ಮಹಿಳೆಯರ ಸ್ವಯಂ ರಕ್ಷಣೆಗೆ ಕರಾಟೆ ಸಹಕಾರಿ: ಕೃಷ್ಣಗೌಡ

| Published : Oct 21 2023, 12:31 AM IST

ಸಾರಾಂಶ

ಗದಗ ತಾಲೂಕಿನ ಸೊರಟೂರ ಗ್ರಾಮದ ಶ್ರೀದುರ್ಗಾದೇವಿ ಸಮುದಾಯ ಭವನದಲ್ಲಿ ಆರ್ಚ ಫೌಂಡೇಶನ್ ಶುಕ್ರವಾರ ಹಾಗೂ ವಿದ್ಯಾರಾಣಿ ಟ್ರಸ್ಟ್ ವತಿಯಿಂದ ಅಭಯ ಕಾರ್ಯಕ್ರಮದಡಿ ಗ್ರಾಮೀಣ ಮಹಿಳೆಯರಿಗಾಗಿ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿ ಕೇಂದ್ರ ಉದ್ಘಾಟನೆ

ಮುಳಗುಂದ: ಮಹಿಳೆಯರ ಸ್ವಯಂ ರಕ್ಷಣೆಗೆ ಕರಾಟೆ ಸಹಕಾರಿಯಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್. ಪಾಟೀಲ ಹೇಳಿದರು.

ಸಮೀಪದ ಸೊರಟೂರ ಗ್ರಾಮದ ಶ್ರೀದುರ್ಗಾದೇವಿ ಸಮುದಾಯ ಭವನದಲ್ಲಿ ಆರ್ಚ ಫೌಂಡೇಶನ್ ಶುಕ್ರವಾರ ಹಾಗೂ ವಿದ್ಯಾರಾಣಿ ಟ್ರಸ್ಟ್ ವತಿಯಿಂದ ಅಭಯ ಕಾರ್ಯಕ್ರಮದಡಿ ಗ್ರಾಮೀಣ ಮಹಿಳೆಯರಿಗಾಗಿ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರಿಗೆ ಅನ್ಯಾಯ, ಮಾನಸಿಕ, ದೈಹಿಕವಾಗಿ ದೌರ್ಜನೆ ನಡೆಯುತ್ತಿದ್ದು, ಅದನ್ನು ತಡೆಗಟ್ಟಲು ಪ್ರತಿಯೊಬ್ಬರು ಮುಂದಾಗಬೇಕು. ಆ ಒಂದು ಕೆಲಸವನ್ನು ಆರ್ಚ ಫೌಂಡೇಶನ್ ಮಾಡುತ್ತಿದ್ದು ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಉಚಿತ ಕರಾಟೆ ತರಬೇತಿ ನೀಡುತ್ತಿದೆ. ತರಬೇತಿಯ ಸದುಪಯೋಗವನ್ನು ಪ್ರತಿಯೋಬ್ಬರು ಪಡೆದುಕೊಳ್ಳಬೇಕು ಎಂದರು.

ಕರಾಟೆಯಿಂದ ಮಾನಸಿಕ, ದೈಹಿಕವಾಗಿ ಸದೃಡರಾಗಲು ಸಾಧ್ಯಆದ್ದರಿಂದ ತಾಯಿಂದಿರು ತಮ್ಮ ಮಕ್ಕಳನ್ನು ಈ ತರಬೇತಿ ಕೇಂದ್ರಕ್ಕೆ ಕಳುಹಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಭಾಗದಲ್ಲಿ ಇಂಥಹ ಒಂದು ಸಂಸ್ಥೆ ಗ್ರಾಮೀಣ ಮಹಿಳೆಯರನ್ನು ಸಬಲರನ್ನಾಗಿ ಮಾಡಲು ಉಚಿತವಾಗಿ ಕರಾಟೆ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ನೀಡುತ್ತಿರುವುದು ಸ್ವಾಗತಾರ್ಹ ಎಂದರು.

ಆರ್ಚ ಪೌಂಡೇಶನ್‌ನ ರೋಹಿತ ಶರ್ಮಾ ಮಾತನಾಡಿ,ಮಹಿಳೆಯೂ ಎಲ್ಲಿ ಪೂಜಿಸಲ್ಪಡುತ್ತಾಳು ಅಲ್ಲಿ ದೇವಾನು ದೇವತಿಗಳು ನಲೆಸಿರುತ್ತವೆ. ಮಹಿಳೆಯರ ಅಭಿವೃದ್ಧಿ ಪಡೆಸೋದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಈ ತರಬೇತಿ ಶಿಬಿರದಲ್ಲಿ ಕೇವ ಕರಾಟೆ ತರಬೇತಿ ಮಾತ್ರ ನೀಡುತ್ತಿಲ್ಲ ಜತೆಗೆ ಕಲಿಯಲ್ಲಿ ಹಿಂದೂಳಿದ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್, ಪರಿಹಾರ ಬೋಧನೆ, ಸಾಕ್ಷಾರತೆಯನ್ನ ಕಲಿಸುತ್ತಿದ್ದೇವೆ. ಸರ್ಕಾರದಿಂದ ಮಹಿಳೆಯರಿಗೆ ಹಲವಾರು ಯೋಜನೆಗಳು ಇದ್ದು, ಅವುಗಳ ಕುರಿತು ತಿಳಿಸುವ, ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಈ ವೇಳೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ ನಡೆಯಿತು. ಆರ್ಚ ಪೌಂಡೇಶನ್‌ನ ಸೌಂಕಿತಾ ಷಾ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ, ಮಾಜಿ ತಾಪಂ ಅಧ್ಯಕ್ಷ ಬಿ.ಆರ್.ದೇವರೆಡ್ಡಿ, ಗ್ರಾಪಂ ಅಧ್ಯಕ್ಷೆ ಜಯಶ್ರೀ ಬಂಕಾಪುರ, ಉಪಾಧ್ಯಕ್ಷ ಎಂ.ಎಸ್.ಪಾಟೀಲ, ಮುಖಂಡರಾದ ಶಿವಾನಂದ ಮಾದಣ್ಣವರ ಸೇರಿದಂತೆ ಪ್ರಮುಖರು ಇದ್ದರು.ಶರವಾತಿ ಕಲಾಲ, ಶರಣಪ್ಪ ಕಲಾಲ ನಿರೂಪಿಸಿದರು. ತರಬೇತಿ ಕೇಂದ್ರದ ಸಂಚಾಲಕ ಅರುಣ ವಂದಿಸಿದರು.