ಚನ್ನರಾಯಪಟ್ಟಣ ಪುರಸಭೆ ಉಪಾಧ್ಯಕ್ಷೆಯಾಗಿ ಕವಿತಾ ರಾಜು ಆಯ್ಕೆ

| Published : Jul 26 2025, 12:00 AM IST

ಚನ್ನರಾಯಪಟ್ಟಣ ಪುರಸಭೆ ಉಪಾಧ್ಯಕ್ಷೆಯಾಗಿ ಕವಿತಾ ರಾಜು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನರಾಯಪಟ್ಟಣದಲ್ಲಿ ಹಿಂದುಳಿದ ವರ್ಗದ ಮತದಾರರು ಹೆಚ್ಚಿದ್ದು ಅದನ್ನು ಪರಿಗಣಿಸಿ ಅಧಿಕಾರ ನೀಡಿದ ಶಾಸಕ ಸಿ. ಎನ್. ಬಾಲಕೃಷ್ಣ ಹಾಗೂ ಸದಸ್ಯರಿಗೆ ಧನ್ಯವಾದಗಳು ಎಂದು ನೂತನ ಪುರಸಭಾ ಉಪಾಧ್ಯಕ್ಷೆ ಕವಿತರಾಜು ತಿಳಿಸಿದರು. ಪಟ್ಟಣದ ಪುರಸಭೆಗೆ ಉಪಾಧ್ಯಕ್ಷರಾಗಿ ವಾರ್ಡ್ ನಂ.೧೬ರ ಸದಸ್ಯೆ ಕವಿತಾ ರಾಜು ಅವರನ್ನು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಮಾತನಾಡಿ, ಉಪಾಧ್ಯಕ್ಷ ಸ್ಥಾನ ನೀಡಿದ ಕ್ಷೇತ್ರದ ಶಾಸಕರಾದ ಸಿ. ಎನ್. ಬಾಲಕೃಷ್ಣ ಅವರಿಗೆ ಮತ್ತು ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಆರ್ಪಿಸುತ್ತೇನೆ. ಹಿಂದುಳಿದ ವರ್ಗದ ಗಾಣಿಗ ಸಮುದಾಯದ ಒಬ್ಬ ಸಾಮಾನ್ಯ ಮಹಿಳೆಗೆ ಈ ಹುದ್ದೆ ದೊರಕಿರುವುದು ಸಂತೋಷದ ವಿಚಾರ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದಲ್ಲಿ ಹಿಂದುಳಿದ ವರ್ಗದ ಮತದಾರರು ಹೆಚ್ಚಿದ್ದು ಅದನ್ನು ಪರಿಗಣಿಸಿ ಅಧಿಕಾರ ನೀಡಿದ ಶಾಸಕ ಸಿ. ಎನ್. ಬಾಲಕೃಷ್ಣ ಹಾಗೂ ಸದಸ್ಯರಿಗೆ ಧನ್ಯವಾದಗಳು ಎಂದು ನೂತನ ಪುರಸಭಾ ಉಪಾಧ್ಯಕ್ಷೆ ಕವಿತರಾಜು ತಿಳಿಸಿದರು.ಪಟ್ಟಣದ ಪುರಸಭೆಗೆ ಉಪಾಧ್ಯಕ್ಷರಾಗಿ ವಾರ್ಡ್ ನಂ.೧೬ರ ಸದಸ್ಯೆ ಕವಿತಾ ರಾಜು ಅವರನ್ನು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಮಾತನಾಡಿ, ಉಪಾಧ್ಯಕ್ಷ ಸ್ಥಾನ ನೀಡಿದ ಕ್ಷೇತ್ರದ ಶಾಸಕರಾದ ಸಿ. ಎನ್. ಬಾಲಕೃಷ್ಣ ಅವರಿಗೆ ಮತ್ತು ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಆರ್ಪಿಸುತ್ತೇನೆ. ಹಿಂದುಳಿದ ವರ್ಗದ ಗಾಣಿಗ ಸಮುದಾಯದ ಒಬ್ಬ ಸಾಮಾನ್ಯ ಮಹಿಳೆಗೆ ಈ ಹುದ್ದೆ ದೊರಕಿರುವುದು ಸಂತೋಷದ ವಿಚಾರ ಎಂದರು. ಪಟ್ಟಣದ ಪುರಸಭೆಗೆ ಈ ಹಿಂದೆ ಉಪಾಧ್ಯಕ್ಷರಾಗಿದ್ದ ವಾರ್ಡ್ ನಂ.