ಕ್ರೀಡೆಯಿಂದ ಮಾನಸಿಕ ಸದೃಢತೆ:ಶಿವಾನಂದ ಸಾರವಾಡೆ

| Published : Feb 10 2024, 01:52 AM IST

ಸಾರಾಂಶ

ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಉತ್ಸಾಹದಿಂದ ಭಾಗವಹಿಸುವುದು

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುತ್ತೇವೆ. ಆದರೆ, ಇಂದಿನ ಮಕ್ಕಳು ಮೊಬೈಲ್‌ ದಾಸರಾಗಿದ್ದಾರೆ ಎಂದು ಬೆಳಗಾವಿ ವಲಯ ವಿ.ಟಿ.ಯು ಪ್ರಾದೇಶಿಕ ಅಧಿಕಾರಿ ಶಿವಾನಂದ ಸಾರವಾಡೆ ಹೇಳಿದರು.

ಶುಕ್ರವಾರ ಪಟ್ಟಣದ ಕೆಎಲ್ಇ ಇಂಜನಿಯರಿಂಗ್ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ವಲಯ ಅಂತರ್‌ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿ ಉದ್ದೇಶಿಸಿ ಅವರು ಮಾತನಾಡಿದರು.

ಪಂದ್ಯಾವಳಿ ಉದ್ಘಾಟಿಸಿದ ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಉತ್ಸಾಹದಿಂದ ಭಾಗವಹಿಸುವುದು ಮುಖ್ಯ ಎಂದರು.

ಮುಖ್ಯ ಅಥಿತಿಗಳಾಗಿ ಖಾನಾಪುರದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ದೈಹಿಕ ನಿರ್ದೇಶಕ ಉಮೇಶ ಕಾಂಬಳೆ, ವಾಲಿಬಾಲ್ ರಾಜ್ಯಮಟ್ಟದ ಅರ್ಹ ತೀರ್ಪುಗಾರರು ಆಗಮಿಸಿದ್ದರು.

ರಾಜು ಚೌಗಲೆ, ಯಲ್ಲಪ್ಪಾ ಮಾಚಕನೂರ, ಲಿಂಗರಾಜ ಯಮನೂರ, ಅಕ್ಷಯ ಕುಲಗುಡೆ, ಪ್ರವೀಣಕುಮಾರ ವಾಘಮೋರೆ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಡಾ. ಅರವಿಂದ ದೇಶಿ ಮತ್ತು ಗಣಪತಿ ಹುಲಗೆಜ್ಜಿ ಸಂಯೋಜಿಸಿದರು.

ಪಂದ್ಯಾವಳಿಯಲ್ಲಿ ವಿವಿಧ ಕಾಲೇಜುಗಳ 13 ತಂಡಗಳು ಭಾಗವಹಸಿದ್ದು, ಎಸ್‌ಡಿಎಂ ಕಾಲೇಜ ಆಫ್ ಇಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಾಜಿ, ಧಾರವಾಡ ಪ್ರಥಮ ಹಾಗೂ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ, ಬೆಳಗಾವಿ ದ್ವಿತೀಯ ಸ್ಥಾನ ಗಳಿಸಿತು.

ಅಂಜಲಿ ಮಠದ ಸ್ವಾಗತಿಸಿದರು. ಸೃಷ್ಟಿ ಅರಬಾಳೆ ನಿರೂಪಿಸಿದರು. ಪದ್ಮರಾಜ ಮೆಕ್ಕಳಕಿ ವಂದಿಸಿದರು.