ಕದಾಳು ಸೊಸೈಟಿ ಅಧ್ಯಕ್ಷರಾಗಿ ಕಬ್ಬಿನಳ್ಳಿ ಜಗದೀಶ್‌ ಆಯ್ಕೆ

| Published : Mar 12 2025, 12:46 AM IST

ಕದಾಳು ಸೊಸೈಟಿ ಅಧ್ಯಕ್ಷರಾಗಿ ಕಬ್ಬಿನಳ್ಳಿ ಜಗದೀಶ್‌ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಆಲೂರು ತಾಲೂಕಿನ ಕದಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಜಗದೀಶ್ ಕಬ್ಬಿನಹಳ್ಳಿ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರಿ ಕ್ಷೇತ್ರ ಸಾಕಷ್ಟು ವಿಶಾಲವಾಗಿ ಬೆಳೆದು ಹೆಚ್ಚು ಸವಲತ್ತುಗಳನ್ನು ನೀಡುವ ಮೂಲಕ ಸಾರ್ವಜನಿಕರನ್ನು ತನ್ನೆಡೆಗೆ ಸೆಳೆಯುತ್ತಿದೆ. ರೈತರು ಮತ್ತು ಸಾರ್ವಜನಿಕರು ಆದಷ್ಟು ಸಹಕಾರ ಬ್ಯಾಂಕುಗಳಲ್ಲಿ ತಮ್ಮ ಆರ್ಥಿಕ ವ್ಯವಹಾರಗಳನ್ನು ಮಾಡುವುದರೊಂದಿಗೆ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಆಲೂರು

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ನಿರ್ದೇಶಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ಗಾಮೀಣ ಭಾಗದ ರೈತರಿಗೆ ಹಾಗೂ ಷೇರುದಾರರಿಗೆ ಸಹಕಾರಿ ಸಂಘಗಳು ಆರ್ಥಿಕ ಶಕ್ತಿ ಕೇಂದ್ರಗಳಾಗಿವೆ. ರಾಷ್ಟ್ರೀಯ ಬ್ಯಾಂಕುಗಳಿಗೆ ಪೈಪೋಟಿ ನೀಡುವಲ್ಲಿ ಸರಿ ಸಮಾನವಾಗಿ ಷೇರುದಾರರಿಗೆ ಸೇವೆಯನ್ನು ಒದಗಿಸುತ್ತಿದ್ದು ಹೆಚ್ಚು ಪ್ರಯೋಜನಕಾರಿಯಾಗಿವೆ. ಸಹಕಾರ ಸಂಘಗಳು ಗ್ರಾಮಿಣ ರೈತರಿಗೆ ಸಾಲ ಸೌಲಭ್ಯ ನೀಡುವುದರ ಜೊತೆಗೆ, ಯಶಸ್ವಿನಿಯಂತಹ ಆರೋಗ್ಯ ವಿಮೆ, ರಸಗೊಬ್ಬರ, ಕೀಟನಾಶಕ, ಪಡಿತರ ವಿತರಿಸುತ್ತಾ ನಂಬಿಕೆಗೆ ಪಾತ್ರವಾಗಿದೆ ಎಂದರು.

ಸಹಕಾರಿ ಕ್ಷೇತ್ರ ಸಾಕಷ್ಟು ವಿಶಾಲವಾಗಿ ಬೆಳೆದು ಹೆಚ್ಚು ಸವಲತ್ತುಗಳನ್ನು ನೀಡುವ ಮೂಲಕ ಸಾರ್ವಜನಿಕರನ್ನು ತನ್ನೆಡೆಗೆ ಸೆಳೆಯುತ್ತಿದೆ. ರೈತರು ಮತ್ತು ಸಾರ್ವಜನಿಕರು ಆದಷ್ಟು ಸಹಕಾರ ಬ್ಯಾಂಕುಗಳಲ್ಲಿ ತಮ್ಮ ಆರ್ಥಿಕ ವ್ಯವಹಾರಗಳನ್ನು ಮಾಡುವುದರೊಂದಿಗೆ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕದಾಳು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ನಿರ್ದೇಶಕರಾದ ರಾಮಚಂದ್ರ, ಕೇಶವಮೂರ್ತಿ, ಗಂಗೇಗೌಡ, ಈರನಾಯಕ, ತಿಮ್ಮಯ್ಯ, ಸೋಮಶೇಖರ್, ಸುಮಿತ್ರ, ಜಯಂತಿ, ದೇವಾಜೇಗೌಡ, ನಾಗರಾಜು ಉಪಸ್ಥಿತರಿದ್ದರು.