ಜ್ಯೋತಿಯಾತ್ರೆ ನಾಡಿಗೆ ಸ್ಫೂರ್ತಿ ತುಂಬಲಿ

| Published : Feb 03 2024, 01:50 AM IST

ಸಾರಾಂಶ

ಮೂರು ವರ್ಷದಿಂದ ಈ ಸಂಪ್ರದಾಯ ಪ್ರಾರಂಭವಾಗಿದ್ದು, ಇದನ್ನು ಮುಂದುವರಿಸುವುದರ ಜೊತೆಗೆ ಚನ್ನಮ್ಮಳ ಇತಿಹಾಸ, ಮಹತ್ವ ತಿಳಿಸುವ ಕಾರ್ಯವಾಗಬೇಕು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರುಜ್ಯೋತಿಯಾತ್ರೆಯೂ ಕೇವಲ ಯಾತ್ರೆಯಾಗಿ ಉಳಿಯದೆ ನಾಡಿಗೆ ಸ್ಫೂರ್ತಿ ತುಂಬಿ ಯುವಕರಲ್ಲಿ ಇತಿಹಾಸ ಪರಿಚಯಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ರಾಣಿ ಚನ್ನಮ್ಮಳ 195ನೇ ಸ್ಮರಣೋತ್ಸವದ ಪ್ರಯುಕ್ತ ಚನ್ನಮ್ಮ ಜನ್ಮಸ್ಥಳ ಕಾಕತಿಯಿಂದ ಶುರುವಾಗಿರುವ ಜ್ಯೋತಿ ಯಾತ್ರೆಯನ್ನು ಶುಕ್ರವಾರ ಪಟ್ಟಣದಲ್ಲಿ ಸ್ವಾಗತಿಸಿ ಮಾತನಾಡಿದ ಅವರು, ಮೂರು ವರ್ಷದಿಂದ ಈ ಸಂಪ್ರದಾಯ ಪ್ರಾರಂಭವಾಗಿದ್ದು, ಇದನ್ನು ಮುಂದುವರಿಸುವುದರ ಜೊತೆಗೆ ಚನ್ನಮ್ಮಳ ಇತಿಹಾಸ, ಮಹತ್ವ ತಿಳಿಸುವ ಕಾರ್ಯವಾಗಬೇಕು ಎಂದರು ಹೇಳಿದರು. 75 ವರ್ಷಗಳಿಂದ ಕಿತ್ತೂರು ಎಂದು ಮಾತ್ರ ಕರೆಯುತ್ತಿದ್ದರು. ಈಗಿನ ರಾಜ್ಯ ಸರ್ಕಾರ ಚನ್ನಮ್ಮನ ಕಿತ್ತೂರು ಎಂದು ಘೋಷಿಸುವ ಮೂಲಕ ಗೌರವ ನೀಡಿದ್ದು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಿದರು.ಕಲ್ಮಠದ ಶ್ರೀ ಮಡಿವಾಳರಾಜ ಯೋಗೀಂದ್ರ ಸ್ವಾಮೀಜಿ ಮಾತನಾಡಿ, ಚನ್ನಮ್ಮಳ ಐತಿಹಾಸಿಕ ನಾಡು ರಾಷ್ಟ್ರೀಯ ಸ್ಮಾರಕವಾಗಬೇಕು. ಈಗಾಗಲೇ ಕೇಂದ್ರ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಇದೆ ಎಂದು ಹೇಳಿದ್ದಾರೆ. ಕಿತ್ತೂರು ರಾಷ್ಟ್ರೀಯ ಸ್ಮಾರಕವಾಗಿ ಮಾಡಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.ತದನಂತರ ಐತಿಹಾಸಿಕ ಕಿತ್ತೂರು ಅರಮನೆಯಲ್ಲಿ ರಾಣಿ ಚನ್ನಮ್ಮಜಿಯನ್ನು ಸ್ಮರಿಸಿ ದೀಪ ಬೆಳಗಿಸಿ ಪೂಜಿ ಸಲ್ಲಿಸಲಾಯಿತು. ಇದಕ್ಕೂ ಮೊದಲು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.

ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ, ರಾಘವೇಂದ್ರ ಕ್ಯೂರೇಟರ್, ಚಂದ್ರಗೌಡ ಪಾಟೀಲ, ಸುನಿಲ ಘಿವಾರಿ, ಕೃಷ್ಣಾ ಬಾಳೆಕುಂದ್ರಿ, ಅಶ್ಖಫಾಕ್ ಹವಾಲ್ದಾರ್, ಬಸವರಾಜ ಸಂಗೊಳ್ಳಿ, ಶಂಕರ ಬಡಿಗೇರ, ಸುರೇಶ ಕಿತ್ತೂರ, ಸಂಜು ಲೋಕಾಪುರ, ಡಿ ಆರ್ ಪಾಟೀಲ, ಕಿರಣ್ ವಾಳದ, ಚನ್ನಮ್ಮಾಜಿ ಅಭಿಮಾನಿಗಳು ಹಾಗೂ ಇತರರು ಇದ್ದರು. .