ಮಾಲೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ

| Published : Aug 12 2025, 12:30 AM IST

ಸಾರಾಂಶ

ಮಾಲೂರು ಪಟ್ಟಣದ ಪುರಸಭೆಯನ್ನು ನಗರ ಸಭೆಯನ್ನಾಗಿಸಲು ಡಿಸೆಂಬರ್ ತಿಂಗಳಿನಲ್ಲಿ ಆಗಿನ ಅಧ್ಯಕ್ಷ ಕೋಮಲ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪುರಸಭೆಯನ್ನು ನಗರ ಸಭೆಯನ್ನಾಗಿಸಲು ೨೭ ವಾರ್ಡುಗಳ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ನಗರಸಭೆ ನಾಮಫಲಕ ಅನಾವಣ ಮಾಡಿದ ಶಾಸಕ ನಂಜೇಗೌಡ । ಅಭವೃದ್ಧಿಗೆ ಸರ್ಕಾರದಿಂದ ಅನುದಾನ ಏರಿಕೆ । ವಾರ್ಡ್‌ಗಳ ಸಂಖ್ಯೆ ಹೆಚ್ಚಳ

ಸರ್ಕಾರಕ್ಕೆ ಜನತೆ ಕೃತಜ್ಞತೆ, ಕಳೆದ ಡಿಸೆಂಬರ್‌ನಲ್ಲಿ ಪ್ರಸ್ತಾವನೆ, ಪ್ರಾಧಿಕಾರದ ಅನುದಾನ ಬಳಕೆ, ಶಾಸಕ ಕೆ.ವೈ. ನಂಜೇಗೌಡ, ಕೋಲಾರ

ಮಾಲೂರು ಪಟ್ಟಣದ ಪುರಸಭೆಯನ್ನು ನಗರ ಸಭೆಯನ್ನಾಗಿಸಲು ಡಿಸೆಂಬರ್ ತಿಂಗಳಿನಲ್ಲಿ ಆಗಿನ ಅಧ್ಯಕ್ಷ ಕೋಮಲ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪುರಸಭೆಯನ್ನು ನಗರ ಸಭೆಯನ್ನಾಗಿಸಲು ೨೭ ವಾರ್ಡುಗಳ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮಾಲೂರು

ಪಟ್ಟಣದ ಪುರಸಭೆಯನ್ನು ರಾಜ್ಯ ಸರ್ಕಾರ ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶಿಸಿರುವುದರಿಂದ ನಗರದ ಅಭಿವೃದ್ಧಿಗೆ ಸರ್ಕಾರದ ಅನುದಾನಗಳು ಪ್ರಯೋಜನವಾಗಲಿದೆ. ನಗರ ಸಭೆಯಾಗಿ ಮೇಲ್ದೆರ್ಜೆಗೆ ಏರಿಸಿದ ಸರ್ಕಾರಕ್ಕೆ ನಗರದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ಕೆ.ವೈ. ನಂಜೇಗೌಡ ಹೇಳಿದರು ಪಟ್ಟಣದ ಪುರಸಭಾ ಆವರಣದಲ್ಲಿ ನಗರಸಭಾ ನಾಮಫಲಕ ಅನಾವರಣ ಮಾಡಿ ಮಾತನಾಡಿದ ಅವರು, ರಾಜಕಾರಣಿಗಳಾಗಲಿ ಚುನಾಯಿತ ಪ್ರತಿನಿಧಿಗಳಾಗಲಿ ಅಧಿಕಾರ ಅವಧಿಯಲ್ಲಿ ಮಾಡಿರುವ ಕೆಲಸಗಳು ಶಾಶ್ವತವಾಗಿರುತ್ತವೆ. ರಾಜ್ಯದಲ್ಲಿ ನಮ್ಮದೇ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇರುವುದರಿಂದ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಅನುದಾನಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.

ಕಳೆದ ಡಿಸೆಂಬರ್‌ನಲ್ಲಿ ಪ್ರಸ್ತಾವನೆ

ಪಟ್ಟಣದ ಪುರಸಭೆಯನ್ನು ನಗರ ಸಭೆಯನ್ನಾಗಿಸಲು ಡಿಸೆಂಬರ್ ತಿಂಗಳಿನಲ್ಲಿ ಆಗಿನ ಅಧ್ಯಕ್ಷ ಕೋಮಲ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪುರಸಭೆಯನ್ನು ನಗರ ಸಭೆಯನ್ನಾಗಿಸಲು ೨೭ ವಾರ್ಡುಗಳ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಅದರಂತೆ ರಾಜ್ಯ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸಚಿವರು ಸರ್ವಾನುಮತದಿಂದ ಸಮ್ಮತಿ ನೀಡಿ ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮೋದಿಸಿದ್ದರು. ಸರ್ಕಾರ ಗೆಜೆಟ್ ನೋಟಿಫಿಕೇಷನ್ ನಂತರ ಪುರಸಭೆ ನಗರಸಭೆಯನ್ನಾಗಿ ಮೇಲ್ದೇರ್ಜೆಗೇರಿಸಿ ಅದೇಶಿಸಿರುವುದು ಪಟ್ಟಣದ ಜನತೆಗೆ ಸಂತಸ ತಂದಿದೆ ಎಂದರು.ನಗರಸಭೆಗೆ ಅನುದಾನ ಹೆಚ್ಚು

