ಜನರ ಕಲ್ಯಾಣಕ್ಕಾಗಿ ಮೋದಿ ಶ್ರಮ: ಪಿ.ಸಿ.ಗದ್ದಿಗೌಡರ

| Published : Apr 21 2024, 02:21 AM IST

ಸಾರಾಂಶ

ನರೇಂದ್ರ ಮೋದಿ ಯೋಜನೆಗಳನ್ನು ಹೇಳುತ್ತ ಹೋದರೆ ಒಂದು ವರ್ಷವೂ ಸಾಲದು. ಈ ದೇಶದಲ್ಲಿ ಯಾರೂ ಬಡತನದಿಂದ ಇರಬಾರದು.

ಕನ್ನಡಪ್ರಭ ವಾರ್ತೆ ಕಲಾದಗಿ

ಪ್ರಧಾನಿ ನರೇಂದ್ರ ಮೋದಿ ಕಳೆದ ೧೦ ವರ್ಷದಲ್ಲಿ ಒಂದೂ ದಿನವೂ ರಜೆ ಪಡೆಯದೆ ದೇಶದ ಅಭಿವೃದ್ಧಿಗೆ ಮತ್ತು ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹೇಳಿದರು.

ಗೊವಿಂದಕೊಪ್ಪ ಹಾಗೂ ಚಿಕ್ಕಶೆಲ್ಲಿಕೇರಿ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುತ್ತಿರುವುದು ನಮ್ಮ ಭಾರತ ದೇಶ. ನರೇಂದ್ರ ಮೋದಿ ಯೋಜನೆಗಳನ್ನು ಹೇಳುತ್ತ ಹೋದರೆ ಒಂದು ವರ್ಷವೂ ಸಾಲದು. ಈ ದೇಶದಲ್ಲಿ ಯಾರೂ ಬಡತನದಿಂದ ಇರಬಾರದು. ಈಗಾಗಲೇ ೨೫ ಕೋಟಿ ಜನ ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ಸರ್ಕಾರದ ಅನೇಕ ಕಾರ್ಯಕ್ರಮಗಳ ಲಾಭ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗಲು ಎಲ್ಲರೂ ಬ್ಯಾಂಕ್ ಅಕೌಂಟ್‌ ಹೊಂದುವಂತೆ ಮಾಡಿದರು ಎಂದರು.

ವಿಧಾನ ಪರಿಷತ್ ಸದಸ್ಯ ಹನಮಂತ.ಆರ್.ನಿರಾಣಿ, ಹೂವಪ್ಪ ರಾಠೋಡ, ಕೆ.ಆರ್‌.ಶಿಲ್ಪಿ ಮಾತನಾಡಿದರು. ಕೆ.ಎಲ್.ಬಿಲಕೇರಿ, ಲಕ್ಷ್ಮಣ ಗೌಡ ಗೌಡರ, ವಿಠ್ಠಲ ಶಿವನಿಚ್ಚಿ, ಶ್ರೀಧರ ವಾಘ್, ಬಶೆಟ್ಟಿ ಅಂಗಡಿ, ಪ್ರವೀಣ ಅರಕೇರಿ, ವೆಂಕಟೇಶ ರಂಗನ್ನವರ್, ರಾಜು ಪೂಜಾರಿ ಇನ್ನಿತರರು ಇದ್ದರು.