ಉಡುಪಿ ತುಳುಕೂಟದಿಂದ ‘ಜೋಕ್ಲೆಗಾದ್ ತುಳುನಡಕೆ’ ಸಂಪನ್ನ

| Published : Feb 09 2025, 01:31 AM IST

ಉಡುಪಿ ತುಳುಕೂಟದಿಂದ ‘ಜೋಕ್ಲೆಗಾದ್ ತುಳುನಡಕೆ’ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ತುಳುಕೂಟ ಉಡುಪಿ ವತಿಯಿಂದ ಇಲ್ಲಿನ ಕಿದಿಯೂರು ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆಯಲ್ಲಿ ‘ಜೋಕ್ಲೆಗಾದ್ ತುಳುನಡಕೆ’ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮವನ್ನು ಉಡುಪಿಯ ಯುವ ಉದ್ಯಮಿ ವಿಕ್ರಮ್ ಉದ್ಘಾಟಿಸಿ ಶುಭ ಹಾರೈಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ತುಳುಕೂಟ ಉಡುಪಿ ವತಿಯಿಂದ ಇಲ್ಲಿನ ಕಿದಿಯೂರು ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆಯಲ್ಲಿ ‘ಜೋಕ್ಲೆಗಾದ್ ತುಳುನಡಕೆ’ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮವನ್ನು ಉಡುಪಿಯ ಯುವ ಉದ್ಯಮಿ ವಿಕ್ರಮ್ ಉದ್ಘಾಟಿಸಿ ಶುಭ ಹಾರೈಸಿದರು.ತುಳುಕೂಟ ಸಂಸ್ಥೆಯ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆಯ ಸಂಚಾಲಕ ಗುಂಡು ಬಿ. ಅಮೀನ್, ಸಾಫಲ್ಯ ಟ್ರಸ್ಟ್ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಗಣೇಶ್ ಶೇರಿಗಾರ್, ಉಡುಪಿಯ ಹಿರಿಯ ನ್ಯಾಯವಾದಿ ಎಂ. ಶಾಂತರಾಮ ಶೆಟ್ಟಿ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್‌ ಸಂಸ್ಥೆಯ ವ್ಯವಸ್ಥಾಪಕ ಪುರಂದರ ತಿಂಗಳಾಯ ಆಗಮಿಸಿದ್ದರು.ವಿದ್ಯಾಸಮುದ್ರತೀರ್ಥ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ, ಕೋಶಾಧಿಕಾರಿ ಚೈತನ್ಯ ಎಂ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳುನಡಕೆ ಕಾರ್ಯಕ್ರಮ ಸಂಚಾಲಕ ದಯಾನಂದ ಡಿ. ಸ್ವಾಗತಿಸಿದರು. ತುಳುಕೂಟದ ಸಂಘಟನಾ ಕಾರ್ಯದರ್ಶಿ ವಿದ್ಯಾಸರಸ್ವತಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು.