ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಕೆ.ಸಿ ವ್ಯಾಲಿ ಯೋಜನೆಯಡಿಯಲ್ಲಿ ಸಾವಿರಾರು ಕೋಟಿ ಖರ್ಚು ಮಾಡಿ ಶ್ರೀನಿವಾಸಪುರ ತಾಲೂಕಿನಾದ್ಯಂತ ಪೈಪ್ ಲೈನ್ ಹಾಕಲಾಗಿದ್ದು, ತಾಲೂಕಿನಲ್ಲಿ ಒಂದೇ ಒಂದು ಕೆರೆಗೂ ನೀರು ತುಂಬಿಸಲಾಗಿಲ್ಲ. ಮೂರು ಹಂತಗಳಲ್ಲಿ ನೀರು ಶುದ್ದೀಕರಿಸಿ ಹರಿಸುವುದಾದರೆ ಕೋಲಾರ ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಹರಿಸಿ ಇಲ್ಲವಾದರೆ ನಮಗೆ ಆ ನೀರು ಬೇಡ ಎಂದು ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು. ಇಸ್ರೇಲ್ ಮಾದರಿಯಲ್ಲಿ ವ್ಯರ್ಥ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವ ಯೋಜನೆ ಜಾರಿ ತಂದಿರುವುದು ಸ್ವಾಗತಾರ್ಹ. ಆದರೆ ಆ ನೀರನ್ನು ಎರಡನೇ ಹಂತದಲ್ಲಿಯೂ ಸರಿಯಾಗಿ ಶುದ್ದೀಕರಣವಾಗದೆ ಕೊಳಚೆ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಜನ, ಜಾನುವಾರುಗಳು ಸೇರಿದಂತೆ ರೈತರ ಬೆಳೆಗಳಿಗೂ ಈ ನೀರು ಮಾರಕವಾಗಿದೆ. ೪೨೦ ಎಂ.ಎಲ್.ಡಿ ನೀರು ಹರಿಸಬೇಕಿದ್ದ ಸರ್ಕಾರ ಕೇವಲ ೨೦೦ ಎಂ.ಎಲ್.ಡಿ ಯಷ್ಟು ನೀರು ಮಾತ್ರ ಹರಿಸಲಾಗುತ್ತಿದೆ ಎಂದರು.ನೀರಿನಿಂದ ತೊಂದರೆ ಇಲ್ಲ
ಶಾಸಕರ ಪ್ರಶ್ನೆಗೆ ಸಚಿವ ಬೋಸ್ ರಾಜ್ ಉತ್ತರಿಸಿ, ಕೆ.ಸಿ ನೀರು ಸಮರ್ಪಕವಾಗಿ ಶುದ್ದೀಕರಿಸಿ ಹರಿಸಲಾಗುತ್ತಿದ್ದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ಕೊಟ್ಟಿರುವ ವರದಿಯ ಪ್ರಕಾರ ಕೆ.ಸಿ ವ್ಯಾಲಿ ಯೋಜನೆಯ ನೀರಿನಿಂದ ಯಾವುದೇ ತೊಂದರೆಯಿಲ್ಲ, ಪ್ರತಿ ನಿತ್ಯ ಎಸ್.ಟಿ.ಪಿ ಘಟಕಗಳಲ್ಲಿ ನೀರಿನ ಪರೀಕ್ಷೆ ಮಾಡಿ ವರದಿ ಸಲ್ಲಿಸಲಾಗುತ್ತಿದೆ ಎಂದರು.ಬಿ.ಡಬ್ಲೂ.ಎಸ್.ಎಸ್.ಬಿ ಯವರ ಬಳಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಭೆ ನಡೆಸಿದ್ದು ಸೂಚನೆ ನೀಡಲಾಗಿದ್ದು ಮತ್ತೊಮ್ಮೆ ಮುಖ್ಯಮಂತ್ರಿ ಸಮ್ಮುಖದಲ್ಲಿ ಬಿ.ಡಬ್ಲೂ.ಎಸ್.ಎಸ್.ಬಿ ಸಭೆ ಮಾಡಿ ೪೪೦ ಎಂ.ಎಲ್.ಡಿ ನೀರು ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದರು.ಶುದ್ದೀಕರಿಸದಿದ್ದರ ನೀರು ಬೇಡನಂತರ ಶಾಸಕರು ಮಧ್ಯಪ್ರವೇಶಿಸಿ ಜನ ಜಾನುವಾರುಗಳ ಹಿತದೃಷ್ಟಿಯಿಂದ ಮೂರನೇ ಹಂತದಲ್ಲಿ ನೀರನ್ನು ಶುದ್ದೀಕರಿಸಿ ಹರಿಸುವುದಾದರೆ ಜಿಲ್ಲೆಗೆ ಕೆ.ಸಿ ವ್ಯಾಲಿ ನೀರನ್ನು ಹರಿಸಿ ಇಲ್ಲವಾದರೆ ನಮಗೆ ಬೇಡವೇ ಬೇಡ ಎಂದು ಕೈ ಮುಗಿದರು.