ಆಸಕ್ತಿ ಇದ್ದರೆ ಏನಾದರೂ ಸಾಧಿಸಬಹುದು ಆ ಶಕ್ತಿ ದೇವರು ನನಗೆ ನೀಡಿದ್ದಾನೆ. ಕಡಿಮೆ ಅವಧಿಯಲ್ಲಿ ಪುರಸಭೆಯನ್ನು ನಗರ ಸಭೆಯನ್ನಾಗಿಸಲು ಸರ್ಕಾರ ಅದೇಸಿಶಿರುವುದು ನನಗೆ ತುಂಬಾ ಖುಷಿ ತಂದಿದೆ. ಪುರಸಭೆಯು ನಗರ ಸಭೆಯಾಗುವುದರಿಂದ ಪೌರಕಾರ್ಮಿಕರ ಹಾಗೂ ಸಿಬ್ಬಂದಿ ಸಂಖ್ಯೆ ಈಗಿನ ೯೭ ರಿಂದ ೨೯೬ ಕ್ಕೆ ಏರಿಕೆಯಾಗಲಿದೆ. ಪುರಸಭೆಯು ನಗರಸಭೆ ಮೇಲ್ದರ್ಜೆಗೆ ಏರಿರುವುದರಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅನುದಾನಗಳು ಯೋಜನೆಗಳು ಸವಲತ್ತುಗಳು ಹೆಚ್ಚಾಗುತ್ತವೆ ಎಂದರು.

ಅಲ್ಲದೆ ವಾರ್ಡುಗಳ ಸಂಖ್ಯೆಯು ಹೆಚ್ಚಳವಾಗಿ ಸದಸ್ಯರ ಸಂಖ್ಯೆಯು ಸಹ ಹೆಚ್ಚಾಗುತ್ತದೆ. ಈಗಿನ ಪುರಸಭೆಯ ಬಜೆಟ್ ಗಾತ್ರ ಸಹ ಏರಿಕೆಯಾಗಲಿದೆ. ಈಗಾಗಲೇ ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ೨೨ ಕೋಟಿ ರೂಗಳು ಮಂಜುರಾತಿ ಸಿಕ್ಕಿದೆ. ರಂಗಮಂದಿರ ಅಭಿವೃದ್ಧಿ ಬಸ್ ನಿಲ್ದಾಣ ಕೆರೆ ಅಭಿವೃದ್ಧಿ ಉದ್ಯಾನವನ ವಿವಿಧ ವಾರ್ಡುಗಳಲ್ಲಿ ಸಮುದಾಯ ಭವನಗಳು ನಿರ್ಮಾಣ ಇತರೆ ಅಭಿವೃದ್ಧಿ ಕಾಮಗಾರಿಗಳು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ಗಡೆರಿಸಲು ಬಜೆಟ್ ನಲ್ಲಿ ೪೫ ಕೋಟಿ ನೀಡಲಾಗಿದೆ ಇಂಡಸ್ಟ್ರಿಯಲ್ ಕಾರಿಡಾರ್ ರಸ್ತೆಗೆ ೩೨೦೦ ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿದೆ ಎಂದರು.

ಪ್ರಾಧಿಕಾರದ ಅನುದಾನ

ಈಗಾಗಲೇ ಪ್ರಾಧಿಕಾರ ಸಹ ಆರ್ಥಿಕವಾಗಿ ಶಕ್ತಿಯುತವಾಗಿರುವುದರಿಂದ ಪ್ರಾಧಿಕಾರದ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ವಿ ರೂಪ, ತಾಪಂ ಇಒ ವಿ. ಕೃಷ್ಣಪ್ಪ, ಪುರಸಭಾ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಏ ರಾಜಪ್ಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಹಮ್ಮದ್ ನಹೀಮ್ ಮುಲ್ಲಾ, ಮುಖ್ಯ ಅಧಿಕಾರಿ ಎಬಿ ಪ್ರದೀಪ್, ಪುರಸಭೆಯ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ಶಿರ್ಷಿಕೆ-11ಕೆ.ಎಂ.ಎಲ್‌.ಆರ್.2-------- ಮಾಲೂರಿನ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ ಕಾರಣ ಶಾಸಕ ನಂಜೇಗೌಡ ಅವರು ನಗರಸಭೆ ನಾಮಫಲಕ ಅನಾವರಣ ಮಾಡಿದರು.