ಪ್ಲಾಸ್ಟಿಕ್‌ ಬಳಸದಂತೆ ಬೀದಿ ಬದಿ ವರ್ತಕರಿಗೆ ಸೂಚನೆ

| Published : Dec 06 2024, 08:57 AM IST

ಪ್ಲಾಸ್ಟಿಕ್‌ ಬಳಸದಂತೆ ಬೀದಿ ಬದಿ ವರ್ತಕರಿಗೆ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನರಾಯಪಟ್ಟಣ ಪಟ್ಟಣ ಏಳು ಕಿಲೋಮೀಟರ್ ಮುಖ್ಯರಸ್ತೆಯನ್ನು ಹೊಂದಿದ್ದು, ಬೀದಿ ಬದಿ ವ್ಯಾಪಾರಿಗಳೇ ರಸ್ತೆಗಳಲ್ಲಿ ಪ್ರಭುತ್ವ ಸಾಧಿಸಿದ್ದಾರೆ. ಅವರು ರಸ್ತೆಗೆ ಕಸ ಹಾಕಬಾರದು. ರಸ್ತೆಯನ್ನು ಒತ್ತುವರಿ ಮಾಡಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಘನತಾಜ್ಯ ನಿರ್ವಹಣೆಗಾಗಿ ನಲ್ಲೂರಿನಲ್ಲಿ ಸಂಸ್ಕರಣಾ ಘಟಕ ನಿಯೋಜನೆ ಮಾಡಲಾಗಿದೆ. ಕಸ ಹಾಕುವ ಬಗ್ಗೆ ಎಂಟು ದೂರುಗಳು ವಿವಿಧ ಶಾಲಾ ಇಲಾಖೆಗಳಿಂದ ಬಂದಿವೆ. ಸ್ವಚ್ಛತೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣವನ್ನು ಸ್ವಚ್ಛ ರಸ್ತೆ ಮತ್ತು ಒತ್ತುವರಿ ಮಾಡದೆ ಪ್ಲಾಸ್ಟಿಕ್ ರಹಿತ ಪಟ್ಟಣವನ್ನಾಗಿ ಮಾಡುವಂತೆ ಬೀದಿ ಬದಿ ವ್ಯಾಪಾರಿಗಳಿಗೆ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ತಿಳಿಸಿದರು.

ಪುರಸಭೆ ಆವರಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ, ಪಿಎಂ ಸ್ವ ನಿಧಿ ಯೋಜನೆ, ಜೀವನ್ ಸುರಕ್ಷಾ, ಈ ಶ್ರಮ, ಜನ್ ಧನ್, ಜನನಿ ಸುರಕ್ಷಾ, ಮಾತೃ ವಂದನ, ಹಾಗೂ ಒಂದು ದೇಶ ಒಂದು ಪಡಿತರ ಚೀಟಿ ಬಗ್ಗೆ ವಿಶೇಷ ಮಾಹಿತಿ ನೀಡುವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪಟ್ಟಣ ಏಳು ಕಿಲೋಮೀಟರ್ ಮುಖ್ಯರಸ್ತೆಯನ್ನು ಹೊಂದಿದ್ದು, ಬೀದಿ ಬದಿ ವ್ಯಾಪಾರಿಗಳೇ ರಸ್ತೆಗಳಲ್ಲಿ ಪ್ರಭುತ್ವ ಸಾಧಿಸಿದ್ದಾರೆ. ಅವರು ರಸ್ತೆಗೆ ಕಸ ಹಾಕಬಾರದು. ರಸ್ತೆಯನ್ನು ಒತ್ತುವರಿ ಮಾಡಬಾರದು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಘನತಾಜ್ಯ ನಿರ್ವಹಣೆಗಾಗಿ ನಲ್ಲೂರಿನಲ್ಲಿ ಸಂಸ್ಕರಣಾ ಘಟಕ ನಿಯೋಜನೆ ಮಾಡಲಾಗಿದೆ. ಕಸ ಹಾಕುವ ಬಗ್ಗೆ ಎಂಟು ದೂರುಗಳು ವಿವಿಧ ಶಾಲಾ ಇಲಾಖೆಗಳಿಂದ ಬಂದಿವೆ. ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ವಿಜಯ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳ ಸಾಲ ಮರುಪಾವತಿಯಲ್ಲಿ ಯಾವುದೇ ನ್ಯೂನ್ಯತೆ ಇಲ್ಲವಾಗಿದೆ, ಶೇಕಡ ೧೦೦ರಷ್ಟು ಕಂತು ಪಾವತಿಯಾಗುತ್ತಿದೆ, ಜೀರೋ ಅಕೌಂಟ್, ಹಾಗೂ ಖಾತೆದಾರರ ವಿಮೆ ಬಗ್ಗೆ ಮಾಹಿತಿ ನೀಡಿದರು.

ಪಿಎಂ ಸ್ವ ನಿಧಿ ಯೋಜನೆ ಬಗ್ಗೆ ಜಿಲ್ಲಾಧಿಕಾರಿ ಕೋಮಲ ಮಾತನಾಡಿ, ಚನ್ನರಾಯಪಟ್ಟಣ ತಾಲೂಕಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಶೇಕಡ ೯೮ ರಷ್ಟು ಮಂದಿಗೆ ಸಾಲ ನೀಡಿಕೆಯಾಗಿದೆ ಎಂದರು. ಪುರಸಭೆ ಅಧ್ಯಕ್ಷ ಬನಶಂಕರಿ ರಘು ಮಾತನಾಡಿದರು.

ಅಧಿಕಾರಿಗಳು ವ್ಯಾಪಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಆಹಾರ ಇಲಾಖೆಯ ಅಧಿಕಾರಿ ಹೇಮಂತ್, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಸಿಡಿಪಿಓ ಅರ್ಚನಾ, ಕೆನರಾ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಸಾರಂಚಿ, ಪುರಸಭೆ ಉಪಾಧ್ಯಕ್ಷೆ ರಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಪುರಸಭೆ ಶಾರದಮ್ಮ, ಆರೋಗ್ಯ ಅಧಿಕಾರಿ ರಾಜು ಮಂಜುನಾಥ್, ಪರಿಸರ ಇಂಜಿನಿಯರ್ ಕಾವ್ಯ ಮುಂತಾದವರಿದ್ದರು.