ದೇಶಕ್ಕೆ ಮೋದಿ ನಾಯಕತ್ವ ಅನಿವಾರ್ಯ

| Published : Apr 20 2024, 01:11 AM IST

ಸಾರಾಂಶ

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಲ್ಲಿಯೇ ಮುಳುಗಿದೆ. ಅಧಿಕಾರಕ್ಕೆ ಬಂದ ನಂತರ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ.

ಕನ್ನಡಪ್ರಭ ವಾರ್ತೆ ಲೋಕಾಪುರ

ದೇಶಕ್ಕೆ ಮೋದಿ ನಾಯಕತ್ವ ಅನಿವಾರ್ಯವಾಗಿದೆ. ಅವರ ನಾಯಕತ್ವದಲ್ಲಿ ದೇಶ ಸುಭದ್ರವಾಗಿರಲು ಸಾಧ್ಯ. ಹೀಗಾಗಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗೆಲುವಿಗೆ ಎರಡೂ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ಈ ಬಾರಿ ಪಿ.ಸಿ.ಗದ್ದಿಗೌಡರ ಅತ್ಯಧಿಕ ಮತಗಳಿಂದ ಗೆಲವು ಸಾಧಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಆರ್‌.ಎಸ್.ತಳೇವಾಡ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಲ್ಲಿಯೇ ಮುಳುಗಿದೆ. ಅಧಿಕಾರಕ್ಕೆ ಬಂದ ನಂತರ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಈ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನವನ್ನು ಬಳಸುವ ಮೂಲಕ ಆ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ದೂರಿದರು.

ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ದೇಶದ ಭದ್ರತೆಗಾಗಿ ಮೋದಿ ಅವಶ್ಯವಾಗಿದ್ದಾರೆ. ನಿಜ ಭಾರತದ ಕನಸು ನನಸಾಗಲು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮತ್ತೊಮ್ಮೆ ನರೇಂದ್ರ ಮೋದಿಯವರ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಪಿ.ಸಿ.ಗದ್ದಿಗೌಡರ ಅವರನ್ನು ಮತ್ತೊಮ್ಮೆ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಶ್ವಕರ್ಮ ಯೋಜನೆ ಸಂಚಾಲಕ ಕುಮಾರ ಹುಲಕುಂದ ಮಾತನಾಡಿ, ಕಳೆದ 20 ವರ್ಷಗಳಿಂದ ಸಂಸದರಾಗಿ ಕೆಲಸ ಮಾಡಿರುವ ಪಿ.ಸಿ ಗದ್ದಿಗೌಡರು ಯಾವುದೇ ಕಪ್ಪು ಚುಕ್ಕಿ ಹೊಂದಿಲ್ಲ. ಅವರು ಪ್ರಮಾಣಿಕ ರಾಜಕಾರಣಿ. ಎರಡು ದಶಕಗಳಿಂದ ಉತ್ತಮ ಸಂಸದರಾಗಿ ಕಾರ್ಯ ನಿರ್ವಹಿಸಿರುವ ಗದ್ದಿಗೌಡರನ್ನು ಮತ್ತೊಮ್ಮೆ ಗೆಲ್ಲಿಸಬೇಕು. ದೇಶದಲ್ಲಿ ಬಿಜೆಪಿ 370 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಚಿದಾನಂದ ಪಂಚಕಟ್ಟಿಮಠ, ಯಮನಪ್ಪ ಹೊರಟ್ಟಿ, ಬಿ.ಎಲ್.ಬಬಲಾದಿ, ವಿರೇಶ ಪಂಚಕಟ್ಟಿಮಠ, ಶಿವನಗೌಡ ಪಾಟೀಲ, ಹಣಮಂತ ಅಮ್ಮಲಝರಿ, ಕಾಶಲಿಂಗ ಮಾಳಿ, ವಿನೋದ ಗಂಗಣ್ಣವರ, ಗುರುರಾಜ ಪಂಚಕಟ್ಟಿಮಠ, ಪ್ರವೀಣ ಗಾಣಗೇರ, ಜಾಕೀರ ಅತ್ತಾರ, ಪ್ರಕಾಶ ಕರಡಿಗುಡ್ಡ, ಈರಪ್ಪ ಸೊನ್ನದ, ಲೋಕಾಪುರ, ಭಂಟನೂರ, ದಾದನಟ್ಟಿ, ವರ್ಚಗಲ್, ನಾಗಣಾಪುರ, ವೆಂಕಟಾಪುರ, ಜಾಲಿಕಟ್ಟಿ, ಚೌಡಾಪುರ, ಚಿಕ್ಕೂರ, ಚಿತ್ರಭಾನುಕೋಟಿ, ಹೆಬ್ಬಾಳ, ಮುದ್ದಾಪುರ ಹೊಸಕೊಟಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.