೧೫ರ ಜೆಡಿಎಸ್ ಸದಸ್ಯೆ ರಾಣಿ ಕೃಷ್ಣ ರಾಜೀನಾಮೆ ತೆರವಿನಿಂದ ಖಾಲಿ ಇದ್ದ ಸ್ಥಾನಕ್ಕೆ ಸದಸ್ಯೆ ಕವಿತಾ ರಾಜು ಅವರನ್ನು ಎಲ್ಲಾ ಸದಸ್ಯರ ಮೇರೆಗೆ ಒಕ್ಕೊರಲಿನಿಂದ ಆಯ್ಕೆ ಮಾಡಲಾಯಿತು.ತಾಲೂಕು ದಂಡಾಧಿಕಾರಿ ಜಿ.ಎಸ್. ಶಂಕರಪ್ಪ ನೇತೃತ್ವದಲ್ಲಿ ಖಾಲಿ ಇದ್ದ ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ನಡೆಯಿತು. ಸಾಮಾನ್ಯ ಮಹಿಳೆಗೆ ಮೀಸಲಿದ್ದ ಸ್ಥಾನಕ್ಕೆ ಕವಿತಾ ರಾಜು ಹೊರತುಪಡಿಸಿ ಬೇರ್ಯಾರು ಆಕಾಂಕ್ಷಿಗಳಿಲ್ಲದ ಕಾರಣ ಅವರ ಆಯ್ಕೆಯನ್ನು ತಾಲೂಕು ದಂಡಾಧಿಕಾರಿಗಳು ಅನುಮೋದಿಸಿದರು. ಈ ವೇಳೆ ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ, ಹಿಂದುಳಿದ ಸಮಾಜಗಳಲ್ಲಿ ಒಂದಾದ ಗಾಣಿಗ ಸಮುದಾಯವನ್ನು ಪ್ರಥಮ ಬಾರಿಗೆ ಗುರುತಿಸಿ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಸದಸ್ಯೆ ಕವಿತಾ ರಾಜು ಅವರು ಪ್ರತಿನಿಧಿಸುವ ವಾರ್ಡ್ ಅಭಿವೃದ್ಧಿಯನ್ನ ಸಮರ್ಪಕವಾಗಿ ಮಾಡಿದ್ದು, ಅವರು ಇದೀಗ ಉಪಾಧ್ಯಕ್ಷರಾಗುವ ಮೂಲಕ ಅವರ ವ್ಯಾಪ್ತಿ ಇಡೀ ಪಟ್ಟಣಕ್ಕೆ ವಿಸ್ತರಿಸಿದೆ. ಅಧ್ಯಕ್ಷರ ಜೊತೆಗೂಡಿ ಪಟ್ಟಣದ ಸ್ವಚ್ಛತೆ ಕುರಿ ಕುಡಿಯುವ ನೀರು ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಅವರು ಸಹಕರಿಸಲಿ ಎಂದರು.ನೂತನ ಉಪಾಧ್ಯಕ್ಷರನ್ನು ಶಾಸಕ ಸಿ.ಎನ್. ಬಾಲಕೃಷ್ಣ, ಪುರಸಭಾಧ್ಯಕ್ಷ ಸಿ.ಎನ್. ಮೋಹನ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್ ಸೇರಿ ಹಾಜರಿದ್ದ ಎಲ್ಲ ಸದಸ್ಯರು ಅಭಿನಂದಿಸಿದರು.ಪುರಸಭಾ ಸದಸ್ಯರುಗಳಾದ ಎಚ್.ಎನ್.ನವೀನ್, ಸಿ.ಎನ್. ಶಶಿಧರ್, ಧರಣೇಶ್, ಜಿ.ಆರ್.ಸುರೇಶ್, ಲಕ್ಷ್ಮಮ್ಮ, ರಾಮಕೃಷ್ಣ, ಇಲಿಯಾಜ್, ರೇಖಾ ಅನಿಲ್, ಬನಶಂಕರಿ ರಘು, ರಾಧಾ ಮಂಜುನಾಥ್, ಮಹೇಶ್, ಪುರಸಭಾ ಮುಖ್ಯಾಧಿಕಾರಿ ಯತೀಶ್ ಕುಮಾರ್ ಸೇರಿ ಪುರಸಭಾ ಸಿಬ್ಬಂದಿ ಇದ್ದರು.

ಇದೇ ವೇಳೆ ನೂತನ ಅಧ್ಯಕ್ಷರನ್ನು ವಾರ್ಡ್‌ನ ಜನತೆ, ನೂರಾರು ಅಭಿಮಾನಿಗಳು, ಸಮಾಜದ ಮುಖಂಡರು ಪಟಾಕಿ ಹಚ್ಚಿ, ಕುಣಿದು ಕುಪ್ಪಳಿಸಿ ಸಿಹಿ ಹಂಚಿದರು.