ಸಾರಾಂಶ
ಸಿಎಲ್‌ಇ ಸಂಸ್ಥೆ ಯಾವಾಗಲೂ ಗುಣಾತ್ಮಕ ಹಾಗೂ ಶಿಸ್ತಿನ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿದಾದಿಯರ ವೃತ್ತಿಯಲ್ಲಿ ಶುಶ್ರೂಷಾ ಕೌಶಲ್ಯಗಳನ್ನು ಸಮರ್ಪಕವಾಗಿ ರೂಢಿಸಿಕೊಂಡು ಜನಸೇವೆಗೆ ಬದ್ದರಾಗಬೇಕು, ನರ್ಸಿಂಗ್ ವೃತ್ತಿ ನೊಬೆಲ್ ಪ್ರೋಪೇಶನ್ ಎಂದು ಡಾ.ಸಂಧ್ಯಾ ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಸಿಎಲ್‌ಇ ಸೊಸೈಟಿಯ ಶಾಂತಾದೇವಿ ಎಂ. ಕವಟಗಿಮಠ ನರ್ಸಿಂಗ್ ಆಫ್ ಸೈನ್ಸ್ ಕಾಲೇಜಿನಲ್ಲಿ ಆಯೋಜಿಸಿದ ಬಿಎಸ್‌ಸಿ ನರ್ಸಿಂಗ್ ಪ್ರಥಮ ಬ್ಯಾಚಿನ ದೀಪದಾನ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನರ್ಸಿಂಗ್ ಕೋರ್ಸ್ ಆಯ್ದಕೊಂಡ ತಾವು ತಮ್ಮ ಜೀವನದುದ್ದಕ್ಕೂ ಅನಾರೋಗ್ಯ ಮತ್ತು ನಿರ್ಗತಿಕರಿಗೆ ಸೇವೆ ಮಾಡಲು ಸೇವಾ ಮನೋಭಾವನೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ ಸಿಎಲ್‌ಇ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ಕವಟಗಿಮಠ ಮಾತನಾಡಿ, ಅತ್ಯಂತ ಗೌರವದ ದಾದಿಯರ ವೃತ್ತಿಗೆ ಪುವೇಶಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ನಿಮ್ಮ ಶೈಕ್ಷಣಿಕ ಪಯಣ ಯಶಸ್ವಿಯಾಗಿ ಪೂರೈಸಿ, ವೃತ್ತಿಯಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ.
ಸಿಎಲ್‌ಇ ಸಂಸ್ಥೆ ಯಾವಾಗಲೂ ಗುಣಾತ್ಮಕ ಹಾಗೂ ಶಿಸ್ತಿನ ಶಿಕ್ಷಣಕ್ಕೆ ಒತ್ತು ನೀಡುತ್ತಿದೆ ಎಂದರು.ಎಸ್.ಬಿ. ತುಪ್ಪದ ಬಸವರಾಜ ಹುಕ್ಕೇರಿ ಅವರು ಉದಯೋನ್ಮುಖ ದಾದಿಯರಿಗೆ ನೈಟೆಂಗಿಲ್ ಪ್ರತಿಜ್ಞೆ ಭೋಧಿಸಿದರು. ಸಿಎಲ್‌ಇ ಸಂಸ್ಥೆಯ ಆಡಳಿತಾಧಿಕಾರಿ ಸಾಗರ ಬೀಸ್ಕೋಪ್, ಡಾ.ಸುರೇಶ ಉಕ್ಕಲಿ, ಎಸ್.ಎಸ್. ಮೆಟಗುಡ್ಡ, ಎಸ್.ಕೆ. ಕೊಟ್ರೆ, ಸ್ಮೀತಾ ಶಿಂಧೆ ಇದ್ದರು. ಸಿಎಲ್‌ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಸಿ.ಎಸ್.ಮಠಪತಿ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಕೋಳಿ ವಂದಿಸಿದರು.