ಮಕ್ಕಳನ್ನು ಉತ್ತಮ ಪ್ರಜೆಗಳಾಗಿಸುವ ಹೊಣೆ ಶಿಕ್ಷಕರದ್ದು

| Published : Sep 07 2025, 01:00 AM IST

ಮಕ್ಕಳನ್ನು ಉತ್ತಮ ಪ್ರಜೆಗಳಾಗಿಸುವ ಹೊಣೆ ಶಿಕ್ಷಕರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗಿ ಮಾಡುವ ಹೊಣೆ ಶಿಕ್ಷಕರದ್ದಾಗಿದೆ, ಹಿಂದೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು. ಪ್ರಾಥಮಿಕ ಹಂತದಲ್ಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಕಾರಣದಿಂದ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿದೆ. ತಾಲೂಕಿನಲ್ಲಿ ತಾವು ಪ್ರಾರಂಭಿಸಿದ ಮಕ್ಕಳ ಮನೆ ಯಶಸ್ವಿಯಾಗಿದ್ದು ರಾಜ್ಯದ ಗಮನ ಸೆಳೆದಿದೆ. ಖಾಸಗಿ ಶಾಲೆಗಳಿಗೆ ದುಬಾರಿ ಹಣ ನೀಡಿ ಮಕ್ಕಳನ್ನು ಕಳಿಸುತ್ತಿದ್ದ ಪೋಷಕರಿಗೆ 1. 5 ಕೋಟಿಯಷ್ಟು ಹಣ ಉಳಿತಾಯವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡುಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಚಿಂತಾಮಣಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಂಕರಪ್ಪ ಹೇಳಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಶುಕ್ರವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಕಲಿತವರು ಪ್ರತಿಭಾವಂತರಾಗಿದ್ದಾರೆ. ಅವಸನಾದ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡಲು ಮಕ್ಕಳಮನೆಯಂತಹ ಪ್ರಯತ್ನಗಳು ಸಹಕಾರಿ, ದೇಶ, ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶಿಕ್ಷಣ ಮಹತ್ತರವಾಗಿದ್ದು, ಈ ಅರಿವನ್ನು ಇಟ್ಟುಕೊಂಡು ನಮ್ಮ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದರು.ಶಾಸಕ ಎ. ಮಂಜು ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗಿ ಮಾಡುವ ಹೊಣೆ ಶಿಕ್ಷಕರದ್ದಾಗಿದೆ, ಹಿಂದೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು. ಪ್ರಾಥಮಿಕ ಹಂತದಲ್ಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಕಾರಣದಿಂದ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿದೆ. ತಾಲೂಕಿನಲ್ಲಿ ತಾವು ಪ್ರಾರಂಭಿಸಿದ ಮಕ್ಕಳ ಮನೆ ಯಶಸ್ವಿಯಾಗಿದ್ದು ರಾಜ್ಯದ ಗಮನ ಸೆಳೆದಿದೆ. ಖಾಸಗಿ ಶಾಲೆಗಳಿಗೆ ದುಬಾರಿ ಹಣ ನೀಡಿ ಮಕ್ಕಳನ್ನು ಕಳಿಸುತ್ತಿದ್ದ ಪೋಷಕರಿಗೆ 1. 5 ಕೋಟಿಯಷ್ಟು ಹಣ ಉಳಿತಾಯವಾಗಿದೆ ಎಂದರು. ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ತಹಸೀಲ್ದಾರ್‌ ಕೆ.ಸಿ. ಸೌಮ್ಯ, ಬಿಇಒ ಕೆ.ಪಿ. ನಾರಾಯಣ್, ಬಿಆರ್‌ಸಿ ಸಿ.ಎಸ್. ಬಾಲರಾಜ್, ಪಪಂ ಮುಖ್ಯಾಧಿಕಾರಿ ಸಿ.ಡಿ. ನಾಗೇಂದ್ರ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಟಿಪಿಒ ನಿಂಗಯ್ಯ ಇತರರಿದ್ದರು.