ಸಾರಾಂಶ
ಹೊಳಲ್ಕೆರೆ ವೀರಭದ್ರಸ್ವಾಮಿಗೆ ಮಕರ ಸಂಕ್ರಾತಿ ಪ್ರಯುಕ್ತ ವಿಶೇಷ ಪೂಜೆ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಮಕರ ಸಂಕ್ರಾಂತಿಯನ್ನು ಸಡಗರ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು. ಹೊಳಲ್ಕೆರೆಯ ಕೋಟೆ ಭಾಗದಲ್ಲಿ ನೆಲೆಸಿರುವ ವೀರಭದ್ರೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತಾದಿಗಳ ಸಾಗರವೇ ನೆರೆದಿದ್ದು ದೇವರ ದರ್ಶನ ಮತ್ತು ಪೊಜೆಯಲ್ಲಿ ಪಾಲ್ಗೊಂಡಿದ್ದರು.ಇಲ್ಲಿನ ಮೂರ್ತಿ ರೌದ್ರಚಿತಾರಿಯಾಗಿದ್ದು ಬ್ರಹ್ಮನು ಪರಶಿವನನ್ನು ಕಡೆಗಣಿಸಿ ನಿಂದಿಸಿದಾಗ, ಶಿವನ್ನು ಕೆರಳಿ ಹಣೆಗಣ್ಮಿನಿಂದ ಆಗ್ನಿಯನ್ನು ಉರಿಸಿ, ಯಾಗದ ಜ್ವಾಲೆಯ ನಡುವೆ ಉದ್ಭವವಾಗುವುದರಿಂದ ಆತನನ್ನು ವೀರಭದ್ರ ಎನ್ನುವುದು ಪೌರಾಣಿಕ ಹಿನ್ನಲೆ
ಮಕರ ಸಂಕ್ರಮಣದ ಪ್ರಯುಕ್ತ ಇಲ್ಲಿನ ವೀರಭದ್ರಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆಗಳು ನಡೆಯುತ್ತವೆ. ಭಕ್ತರು ಚಳಿಯನ್ನೂ ಲೆಕ್ಕಿಸಿದೇ ಬೆಳಗಿನ ಜಾವವೇ ಪೂಜೆ ಮಾಡುತ್ತಾರೆ. ಅಂದಿನಿಂದ ಉತ್ತರಣಾಯಣ ಪುಣ್ಯಕಾಲದವರೆಗೆ ಭಕ್ತರಿಂದ ಪೂಜಿಸಲ್ಪಟ್ಟು ಸ್ವಾಮಿಗೆ ಮಕರ ಸಂಕ್ರಾತಿಯಂದು ವಿಶೇಷ ಅಲಂಕಾರಗಳನ್ನು ಏರ್ಪಡಿಸುವುದರಿಂದ ಅಂದು ಹೆಚ್ಚಿನ ಭಕ್ತರು ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತರೆ.ಹೊಳಲ್ಕೆರೆ ಪಟ್ಟಣದ ಕೋಟೆ ಪ್ರದೇಶ ದೇವಾಲಯಗಳ ಆಗರವಾಗಿದ್ದು ಇಲ್ಲಿ ಪ್ರಸನ್ನ ಗಣಪತಿ. ವೇಣುಗೋಪಾಲ ಸ್ವಾಮಿ, ಕಾಲಬೈರವೇಶ್ವರಸ್ವಾಮಿ, ಸಿದ್ದರಾಮೇಶ್ವರಸ್ವಾಮಿ, ಆಂಜನೇಯಸ್ವಾಮಿ ಸೇರಿ ಅನೇಕ ದೇವಾಲಯಗಳಿದ್ದು, ಇಲ್ಲಿ ಸಂಕ್ರಾಂತಿಯದ್ದು ವಿಶೇಷ ಪೂಜೆಯಿಂದಾಗಿ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ.