ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಖನಿಜ ಪ್ರತಿಷ್ಠಾನ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ, ಜಿಲ್ಲೆಯಲ್ಲಿ ಕಳೆದ ೨೦೧೫-೧೬ನೇ ಸಾಲಿನಿಂದ ೨೦೨೨-೨೩ನೇ ಸಾಲಿನವರೆಗೆ ಒಟ್ಟು ೧೪.೩೫ ಕೋಟಿ ರು. ಸಂಗ್ರಹಿಸಿದ್ದು ಇದನ್ನು ಗಣಿಬಾಧಿತ ಪ್ರದೇಶ ಅಭಿವೃದ್ಧಿಗೆ ವೆಚ್ಚ ಮಾಡದೆ ಡಿ.ಎಂ.ಎಫ್.ಟಿ. ಹಣವನ್ನು ಮನಬಂದಂತೆ ಖರ್ಚು ಮಾಡಿದ್ದಾರೆ ಎಂದು ಗುತ್ತಿಗೆದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಡಿ. ಮುನೇಶ್ ಆರೋಪಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ೪ ತಾಲೂಕುಗಳ ೫೦ ಹಳ್ಳಿಗಳನ್ನು ನೇರ ಗಣಿಬಾಧಿತ ಪ್ರದೇಶವೆಂದು ಗುರುತಿಸಿದೆ, ಮಾಲೂರಿನ ಟೇಕಲ್ ಹೋಬಳಿಯ ೨೬ ಗ್ರಾಮಗಳು, ಕೋಲಾರ ತಾಲೂಕಿನ ೧೪ ಗ್ರಾಮಗಳು, ಮುಳಬಾಗಿಲು ತಾಲೂಕಿನ 9 ಗ್ರಾಮಗಳು ಮತ್ತು ಶ್ರೀನಿವಾಸಪುರದ ೧ ಹಳ್ಳಿ ಸೇರಿದಂತೆ ೫೦ ಗ್ರಾಮಗಳಾಗಿದ್ದು ಇವುಗಳನ್ನು ಅಭಿವೃದ್ಧಿಪಡಿಸದೆ ಗಣಿಬಾಧಿತ ಪ್ರದೇಶಗಳನ್ನು ಹೊರತುಪಡಿಸಿ ಮುಂದುವರೆದ ಬಡಾವಣೆಗಳ ರಸ್ತೆಗಳು ಮತ್ತು ಇತರೆ ಕಾಮಗಾರಿಗಳಿಗೆ ಬಳಸಲಾಗಿದೆ. ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷ ಡಾ. ಮಂಜುನಾಥ್ ಮಾತನಾಡಿ, ಜಿಲ್ಲಾ ಖನಿಜ ಪ್ರತಿಷ್ಠಾಪನಾ ಟ್ರಸ್ಟ್ (ಡಿ.ಎಂ.ಎಫ್.ಟಿ.) ಸಮಿತಿ ರಚಿಸಿದ್ದು, ಈ ಸಮಿತಿಯ ಅಧ್ಯಕ್ಷ ಜಿಲ್ಲಾಧಿಕಾರಿಗಳಾಗಿರುವುದರಿಂದ ಈ ಸಮಿತಿಯ ಆಗುಹೋಗುಗಳಿಗೆ ಅವರು ಪೂರ್ಣ ಜವಾಬ್ದಾರಿಯಾಗಿದ್ದಾರೆ ಎಂದು ಪ್ರತಿಪಾದಿಸಿದರು, ಕಾನೂನಾತ್ಮಕ ಹೋರಾಟ
ಹಲವಾರು ಕಾಮಗಾರಿಗಳಿಗೆ ಎರಡೆರಡು ಬಾರಿ ಬಿಲ್ ಮಾಡಿರುವುದು ಹಾಗೂ ಯಾರಿಗೆ ಕಾಮಗಾರಿ ಮಾಡಲು ನೀಡಿದ್ದಾರೆ ಎಂಬುದನ್ನು ರಹಸ್ಯವಾಗಿಟ್ಟು ಕೊಂಡಿದ್ದು ಆರ್.ಟಿ.ಐ. ನಲ್ಲಿ ಕೊಡಲು ಬರುವುದಿಲ್ಲ ಎಂದು ಎಂಡಾರ್ಸ್‌ಮೆಂಟ್ ನೀಡಿದ್ದಾರೆ. ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿ ಕಾನೂನಾತ್ಮಕ ಹೋರಾಟ ಮಾಡುವುದಾಗಿ ತಿಳಿಸಿದರು.