ಪೆಕ್ಟರ್ ಲತಾ, ತಾಲೂಕು ಆಡಳಿತ ಸಿಬ್ಬಂದಿ ವರ್ಗದವರು, ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.