ಬಡವರ ಬಾಳಿಗೆ ಬೆಳಕಾದ ಸಿದ್ದರಾಮಯ್ಯ ಸರ್ಕಾರ

| Published : Jul 18 2025, 12:46 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಸದುದ್ದೇಶದಿಂದ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕೆ ತಂದು

ಕನ್ನಡಪ್ರಭ ವಾರ್ತೆ ಮೈಸೂರುಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜೆ.ಪಿ. ನಗರದ ನಾಚನಹಳ್ಳಿ ಪಾಳ್ಯದಲ್ಲಿ ಎಂ.ಕೆ.ಎಸ್ ಅಭಿಮಾನಿ ಬಳಗದ ಆಶ್ರಯದಲ್ಲಿ ಜೆಪಿ ನಗರ ಹಾಗೂ ಸುತ್ತಮುತ್ತಲಿನ ಭಾಗದ ಹಲವಾರು ನಾಗರೀಕರಿಗೆ ಪಿಂಚಣಿ ಆದೇಶ ಪತ್ರವನ್ನು ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ವಿತರಿಸಿದರು. ವಿವಿಧ ಪಿಂಚಣಿ ಯೋಜನೆಗಳಿಂದ ವಂಚಿತರಾಗಿದ್ದವರನ್ನು ಗುರುತಿಸಿ ಸೂಕ್ತ ದಾಖಲೆ ಪಡೆದು ಸರ್ಕಾರದ ವತಿಯಿಂದ ಅರ್ಜಿ ಪರಿಶೀಲಿಸಿ ಮಂಜೂರು ಮಾಡಿಸಿ ಆದೇಶ ಪತ್ರವನ್ನು ವಿತರಿಸಲಾಯಿತು.ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರಾಜ್ಯದಲ್ಲಿ ಯಾರು ಹಸಿದು ಮಲಗಬಾರದು, ಯಾರು ಕತ್ತಲೆಯಲ್ಲಿ ಬದುಕು ನೆಡೆಸಬಾರದು, ಆರ್ಥಿಕವಾಗಿ ಹಿನ್ನೆಡೆಯನ್ನು ಅನುಭವಿಸಿ ಬಾರದು, ಎಲ್ಲರೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು, ಆರ್ಥಿಕವಾಗಿ ಸಬಲರಾಗಬೇಕು, ಮಹಿಳೆಯರು, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ವೃದ್ಧರು ಉತ್ತಮ ಜೀವನ ನಿರ್ವಹಿಸಬೇಕು ಎಂಬ ಸದುದ್ದೇಶದಿಂದ ಪಂಚ ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕೆ ತಂದು ಎಲ್ಲರ ಬಾಳಲ್ಲಿ ಅಭಿವೃದ್ಧಿಯ ಬೆಳಕು ಚೆಲ್ಲಿದ್ದಾರೆ ಎಂದರು.ಸಿದ್ದರಾಮಯ್ಯ ಅವರು ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡು ಹತ್ತು ಹಲವಾರು ಜನಪರ ಯೋಜನೆಗಳನ್ನು ರೂಪಿಸಿದ್ದಾರೆ. ಅದರ ಫಲವಾಗಿ ರಾಜ್ಯದಲ್ಲಿ ಬಡತನ ಮಟ್ಟ ಕಡಿಮೆಯಾಗಿದ್ದು, ಶೈಕ್ಷಣಿಕ ಪ್ರಗತಿ, ರೈತರ ಮುಖದಲ್ಲಿ ಸಂತೋಷ, ಕಾರ್ಮಿಕರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿದೆ. ಇಂತಹ ಸಂಧರ್ಭದಲ್ಲಿ ನಗರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಅಭಿವೃದ್ಧಿಯ ಸರಮಾಲೆಯನ್ನೇ ನಿರ್ಮಿಸಿದೆ. ಅದಕ್ಕಾಗಿ ಸಾಧನಾ ಸಮಾವೇಶ ಹಮ್ಮಿಕೊಂಡಿದೆ. ಈ ವೇಳೆ ಅದರ ಸವಿನೆನಪಿಗಾಗಿ ಜೆ.ಪಿ ನಗರ ಭಾಗದ ನೂರಾರು ಬಡ ಜನರು ವಿವಿಧ ಪಿಂಚಣಿಯನ್ನು, ಸರ್ಕಾರಿ ಯೋಜನೆ ಪಡೆಯಲು ಅರ್ಹರಿದ್ದರೂ ಅವಕಾಶ ವಂಚಿತರಾಗಿದ್ದವರನ್ನು ನಮ್ಮ ಕಾರ್ಯಕರ್ತರು ಗುರುತಿಸಿ ಮಧ್ಯವರ್ತಿಗಳಿಗೆ ಅವಕಾಶ ಕೊಡದೆ ಉಚಿತವಾಗಿ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನಾದಂತಹ ಹಲವು ಯೋಜನೆಗಳನ್ನು ಮಾಡಿಸಿ ಅವುಗಳ ಮಂಜೂರಾತಿ ಪತ್ರಗಳನ್ನು ವಿತರಿಸಿದ್ದಾಗಿ ಹೇಳಿದರು.ಈ ವೇಳೆ ಮಹೇಂದ್ರ, ಜಗನ್ನಾಥ್ ಭೋವಿ, ಶ್ರೀಕಾಂತ್, ಜಗದೀಶ್ ಗೌಡ, ಕಿರಣ್, ಚೇತನ್, ಪುನೀತ್, ಸುರೇಶ್, ಮಂಜು ಉಪ್ಪಾರ್, ಮಲ್ಲೇಶ್ ಮೊದಲಾದವರು ಇದ್ದರು.