ಸಾರಾಂಶ
ಸಂಪ್ರಾದಾಯಿಕ ಆಹಾರ ಪದ್ಧತಿಯ ಪಾಲನೆ ಜತೆಗೆ ಸಿದ್ಧ ಪಡಿಸಿದ ಆಹಾರದಿಂದ ದೂರ ಉಳಿಯುವುದು ಹಾಗೂ ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮ, ವ್ಯಾಯಾಮ ಮತ್ತು ಒತ್ತಡ ರಹಿತವಾದ ಜೀವನವನ್ನು ರೂಪಿಸಿಕೊಂಡರೆ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಸಲಹೆ ನೀಡಿದರು. ಮಾರಣಾಂತಿಕ ಕಾಯಿಲೆಯಾದ ಹೃದಯಾಘಾತ ತಡೆಯವ ಜತೆಗೆ ಉತ್ತಮ ಜೀವನ ಜೈಲಿ ಆಳವಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ನಡೆಯುತ್ತಿದೆ. ಜನರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬೇಕು. ಪೌಷ್ಠಿಕ ಆಹಾರವನ್ನು ಸೇವಿಸಬೇಕು, ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳಾದ ಡ್ರಗ್ಸ್ ಹಾಗೂ ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಸಂಪ್ರಾದಾಯಿಕ ಆಹಾರ ಪದ್ಧತಿಯ ಪಾಲನೆ ಜತೆಗೆ ಸಿದ್ಧ ಪಡಿಸಿದ ಆಹಾರದಿಂದ ದೂರ ಉಳಿಯುವುದು ಹಾಗೂ ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮ, ವ್ಯಾಯಾಮ ಮತ್ತು ಒತ್ತಡ ರಹಿತವಾದ ಜೀವನವನ್ನು ರೂಪಿಸಿಕೊಂಡರೆ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಸಲಹೆ ನೀಡಿದರು.ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಏರ್ಪಡಿಸಿದ್ದ ಹೃದಯಕ್ಕೆ ಹೆಜ್ಜೆ ಹಾಕೋಣ ಆರೋಗ್ಯವನ್ನು ಗೆಲ್ಲೋಣ ಶೀರ್ಷಿಕೆಯಡಿ ವಾಕಥಾನ್-೨೦೨೫ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಜೀವನದ ಉತ್ತಮ ಆರೋಗ್ಯಕ್ಕಾಗಿ ಒಂದು ಗಂಟೆ ಮೀಸಲಿಟ್ಟು, ಧ್ಯಾನ, ಯೋಗ, ವಾಕಿಂಗ್, ವ್ಯಾಯಾಮ, ಸಕರಾತ್ಮಕ ಚಿಂತನೆಗಳನ್ನು ರೂಢಿಸಿಕೊಂಡು ಆರೋಗ್ಯವಂತರಾಗಿ ಬದುಕೋಣವೆಂದು ಕರೆಕೊಟ್ಟರು.
ಮಾರಣಾಂತಿಕ ಕಾಯಿಲೆಯಾದ ಹೃದಯಾಘಾತ ತಡೆಯವ ಜತೆಗೆ ಉತ್ತಮ ಜೀವನ ಜೈಲಿ ಆಳವಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ನಡೆಯುತ್ತಿದೆ. ಜನರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬೇಕು. ಪೌಷ್ಠಿಕ ಆಹಾರವನ್ನು ಸೇವಿಸಬೇಕು, ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳಾದ ಡ್ರಗ್ಸ್ ಹಾಗೂ ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ ಮಾತನಾಡಿ, ಇತ್ತೀಚಿನ ವರ್ಷದಲ್ಲಿ ಕಡಿಮೆ ವಯಸ್ಸಿನ ಯುವಕರಲ್ಲಿ ಹೃದಯಾಘಾತ ಆಗುತ್ತಿದೆ. ಕಾರಣ ಸತ್ವಯುತ ಆಹಾರ ಸೇವಿಸದೇ ಕಡಿಮೆ ಪೌಷ್ಠಕಾಂಶವುಳ್ಳ ಸಿದ್ಧಪಡಿಸಿದ ಆಹಾರ ಸೇವನೆ, ಮಾದಕ ವಸ್ತುಗಳ ಸೇವನೆ, ಸಿದ್ಧಪಡಿಸಿದ ಅಂದರೆ ಮನೆಯಿಂದ ಹೊರಗೆ ಹಣಕ್ಕೆ ದೊರೆಯುವ ಆಹಾರ ಬಹುತೇಕ ರಾಸಾಯನಿಕ ಮಿಶ್ರಿತದಿಂದ ಕೂಡಿರುತ್ತದೆ. ಉತ್ತಮ ಆರೋಗ್ಯ ಹಾಗೂ ಹೃದಯಕ್ಕಾಗಿ ಮನೆಯಲ್ಲಿ ತಯಾರಿಸುವ ಆಹಾರವನ್ನು ಬಳಸಬೇಕು. ಪ್ರತಿ ನಿತ್ಯ ಕನಿಷ್ಠ ೩೦ ನಿಮಿಷಗಳ ಕಾಲ ಯೋಗ, ವ್ಯಾಯಾಮ ಮತ್ತು ಕನಿಷ್ಠ ೮ ಗಂಟೆ ನಿದ್ರೆ ಮಾಡಬೇಕು. ಉತ್ತಮ ಆಹಾರ, ಉತ್ತಮ ನಿದ್ದೆ, ಉತ್ತಮ ಆರೋಗ್ಯದ ಮತ್ತು ಹೃದಯದ ಆರೋಗ್ಯದ ಆಲೋಚನೆ, ವಿಶ್ರಾಂತಿ ಇವುಗಳು ಉತ್ತಮ ಶಾರೋಗ್ಯಕ್ಕೆ ಅಗತ್ಯವಾಗಿದ್ದು, ಈ ಬಗ್ಗೆ ಪೋಷಕರು ತಮ್ಮ ಮಕ್ಕಳಲ್ಲಿ ಜಾಗ್ರತೆ ಮೂಡಿಸಬೇಕು. ಇತ್ತೀಚೆಗೆ ಮುಂಜಾನೆ ದಿನನಿತ್ಯದ ಕಾರ್ಯಕ್ಕೆ ತೆರಳುವಾಗಲು ಮೊಬೈಲ್ ತೆಗೆದುಕೊಂಡು ಹೋಗಿ ಕಲಹರಣ ಮಾಡುವ ಜನರನ್ನು ಕಾಣಬಹುದು, ಆದ್ದರಿಂದ ಸುಸ್ಥಿತಿಯ ಹೃದಯ ಜತೆಗೆ ಆರೋಗ್ಯಕ್ಕಾಗಿ ಚಟಗಳಿಂದ ದೂರವಿದ್ದು, ಜೀವನವನ್ನು ಆನಂದಿಸಬೇಕು ಎಂದು ಹೇಳಿದರು.ತಾಲೂಕು ಕಚೇರಿ ಆವರಣದಿಂದ ಕಾಲ್ನಡಿಗೆಯ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗುವ ಮೂಲಕ ಜನರಲ್ಲಿ ಹೃದಯಾಘಾತ ತಡೆಗಟ್ಟುವ ಕುರಿತು ಬಿತ್ತಿ ಪತ್ರಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ನರ್ಸಿಂಗ್ ಕಾಲೇಜು, ಮಹಿಳಾ ಪಾಲಿಟೆಕ್ನಿಕ್, ಪ್ರಥಮ ದರ್ಜೆ ಕಾಲೇಜು ಹಾಗೂ ಇತರೆ ಕಾಲೇಜಿನ ವಿದ್ಯಾರ್ಥಿಗಳು ವಾಕಥಾನ್-೨೦೨೫ ಕಾಲ್ನಡಿಗೆ ಜಾಥಕ್ಕೆ ವಿಶೇಷ ಮೆರಗನ್ನು ತಂದರು.ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಾಗೇಂದ್ರ, ತಾಪಂ ಇಒ ಮುನಿರಾಜು ಮಾತನಾಡಿದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ. ಸತ್ಯಪ್ರಕಾಶ್, ಡಾ. ಲೋಕೇಶ್, ಡಾ. ಅಶ್ವಥಿ, ಡಾ. ಭವ್ಯ, ಡಾ. ದಿನೇಶ್, ಬಿಇಒ ಸೋಮಲಿಂಗೇಗೌಡ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೃಷ್ಣಮೂರ್ತಿ, ವ್ಯವಸ್ಥಾಪಕ ಮಂಜುನಾಥ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಉಪನ್ಯಾಸಕಿ ಶೈಲಜಾ, ಕೃಷಿ ಇಲಾಖೆಯ ರಾಹುಲ್, ಮೀನುಗಾರಿಕೆ ಇಲಾಖೆಯ ಅಧಿಕಾರಿ ಸುಮಾ, ವಲಯ ಅರಣ್ಯಾಧಿಕಾರಿ ದಿಲೀಪ್, ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಹೊನ್ನಪ್ಪ, ರೋಟರಿ ಕ್ಲಬ್ ಅಧ್ಯಕ್ಷ ಎಚ್.ಆರ್. ಪ್ರವೀಣ್ ಕುಮಾರ್, ಸದಸ್ಯರಾದ ಮಂಜುನಾಥ್, ಶಿವಕುಮಾರ್, ದೈಹಿಕ ಶಿಕ್ಷಕ ಸುಜಾತಾ ಅಲಿ, ಪುರಸಭೆ ನೌಕರರು ಮತ್ತು ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.==========ಫೋಟೋ:ಕಾಲ್ನಡಿಗೆ ಜಾಥಕ್ಕೆ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಚಾಲನೆ ನೀಡಿದರು. ಮುನಿರಾಜು, ಡಾ. ರಾಜೇಶ್, ಡಾ. ನಾಗೇಂದ್ರ, ಶಿವಶಂಕರ್ ಇದ್ದರು.