ಹುಚ್ಚು ನಾಯಿ ಕಡಿತ; 14 ಮಂದಿ ಆಸ್ಪತ್ರೆಗೆ

| Published : Oct 09 2024, 01:42 AM IST / Updated: Oct 09 2024, 01:43 AM IST

ಸಾರಾಂಶ

ಬಿದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ಮಕ್ಕಳು, ಮತ್ತು ವಾಹನ ಸವಾರರಿಗೆ ರಸ್ತೆಯಲ್ಲಿ ಓಡಾಡಲು ಭಯ ಪಡಬೇಕಾದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಅಂದಾಜು 2500 ಕ್ಕೂ ಅಧಿಕ ಬಿಡಾಡಿ ನಾಯಿಗಳಿವೆ. ತಾಲ್ಲೂಕಿನಾದ್ಯoತ ಒಂದೇ ದಿನದಲ್ಲಿ ನಾಯಿಗಳು ಕಚ್ಚಿದ 23 ಪ್ರಕರಣಗಳು ದಾಖಲಾಗಿವೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ಅಂಬೇಡ್ಕರ್ ವೃತದ ಮಾರ್ಗದಲ್ಲಿ ಮಂಗಳವಾರ ಹುಚ್ಚು ನಾಯಿಯೊಂದು ಮಗು ಸೇರಿದಂತೆ 14 ಮಂದಿಯನ್ನು ಕಚ್ಚಿ ಗಾಯಗೊಳಿಸಿದೆ. ಇವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೆಳಗ್ಗೆ ದಿಢೀರನೆ ಪ್ರತ್ಯಕ್ಷವಾದ ಹುಚ್ಚು ನಾಯಿ, ರಸ್ತೆ ಬದಿ ಹೋಗುತ್ತಿದ್ದ ಜನರ ಮೇಲೆ ಮನ ಬಂದಂತೆ ಕಚ್ಚುತ್ತಾ ಸಾಗಿದೆ, ಬೆಂಗಳೂರು ವೃತ್ತದಿಂದ ಪ್ರಾರಂಭಿಸಿ ನ್ಯಾಷನಲ್ ಕಾಲೇಜಿನವರೆಗೂ, 14 ಜನರನ್ನು ಗಾಯಗೊಳಿಸಿದೆ, ಮತ್ತು ದ್ವಿಚಕ್ರ ವಾಹನ ಸವಾರನ್ನು ಅಟ್ಟಾಡಿಸಿಕೊಂಡು ಹೋಗಿದೆ, ಇದರಿಂದ ವಾಹನ ಸವಾರರು ಗಾಬರಿಗೊಂದು ಅಡ್ಡ ದಿಡ್ಡಿಯಾಗಿ ಚಲಿಸಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ನಾಯಿ ಕೊಲ್ಲುವ ಯತ್ನ ವಿಫಲ

ಹಲವಾರು ಮಂದಿಯನ್ನು ಕಚ್ಚಿ ಗಾಯಗೊಳಿಸಿದ್ದರಿಂದ ಸ್ಥಳೀಯರು ಸೇರಿ ನಾಯಿಯನ್ನು ಕೊಲ್ಲಲು ಪ್ರಯತ್ನಿಸಿದರು, ಅದು ತಪ್ಪಿಸಿಕೊಂಡು ಬೇರೆ ಬೇರೆ ವಾರ್ಡ್ ಗಳಿಗೆ ಓಡಿ ಹೋಗಿದೆ. ಇದೇ ವೇಳೆ ಗಾಯಗೊಂಡವರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಇನ್ನು ಹಲವು ಮಂದಿ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲವರ ಕೈ ಮತ್ತು ಕಾಲಿನ ಭಾಗಕ್ಕೆ ಕಚ್ಚಿದ್ದು,ಅದೃಷ್ಟವಶಾತ್ ಯಾರಿಗೂ ಪ್ರಾಣಪಾಯವಿಲ್ಲ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದರು.

ನಗದಲ್ಲಿವೆ 2500 ಬೀದಿ ನಾಯಿ

ಬಿದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ಮಕ್ಕಳು, ಮತ್ತು ವಾಹನ ಸವಾರರಿಗೆ ರಸ್ತೆಯಲ್ಲಿ ಓಡಾಡಲು ಭಯ ಪಡಬೇಕಾದ ವಾತಾವರಣ ನಿರ್ಮಾಣವಾಗಿದೆ. ನಗರದಲ್ಲಿ ಅಂದಾಜು 2500 ಕ್ಕೂ ಅಧಿಕ ಬಿಡಾಡಿ ನಾಯಿಗಳಿವೆ. ತಾಲ್ಲೂಕಿನಾದ್ಯoತ ಒಂದೇ ದಿನದಲ್ಲಿ ನಗರ ಭಾಗದಲ್ಲಿ 17 ಮತ್ತು ಗ್ರಾಮೀಣ ಭಾಗದಲ್ಲಿ 6 ಸೇರಿ ಒಟ್ಟು 23 ನಾಯಿ ಕಚ್ಚಿದ ಪ್ರಕರಣಗಳು ದಾಖಲಾಗಿವೆ. ಹುಚ್ಚು ನಾಯಿ ನಾಗರಿಕರಿಗೆ ಮಾತ್ರವಲ್ಲದೆ ಇತರ ಹಲವು ಜಾನುವಾರೂಗಳಿಗೂ ಕಡಿದಿರುವ ಬಗ್ಗೆ ತಿಳಿದು ಬಂದಿದ್ದು, ಗ್ರಾಮಾದಲ್ಲಿ ಆತಂಕಕಾರಿ ವಾತಾವರಣ ನಿರ್ಮಾಣವಾಗಿದೆ.‘ಬಿಡಾಡಿ ನಾಯಿಗಳ ಸೆರೆ ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಟೆಂಡರ್‌ ಕರೆಯಲಾಗಿದೆ , ಟೆಂಡರ್ ಪ್ರಕ್ರಿಯೆ ಮುಗಿದ ನಂತರ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಲಾಗುತ್ತದೆ, ಎಂದು ನಗರಸಭೆ ಎಇಇ ಶಿವಶಂಕರ್ ತಿಳಿಸಿದರು.