ಸಾರಾಂಶ
ಈ ತರಬೇತಿ ಕೇಂದ್ರದಿಂದ ಯುವಕರು ಸ್ವ ಉದ್ಯೊಗದತ್ತ ಮುಖಮಾಡುವ ದಿಸೆಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ನುರಿತ ಶಿಕ್ಷಕರಿಂದ ಕೂಡಿದ ಈ ತರಬೇತಿ ಕೇಂದ್ರ ಮಾದರಿಯಾಗಲಿದೆ .
ಕನ್ನಡಪ್ರಭ ವಾರ್ತೆ ಯಮಕನಮರಡಿ
2004 ರಲ್ಲಿ ಆರಂಭವಾದ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಲಿತ ಎಲ್ಲ 360 ವಿದ್ಯಾರ್ಥಿಗಳು ಉದ್ಯೋಗದಲ್ಲಿರುವುದು ವಿಶೇಷ. ಈ ಕೇಂದ್ರ ಮುಂಬರುವ ದಿನಗಳಲ್ಲಿ ಹಲವಾರು ಕುಟುಂಬಗಳಿಗೆ ಆಶ್ರಯವಾಗಲಿದೆ ಎಂದು ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಅವರು ಹತ್ತರಗಿ ಆನಂದಪೂರದಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ [ಐ.ಟಿ.ಐ] ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಕೇಂದ್ರದಲ್ಲಿ ಫಿಟರ್ ಹಾಗೂ ಇಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ ತರಬೇತಿ ವಿಭಾಗಗಳನ್ನು ಪ್ರಾರಂಭಿಸುವ ಗುರಿ ಹೊಂದಿದ್ದು. ಈ ತರಬೇತಿ ಕೇಂದ್ರದಿಂದ ಯುವಕರು ಸ್ವ ಉದ್ಯೊಗದತ್ತ ಮುಖಮಾಡುವ ದಿಸೆಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ನುರಿತ ಶಿಕ್ಷಕರಿಂದ ಕೂಡಿದ ಈ ತರಬೇತಿ ಕೇಂದ್ರ ಮಾದರಿಯಾಗಲಿದೆ ಎಂದರು. ಪ್ರಥಮದಲ್ಲಿ ನಾಗನೂರದ ಬಾಳಸಾಹೇಬ ಪಾಟೀಲರ ಮನೆಯಲ್ಲಿ ಪ್ರಾರಂಭಗೊಂಡ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ, ನೂತನ ಕಟ್ಟಡದ ಸ್ಥಳಕ್ಕಾಗಿ ವಿಳಂಬವಾಯ್ತು. ನಂತರದ ದಿನಗಳಲ್ಲಿ ಈ ವಲಯದಲ್ಲಿ ಉತ್ತಮವಾದ ಕೈಗಾರಿಕಾ ತರಬೇತಿ ಕೇಂದ್ರ ಸುಮಾರು ₹2 ಕೋಟಿ ವೆಚ್ಚದಲ್ಲಿ ಉದ್ಘಾಟನೆಯಾಗಿದೆ ಹೇಳಿದರು.ಈ ವೇಳೆ ತರಬೇತಿ ಕೇಂದ್ರದ ಜಂಟಿ ನಿದೇರ್ಶಕ ಬಸವಪ್ರಭು ಹಿರೇಮಠ, ಸಹಾಯಕ ನಿದೇಶಕ ರವಿಂದ್ರ ಜೇಬೆರಿ, ಹತ್ತರಗಿ ಗ್ರಾ,ಪಂ ಅಧ್ಯಕ್ಷ ಸಮೀರ ಬೇಪಾರಿ, ರವಿಂದ್ರ ಜಿಂಡ್ರಳಿ, ಈರಣ್ಣಾ ಬಿಸಿರೊಟ್ಟಿ ದಸ್ತಗೀರ ಬಸ್ಸಾಪೂರಿ, ಮಹಾದೇವ ಪಟೊಳಿ, ಪರಶುರಾಮ ಡಗ್, ಜೋಮಲಿಂಗ ಪಟೋಳಿ, ನಾಗರಾಜ ದುಂದುರ, ಪಾಂಡು ಮನ್ನಿಕೇರಿ, ಬಸವರಾಜ ಜತ್ತಿ, ಶಶಿಕಾಂತ ಹಟ್ಟಿ, ಬಸವರಾಜ ಅತ್ತಿಮರದ, ಸಂತೋಷ ಅತ್ತಿಮರದ, ಪ್ರಾಚಾರ್ಯ ಎನ್,ಬಿ,ದಾಸ್ತಿಕೊಪ್ಪ ಹಾಗೂ ಕೈಗಾರಿಕಾ ತರಬೇತಿ ಕೇಂದ್ರದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.