ರೈತರಿಗೆ ಮನ್ನಣೆ ದೊರೆಯಲಿ

| Published : Feb 08 2024, 01:30 AM IST / Updated: Feb 08 2024, 01:31 AM IST

ಸಾರಾಂಶ

ಅನ್ನದಾತರಿಗೆ ಮನ್ನಣೆ ದೊರೆಯಬೇಕು. ಆಗ ಮಾತ್ರ ನಮ್ಮೂರು ಸಮೃದ್ಧ ನಾಡು ಆಗಿ ಉಳಿಯಲು ಸಾಧ್ಯ. ಇಲ್ಲವಾದರೆ ಅನ್ನಕ್ಕಾಗಿ ಪರದಾಡುವ ಸ್ಥಿತಿ ಬರಲಿದೆ ಎಂದು ಜಿಲ್ಲಾ ನಿರ್ದೇಶಕ ಕೃಷ್ಣಾ ಟೀ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಅನ್ನದಾತರಿಗೆ ಮನ್ನಣೆ ದೊರೆಯಬೇಕು. ಆಗ ಮಾತ್ರ ನಮ್ಮೂರು ಸಮೃದ್ಧ ನಾಡು ಆಗಿ ಉಳಿಯಲು ಸಾಧ್ಯ. ಇಲ್ಲವಾದರೆ ಅನ್ನಕ್ಕಾಗಿ ಪರದಾಡುವ ಸ್ಥಿತಿ ಬರಲಿದೆ ಎಂದು ಜಿಲ್ಲಾ ನಿರ್ದೇಶಕ ಕೃಷ್ಣಾ ಟೀ ಹೇಳಿದರು.

ಪಟ್ಟಣದ ಶಂಭುಲಿಂಗಾನಂದ ಮಠದಲ್ಲಿ ಸೋಮವಾರ ಹಮ್ಮಿಕೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮುಧೋಳ ತಾಲೂಕು, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಲೋಕಾಪುರ ವಲಯದ ಇವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ತಂತ್ರಜ್ಞಾನ ಕ್ಷೇತ್ರದ ಪ್ರಗತಿಯಿಂದಾಗಿ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆಯಾಗುತ್ತಿದೆ. ಇದರಿಂದಾಗಿ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ನಿವಾರಣೆಯಾಗುತ್ತಿದೆ. ಎಲ್ಲ ರೈತರು ಆಧುನಿಕ ಯಂತ್ರೋಪಕರಗಳನ್ನು ಬಳಸುವಂತಾಗಬೇಕು, ಮಹಿಳೆಯರು ತಮ್ಮ ಕೌಶಲ್ಯವನ್ನು ಬಳಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಬೇಕು ಎಂದರು.

ಹಿರಿಯ ನಾಗರಿಕರ ಸೇವಾ ಸಂಘದ ಅಧ್ಯಕ್ಷ ಆರ್.ಕೆ.ಮಠದ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಚೈತನ್ಯ ತುಂಬವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಧಾರ್ಮಿಕತೆಯ ಅರಿವಿನ ಜತೆಗೆ ಆರ್ಥಿಕ ಸ್ವಾವಲಂಬನೆಯ ಚಿಂತನೆಯನ್ನು ಡಾ.ವೀರೇಂದ್ರ ಹೆಗ್ಗಡೆ ಅವರು ಜನರಲ್ಲಿ ಮೂಡಿಸುತ್ತಿರುವುದು ಉತ್ತಮ ಬೆಳವಣೆಗೆ, ವ್ಯವಹಾರ ಜ್ಞಾನ ಮತ್ತು ಆರ್ಥಿಕ ಚೈತನ್ಯ ನೀಡಿದರೆ ಯಾರಾದರೂ ಮುಂದೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಜನಜಾಗೃತಿ ಸದಸ್ಯ ಮಹಾದೇವಪ್ಪ ಹೊಸಟ್ಟಿ ಮಾತನಾಡಿದರು. ಸಾನ್ನಿಧ್ಯವನ್ನು ಹಿರೇಮಠದ ಡಾ. ಚಂದ್ರಶೇಖರ ಸ್ವಾಮೀಜಿ, ಸತ್ಯನಾರಾಯಣ ಪೂಜಾ ಕಮಿಟಿ ಅಧ್ಯಕ್ಷ ಶಿವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ರಾಜು ಎಸ್, ಹಣಮಂತಗೌಡ ಪಾಟೀಲ, ಲಚ್ಚಪ್ಪ ಅರಕೇರಿ, ವೆಂಕನಗೌಡ ಮುಳ್ಳೂರ, ಸಹನಾ ಗೋಲ್ಡ್ ಫೌಂಡೇಶನ್‌ ಅಧ್ಯಕ್ಷ ನೀಲೇಶ ಬನ್ನೂರ ಇತರರು ಇದ್ದರು.